Advertisement

ಐಪಿಎಲ್‌ ಐಡಿಯನ್ನೇ ನಕಲು ಮಾಡಿದ ಇಬ್ಬರ ಸೆರೆ! ದೆಹಲಿಯಲ್ಲಿ ಪಂದ್ಯ ವೀಕ್ಷಿಸಿದ್ದ ಭೂಪರು!

10:11 AM May 06, 2021 | Team Udayavani |

ಹೊಸದಿಲ್ಲಿ: ಕೋವಿಡ್ ಹಾವಳಿಯಿಂದ ಐಪಿಎಲ್‌ ಮುಂದೂಡಿಕೆಯಾಗಿದೆ. ಈಗ ಇತರೆ ಸುದ್ದಿಗಳು ಬೆಳಕಿಗೆ ಬರುತ್ತಿವೆ. ಮೊನ್ನೆ ಭಾನುವಾರ (ಮೇ 2) ರಾಜಸ್ಥಾನ ಮತ್ತು ಹೈದರಾಬಾದ್‌ ನಡುವೆ ನಡೆದ ಪಂದ್ಯದಲ್ಲಿ ವಿಚಿತ್ರ ಘಟನೆಯೊಂದು ನಡೆದಿದೆ.

Advertisement

ನಕಲಿ ಮಾನ್ಯತಾ ಗುರುತುಪತ್ರಬಳಸಿ, ಇಬ್ಬರು ವ್ಯಕ್ತಿಗಳು ದೆಹಲಿಯ ಅರುಣ್‌ ಜೇಟ್ಲಿ ಮೈದಾನದೊಳಕ್ಕೆ ಪ್ರವೇಶಿಸಿದ್ದಾರೆ. ವಿಐಪಿ ಗ್ಯಾಲರಿಯಲ್ಲಿ ಪಂದ್ಯ ನೋಡುತ್ತಿದ್ದ ಅವರನ್ನು ಬಂಧಿಸಲಾಗಿದೆ.

ಇದನ್ನೂ ಓದಿ:ಅತ್ಯಂತ ಸುರಕ್ಷಿತವೆನಿಸುವ ಸ್ಥಳಕ್ಕೆ ಮರಳಿದ್ದೇನೆ: ರವೀಂದ್ರ ಜಡೇಜಾ

ಬಂಧಿತರನ್ನು ಕ್ರಿಶನ್‌ ಗರ್ಗ್‌, ಮನೀಷ್‌ ಕನ್ಸಾಲ್‌ ಎಂದು ಗುರ್ತಿಸಲಾಗಿದೆ. ಬಹಳ ಹೊತ್ತಿನಿಂದ ಗ್ಯಾಲರಿಯಲ್ಲಿದ್ದ ಅವರನ್ನು ಪ್ರಶ್ನಿಸಿದಾಗ, ಸರಿಯಾದ ಉತ್ತರ ದೊರೆತಿಲ್ಲ. ಇದೇ ಕಾರಣದಿಂದ ವಶಕ್ಕೆ ತೆಗೆದುಕೊಳ್ಳಲಾಗಿದೆ

ಸ್ವತ್ಛತಾ ಸಿಬ್ಬಂದಿ ಬಳಸಿಕೊಂಡು ಬೆಟ್ಟಿಂಗ್

Advertisement

ಆಟಗಾರರನ್ನು ಬಳಸಿಕೊಂಡು, ಸಹಾಯಕ ಸಿಬ್ಬಂದಿ, ಮೈದಾನದ ಕ್ಯುರೇಟರ್‌ಗಳನ್ನು ಬಳಸಿಕೊಂಡೇ ಬೆಟ್ಟಿಂಗ್‌ ಮಾಡಿದ್ದನ್ನು ಕೇಳಿದ್ದೀರಿ. ಇಲ್ಲೊಂದು ಹೊಸ ವಿದ್ಯಮಾನ ಪತ್ತೆಯಾಗಿದೆ. ಇತ್ತೀಚೆಗೆ ದೆಹಲಿ ಅರುಣ್‌ ಜೇಟ್ಲಿ ಸ್ವತ್ಛತಾ ಸಿಬ್ಬಂದಿಯೊಬ್ಬರನ್ನು ಬಳಸಿಕೊಂಡು ಬೆಟ್ಟಿಂಗ್‌ ನಡೆಸಲಾಗಿದೆ! ಅಲ್ಲಿಗೆ ಬೆಟ್ಟಿಂಗ್‌ ಪಡೆ ತಮ್ಮ ಕಾರ್ಯ ವಿಧಾನವನ್ನು ಬದಲಿಸಿಕೊಂಡಿರುವುದು ಖಚಿತವಾಗಿದೆ.

ಪಂದ್ಯಗಳು ಟೀವಿಯಲ್ಲಿ ನೇರಪ್ರಸಾರವಾಗುವಾಗ ತುಸು ವಿಳಂಬವಾಗುತ್ತದೆ. ನಿರ್ದಿಷ್ಟ ಸ್ವಚ್ಛತಾ ಸಿಬ್ಬಂದಿ ಮೈದಾನದಲ್ಲಿ ಆಯಾ ಕ್ಷಣದಲ್ಲಿ ನಡೆಯುವುದನ್ನೇ ನೇರವಾಗಿ ವರದಿ  ಮಾಡುತ್ತಿರುವುದು ಪತ್ತೆಯಾಗಿದೆ

Advertisement

Udayavani is now on Telegram. Click here to join our channel and stay updated with the latest news.

Next