Advertisement

ಇಬ್ಬರು ಎಎಸ್‌ಐ, ಇಬ್ಬರು ಮುಖ್ಯಪೇದೆ ಅಮಾನತು

02:39 PM Feb 27, 2022 | Team Udayavani |

ಯಳಂದೂರು: ರಸ್ತೆ ಅಪಘಾತ ಸಂಬಂಧ ಪೊಲೀಸ್‌ ಠಾಣೆಗೆ ನೀಡಿದ ದೂರನ್ನು ಸರಿಯಾಗಿ ನಿರ್ವಹಿಸಿಲ್ಲ ಹಾಗೂ ಡ್ರೆçವರ್‌ ಹೆಸರನ್ನು ಬದಲಿಸಲಾಗಿದೆ ಎಂಬವಿಚಾರವಾಗಿ ಯಳಂದೂರು ಪೊಲೀಸ್‌ ಠಾಣೆಯ ನಾಲ್ವರನ್ನು ಅಮಾನತುಗೊಳಿಸಲಾಗಿದೆ.

Advertisement

ಈ ವೇಳೆ ಕರ್ತವ್ಯದಲ್ಲಿದ್ದ ಎಎಸ್‌ಐಗಳಾದ ಮಧುಸೂದನ್‌, ನಾಗರಾಜು, ಹೆಡ್‌ ಕಾನ್ಸ್‌ಸ್ಟೇಬಲ್‌ಗಳಾದ ಪರಶಿವಮೂರ್ತಿ ಹಾಗೂ ಗೋಪಾಲ್‌ ಅವರನ್ನು ಅಮಾನತು ಮಾಡಲಾಗಿದೆ ಎಂದು ಜಿಲ್ಲಾ ಪೊಲೀಸ್‌ವರಿಷ್ಠಾಧಿಕಾರಿ ಟಿ.ಪಿ. ಶಿವಕುಮಾರ್‌ ಮಾಹಿತಿ ನೀಡಿದ್ದಾರೆ.

ಏನಿದು ಪ್ರಕರಣ?: ಫೆ.8 ರಂದು ಬೆಳಗ್ಗೆ 10.30 ಕ್ಕೆ ಪಟ್ಟಣದ ರಾಷ್ಟ್ರೀಯ ಹೆದ್ದಾರಿ 209 ರ ಬಳಿ ಇರುವ ಭಾರತ್‌ ಪೆಟ್ರೋಲ್‌ ಬಂಕ್‌ ಹತ್ತಿರ ಟಿವಿಎಸ್‌ ಬೈಕ್‌ನಲ್ಲಿ (ಕೆಎ 10 ಎಲ್‌ 8210) ಅಂಬಳೆ ಗ್ರಾಮದ ನಾಗಪ್ಪ (76) ಎಂಬುವವರು ತೆರಳುತ್ತಿದ್ದ ವೇಳೆ ಹಿಂಬದಿಯಿಂದ ಬಂದ ಕಾರು (ಕೆಎ10 ಎಂ5048) ಡಿಕ್ಕಿ ಹೊಡೆದಿತ್ತು. ಆ ವೇಳೆ ನಾಗಪ್ಪ ಗಾಯಗೊಂಡಿದ್ದರು. ಘಟನೆ ಕುರಿತು ಯಳಂದೂರು ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ದೂರುದಾರರು ನೀಡಿದ್ದ ದೂರಿನಲ್ಲಿ ಕಾರ್‌ ಡ್ರೈವರ್‌ನ ಹೆಸರನ್ನು ಬೇಕೆಂತಲೇ ಬದಲಿಸಲಾಗಿತ್ತು. ಅಲ್ಲದೆ ದೂರುದಾರರಿಗೆ ಇವರು ಸರಿಯಾಗಿ ಸ್ಪಂದಿಸಿಲ್ಲ ಎಂದುನಾಗಪ್ಪ ಅವರ ಪುತ್ರ ಡಾ| ಎನ್‌. ಲಿಂಗರಾಜು ಅವರು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗಳಿಗೆ ದೂರು ಸಲ್ಲಿಸಿದ್ದರು.

ಇದನ್ನು ಪರಿಶೀಲನೆ ನಡೆಸಿದ ಪೊಲೀಸ್‌ ವರಿಷ್ಠಾಧಿಕಾರಿಗಳು, ದೂರಿನಲ್ಲಿ ಲೋಪ ಕಂಡು ಬಂದಹಿನ್ನೆಲೆಯಲ್ಲಿ ಈ ನಾಲ್ವರನ್ನು ಸೇವೆಯಿಂದ ಅಮಾನತುಗೊಳಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next