ಅರುಣಾಚಲ ಪ್ರದೇಶ : ಗಿಡಮೂಲಿಕೆಗಳನ್ನು ಹುಡುಕಲು ಹೋದ ಅರುಣಾಚಲ ಪ್ರದೇಶದ ಇಬ್ಬರು ಬಾಲಕರು ಚೀನಾ ಗಡಿ ಬಳಿ ನಾಪತ್ತೆಯಾಗಿರುವ ವಿಚಾರ ಬೆಳಕಿಗೆ ಬಂದಿದೆ.
ಬಾಲಕರು ನಾಪತ್ತೆಯಾಗಿರುವ ಕುರಿತು ಬಾಲಕರ ಪೋಷಕರು ಠಾಣೆಗೆ ದೂರು ನೀಡಿದ್ದು ಕಳೆದ 56 ದಿನಗಳಿಂದ ಬಾಲಕರ ಸುಳಿವು ಇಲ್ಲ ಎಂದು ಕುಟುಂಬಸ್ಥರು ಹೇಳಿದ್ದಾರೆ. ಗಿಡಮೂಲಿಕೆಗಳನ್ನು ಹುಡುಕಿಕೊಂಡು ಬಾಲಕರು ಚೀನಾ ಗಡಿ ದಾಟಿ ಹೋಗಿರಬಹುದು ಎಂದು ಕುಟುಂಬ ಮೂಲಗಳು ಆತಂಕ ವ್ಯಕ್ತಪಡಿಸಿದೆ.
ಬತೇಲಂ ಟಿಕ್ರೋ ಮತ್ತು ಬೀಂಗ್ಸೋ ಮನ್ಯು ಎಂಬ ಬಾಲಕರೇ ನಾಪತ್ತೆಯಾದವರು, ಯುವಕರಿಗಾಗಿ ಅಧಿಕಾರಿಗಳು ಹುಡುಕಾಟ ನಡೆಸಿದ್ದಾರೆ.
ಈ ಬಗ್ಗೆ ಭಾರತೀಯ ಸೇನೆಯೊಂದಿಗೆ ಮಾತುಕತೆ ನಡೆಸಿದ ಅಧಿಕಾರಿಗಳು ಯುವಕರ ಪತ್ತೆಗಾಗಿ ರಕ್ಷಣಾ ಕಾರ್ಯಾಚರಣೆಗೆ ಮುಂದಾಗಿದ್ದಾರೆ.
ಆ.19 ರಂದು ಚಗ್ಲಗಾಮ್ ಪ್ರದೇಶಕ್ಕೆ ಗಿಡಮೂಲಿಕೆಗಳನ್ನು ಹುಡುಕಿಕೊಂಡು ಹೋಗಿದ್ದರು ಆದರೆ ಇದುವರೆಗೂ ಹಿಂತಿರುಗಿ ಬಾರದ ಕಾರಣ ಹುಡುಕಾಡಿದರೂ ಪತ್ತೆಯಾಗದ ಕಾರಣ ಪೊಲೀಸರಿಗೆ ದೂರು ನೀಡಿದ್ದಾರೆ. ಯುವಕರು ಚೀನಾ ಪ್ರದೇಶವನ್ನು ಪ್ರವೇಶಿಸಿರುವ ಶಂಕೆ ವ್ಯಕ್ತವಾಗಿದ್ದು, ಇವರನ್ನು ಚೀನಾ ಸೈನಿಕರು ವಶಕ್ಕೆ ಪಡೆದಿರಬಹುದು ಎಂಬ ಶಂಕೆಯೂ ವ್ಯಕ್ತವಾಗಿದೆ.
ಇದನ್ನೂ ಓದಿ : ಕಾರು ಖರೀದಿಸಿ ನಂ.ಪೇಟ್ ಬದಲಿಸಿ ಮಾರಾಟ: ಮೂವರ ಬಂಧನ