ಹುಣಸೂರು: ಮೋಜು ಮಸ್ತಿಗಾಗಿ ಬೈಕ್ ಕಳ್ಳತನ ಮಾಡುತ್ತಿದ್ದ ಇಬ್ಬರನ್ನು ಹುಣಸೂರು ನಗರ ಠಾಣೆ ಪೊಲೀಸರು ಬಂಧಿಸಿ, ಐದು ಬೈಕ್‌ಗಳನ್ನು ವಶಪಡಿಸಿಕೊಂಡಿದ್ದಾರೆ.
ಹುಣಸೂರು ತಾಲೂಕಿನ ತಟ್ಟೆಕೆರೆ ಹೊಸಕೋಟೆ ಗ್ರಾಮದ ನಿವಾಸಿ ರಾಮಸ್ವಾಮಿ (32) ಹಾಗೂ ಅಂಗಟಹಳ್ಳಿ ಗ್ರಾಮದ ನಿವಾಸಿ ಗಿರೀಶ (28) ಬಂಧಿತ ಆರೋಪಿಗಳು.
ಇಬ್ಬರು ಹನಗೋಡು ರಸ್ತೆಯ ನಿಲುವಾಗಿಲು ಕ್ರಾಸ್‌ನ ಕಿರು ಸೇತುವೆ ಮೆಲೆ ಬೆಳಂಬೆಳಗ್ಗೆ ಕುಳಿತು ಮದ್ಯಪಾನ ಮಾಡುತ್ತಿದ್ದನ್ನು ನೋಡಿದ ಅಪರಾಧ ವಿಭಾಗದ ಎಸ್.ಐ.ಲೋಕೇಶ್ ನೇತೃತ್ವದ ತಂಡ ಹಿಡಿದು ಪರಿಶೀಲನೆಗಾಗಿ ಬೈಕ್ ದಾಖಲಾತಿ ನೀಡಲು ಕೇಳಿದ್ದಾರೆ. ಈ ವೇಳೆ ತಡವರಿಸಿದ ಆರೋಪಿಗಳು ಪರಾರಿಯಾಗಲೆತ್ನಿಸಿದ್ದಾರೆ. ಕೂಡಲೇ ಅವರನ್ನು ಹಿಡಿದು ವಿಚಾರಣೆ ನಡೆಸಿದ ವೇಳೆ ಕಳ್ಳತನ ಬೆಳಕಿಗೆ ಬಂದಿದೆ.
ಬಜಾರ್ ರಸ್ತೆಯಲ್ಲಿ ಬೀರನಹಳ್ಳಿಯ ಹರೀಶ್ ಎಂಬುವರು ಬೈಕ್ ಕಳ್ಳತನವಾಗಿರುವ ಬಗ್ಗೆ ದೂರು ನೀಡಿದ್ದರು. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಡಿವೈಎಸ್‌ಪಿ ರವಿಪ್ರಸಾದ್ ಮಾರ್ಗದರ್ಶನದಲ್ಲಿ ನಗರ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಶ್ರೀನಿವಾಸ್ ನೇತೃತ್ವದಲ್ಲಿ ತಂಡ ರಚಿಸಿ ಆರೋಪಿಗಳನ್ನು ಬಂಧಿಸಿದ್ದಾರೆ.
ಇದನ್ನೂ ಓದಿ: ಕ್ಷುಲ್ಲಕ ಕಾರಣಕ್ಕೆ ಯುವಕರ ನಡುವೆ ಮಾರಾಮಾರಿ: ಓರ್ವ ಗಂಭೀರ
ತಂಡದಲ್ಲಿ ಅಪರಾಧ ವಿಭಾಗದ ಪಿ.ಎಸ್.ಐ. ಲೋಕೇಶ್, ಸಿಬ್ಬಂದಿಗಳಾದ ಎ.ಎಸ್.ಐ.ಪುಟ್ಟನಾಯಕ, ಸಿಬ್ಬಂದಿಗಳಾದ ಪ್ರಭಾಕರ, ಪ್ರಸಾದ್‌ಧರ್ಮಾಪುರ, ಇರ್ಫಾನ್, ಅನಿಲ್‌ಕುಮಾರ್, ರಘು ಭಾಗವಹಿಸಿದ್ದರು.