Advertisement

ಸಕ್ಕರೆ ಬಳಸಿ ಬೆಲ್ಲ ತಯಾರಿಸುತ್ತಿದ್ದ ಎರಡು ಆಲೆಮನೆಗಳ ಸೀಝ್

03:34 PM Jul 29, 2020 | Suhan S |

ಭದ್ರಾವತಿ: ತಾಲೂಕಿನ ವಿವಿಧೆಡೆಗಳಲ್ಲಿರುವ ಆಲೆಮನೆಗಳಲ್ಲಿ ಕಬ್ಬು ಬಳಸದೆ ಸಕ್ಕರೆಯನ್ನು ಬಳಸಿ ಬೆಲ್ಲವನ್ನು ತಯಾರಿಸುತ್ತಿರುವ ದಂಧೆ ನಡೆಯುತ್ತಿರುವ ಬಗ್ಗೆ ತಹಶೀಲ್ದಾರ್‌ರಿಗೆ ದೂರು ಬಂದ ಮೇರೆಗೆ ಮಂಗಳವಾರ ತಹಶೀಲ್ದಾರ್‌ ಶಿವಕುಮಾರ್‌ ಅವರು ಪೊಲೀಸ್‌ ಸಿಬ್ಬಂದಿಗಳೊಂದಿಗೆ ಕೂಡ್ಲಿಗೆರೆ ಹೋಬಳಿಯ ಅರಳಿಹಳ್ಳಿ ಹಾಗೂ ಕಾಗೆಹಳ್ಳದಲ್ಲಿನ ಎರಡು ಆಲೆಮನೆಗಳಿಗೆ ದಿಢೀರ್‌ ಭೇಟಿ ನೀಡಿ ಆಲೆಮನೆ‌ಗಳಲ್ಲಿ ದಾಸ್ತಾನಿದ್ದ ಬೆಲ್ಲ ಮತ್ತು ಸಕ್ಕರೆ ಮೂಟೆಗಳನ್ನು ಪರಿಶೀಲಿಸಿ, ಪ್ರಕರಣ ದಾಖಲಿಸಿದರು.

Advertisement

ಬೆಲ್ಲವನ್ನು ಕಬ್ಬಿನಿಂದ ತಯಾರಿಸಬೇಕು. ಆದರೆ ತಾಲೂಕಿನ ಆಲೆಮನೆಗಳಲ್ಲಿ ಸಕ್ಕರೆಯನ್ನು ಬಳಸಿ ಬೆಲ್ಲವನ್ನು ತಯಾರಿಸಲಾಗುತ್ತಿದೆ ಎಂದು ತಹಶೀಲ್ದಾರ್‌ ಕಚೇರಿಗೆ ಮಾಹಿತಿ ಬಂದ ಮೇರೆಗೆ ತಾಲೂಕಿನ ಆಲೆಮನೆಗಳವರನ್ನು ಕರೆಸಿ ಮಾತನಾಡಿ ಸಕ್ಕರೆಯಿಂದ ಬೆಲ್ಲ ತಯಾರಿಸಬಾರದು ಎಂದು ತಿಳುವಳಿಕೆ ಹೇಳಿ ಕಳುಹಿಸಿದ್ದರೂ ಸಹ ಸಕ್ಕರೆಯಿಂದ ಬೆಲ್ಲ ತಯಾರಿಸುವ ದಂಧೆ ಮುಂದುವರಿದಿದೆ ಎಂಬ ಮಾಹಿತಿ ಮೇರೆಗೆ ಮಂಗಳವಾರ ಕೂಡ್ಲಿಗೆರೆ ಹೋಬಳಿಗೆ ಸೇರಿದ ಅರಳಿಹಳ್ಳಿಯಲ್ಲಿನ ರಾಜಪ್ಪ ಹಾಗೂ ಅನಸೂಯಮ್ಮ ಅವರ ಮಾಲೀಕತ್ವಕ್ಕೆ ಸೇರಿದ ಪುರುಷೋತ್ತಮ ಎಂಬುವವರು ನಡೆಸುತ್ತಿದ್ದ ಎರಡು ಆಲೆಮನೆಗಳಿಗೆ ಭೇಟಿ ನೀಡಿ ಕ್ರಮ ಕೈಗೊಳ್ಳಲಾಗಿದೆ. ಎರಡೂ ಆಲೆಮನೆಗಳಲ್ಲಿ ದಾಸ್ತಾನಿದ್ದ ಸುಮಾರು 150 ಮೂಟೆ ಸಕ್ಕರೆ ಹಾಗೂ 70 ಮೂಟೆ ಬೆಲ್ಲದ ಸಂಗ್ರವಿದ್ದ ಗೋಡೌನ್‌ ಸೀಝ್ ಮಾಡಿ ಪ್ರಕರಣ ದಾಖಲಿಸಲಾಗಿದೆ.

ತಹಶೀಲ್ದಾರ್‌ ಶಿವಕುಮಾರ್‌, ಉಪತಹಶೀಲ್ದಾರ್‌ ಮಂಜಾನಾಯ್ಕ, ಗ್ರಾಮ ಲೆಕ್ಕಿಗ ಅನಿಲ್‌ ಕುಮಾರ್‌, ಕಂದಾಯಾಧಿ ಕಾರಿ ಜಗದೀಶ್‌, ಗ್ರಾಮಾಂತರ ಪೊಲೀಸ್‌ ಠಾಣೆಯ ಎಸ್‌ಐ ದೇವೇಂದ್ರಪ್ಪ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next