ದಾವಣಗೆರೆ: ಕೋವಿಡ್-19 ಪೀಡಿತರಿಗೆ ನೀಡಲಾಗುವ ರೆಮಿಡಿಸಿವರ್ ಇಂಜೆಕ್ಷನ್ ನ್ನು ಅಕ್ರಮ ಮಾರಾಟಕ್ಕೆ ಸಂಬಂಧಿಸಿದಂತೆ ಬಡಾವಣಾ ಠಾಣಾ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ.
ಜಿಲ್ಲಾ ಚಿಗಟೇರಿ ಆಸ್ಪತ್ರೆಯ ದಿನಗೂಲಿ ನೌಕರ ಗಣೇಶಪ್ಪ ಮತ್ತು ಫಾರ್ಮಾಸಿಸ್ಟ್ ಮಂಜುನಾಥ್ ಬಂಧಿತರು.
ಇದನ್ನೂ ಓದಿ:ಜಿಂದಾಲ್ ಆಕ್ಸಿಜನ್ ಮಹಾರಾಷ್ಟ್ರಕ್ಕೆ ಕಳುಹಿಸುವುದಕ್ಕೆ ಎಂ.ಬಿ.ಪಾಟೀಲ ಆಕ್ಷೇಪ
ರೆಮಿಡಿಸಿವರ್ ಇಂಜೆಕ್ಷನ್ ನ್ನು ಅಕ್ರಮವಾಗಿ ಮಾರಾಟ ಮಾಡುತ್ತಿರುವ ಬಗ್ಗೆ ಔಷಧ ನಿಯಂತ್ರಕಿ ಎಂ.ಎಸ್. ಗೀತಾ ಅವರಿಗೆ ಬಂದ ಖಚಿತ ಮಾಹಿತಿಯನ್ನು ಬಡಾವಣೆ ಠಾಣಾ ಪೊಲೀಸರ ಗಮನಕ್ಕೆ ತಂದಿದ್ದಾರೆ. ಕೂಡಲೇ ಕಾರ್ಯಾಚರಣೆಗೆ ಇಳಿದ ಪೊಲೀಸರು ಜಿಲ್ಲಾ ಆಸ್ಪತ್ರೆಯ ಹಿಂದಿನ ರಸ್ತೆಯಲ್ಲಿ ಆಟೋರಿಕ್ಷಾದಲ್ಲಿ ಇಂಜೆಕ್ಷನ್ ಮಾರುತ್ತಿದ್ದ ಗಣೇಶಪ್ಪನನ್ನು ಬಂಧಿಸಲಾಯಿತು. ಅವನು ನೀಡಿದ ಮಾಹಿತಿ ಮೇರೆಗೆ ಫಾರ್ಮಾಸಿಸ್ಟ್ ಮಂಜುನಾಥ್ ನನ್ನು ಬಂಧಿಸಿದರು.
ಬಂಧಿತರಿಂದ ಒಂಭತ್ತು ಇಂಜೆಕ್ಷನ್ ಹಾಗೂ 10 ಸಾವಿರ ರೂಪಾಯಿ ವಶಪಡಿಸಿಕೊಂಡಿದ್ದಾರೆ. ಬಡಾವಣೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.