Advertisement

ಮುಜಫ‌ರನಗರ : ನಕಲಿ ನೋಟು ಚಲಾವಣೆ, ಇಬ್ಬರ ಬಂಧನ

03:40 PM Apr 22, 2017 | udayavani editorial |

ಮುಜಫ‌ರನರಗ : ಮುಜಫ‌ರನಗರ ಜಿಲ್ಲೆಯ ಗಂಗಾದಾಸ್‌ಪುರ ಗ್ರಾಮದಲ್ಲಿ 500 ರೂ. ಮತ್ತು 100 ರೂ. ಗಳ ಒಟ್ಟು 3,300 ರೂ ಮುಖಬೆಲೆಯ ನಕಲಿ ನೋಟುಗಳನ್ನು ಪೊಲೀಸರು ವಶಪಡಿಸಿಕೊಂಡು ಇಬ್ಬರನ್ನು ಬಂಧಿಸಿದ್ದಾರೆ.

Advertisement

ಬಂಧಿತರನ್ನು ನರಪಾಲ್‌ ಮತ್ತು ಮದನ್‌ಪಾಲ್‌ ಎಂದು ಗುರುತಿಸಲಾಗಿದೆ. ಇವರು ಈ ಗ್ರಾಮದಲ್ಲಿ ನಕಲಿ ನೋಟುಗಳ ಚಲಾವಣೆಯಲ್ಲಿ ತೊಡಗಿಕೊಂಡಿದ್ದಾರೆ ಎಂಬ ಖಚಿತ ಸುಳಿವಿನ ಮೇಲೆ ಪೊಲàಸರು ಅವರನ್ನು ಬಂಧಿಸಿರುವುದಾಗಿ ಎಸ್‌ಎಚ್‌ಒ ಆನಂದ್‌ ಮಿಶ್ರಾ ತಿಳಿಸಿದ್ದಾರೆ. 

ಪೊಲೀಸರು ಪ್ರಕರಣದ ತನಿಖೆ ನಡೆಸುತ್ತಿದ್ದಾರೆ. 
 

Advertisement

Udayavani is now on Telegram. Click here to join our channel and stay updated with the latest news.

Next