ವಿಜಯಪುರ: ಜಿಲ್ಲೆಯ ದೇವರಹಿಪ್ಪರಗಿ ಪಟ್ಟಣದಲ್ಲಿ ಅಕ್ತಮವಾಗಿ ತಂಬಾಕು ಬಳಸಿ ಮಾವಾ ತಯಾರಿಸುತ್ತಿದ್ದ ಇಬ್ಬರನ್ನು ಬಂಧಿಸಿರುವ ಪೊಲೀಸರು 61ಸಾವಿರ ರೂ. ಮೌಲ್ಯದ ವಸ್ತುಗಳನ್ನು ವಶಕ್ಕೆ ಪಡೆದಿದ್ದಾರೆ.
ಬಂಧಿತರನ್ನು ಖಾದರಬಾಷಾ ರಫೀಕಸಾಬ ಮುಳವಾಡ, ಬಸವರಾಜ ಅವಟಿ ಎಂದು ಗುರುತಿಸಿದ್ದು, ಮುಬಾರಕ್ ಮಕ್ಬುಲ್ ಬಾಗವಾನ್, ಸಂಗಮೇಶ ಸಣ್ಣಕ್ಕಿ ಎಂಬ ಇನ್ನಿಬ್ಬರು ಆರೋಪಿಗಳು ಪರಾರಿಯಾಗಿದ್ದಾರೆ.
ಸದರಿ ಆರೋಪಿಗಳು ಪರವಾನಿಗೆ ಇಲ್ಲದೇ ನಿಷೇಧಿತ ತಂಬಾಕು, ಸುಣ್ಣ, ಅಡಿಕೆ ಬಳಸಿ ಗುಟ್ಕಾ ಮಾದರಿಯಲ್ಲಿ ಮಾವಾ ಎಂಬ ವಸ್ತುವನ್ನು ತಯಾರಿಸುತ್ತಿದ್ದರು.
ಇದನ್ನೂ ಓದಿ :ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಮೇ 27 ರಿಂದ 31ರವರೆಗೆ ಸಂಪೂರ್ಣ ಲಾಕ್ಡೌನ್ : ಜಿಲ್ಲಾಧಿಕಾರಿ
ಜಿಲ್ಲಾ ಅಪರಾಧ ವಿಭಾಗದ ಸಿಪಿಐ ಸುರೇಶ ಬರಂಡೆಗುಂಬಳ ನೇತೃತ್ವದಲ್ಲಿ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಪೊಲೀಸರು, ಸಿಇಎನ್ ಪೊಲೀಸ್ ಠಾಣೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.