Advertisement

ಹುಲಿ ಮತ್ತು ಜಿಂಕೆ ಬೇಟೆ ಪ್ರಕರಣ : ಇಬ್ಬರು ಆರೋಪಿಗಳ ಬಂಧನ

09:07 PM Sep 01, 2020 | Hari Prasad |

ಹುಣಸೂರು: ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶ ವ್ಯಾಪ್ತಿಯಲ್ಲಿ ಆ.26 ರಂದು ಹುಲಿ ಮತ್ತು ಜಿಂಕೆ ಬೇಟೆಗೆ ಸಂಬಂಧಿಸಿದಂತೆ, ಈವರೆಗೆ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ.

Advertisement

ಹಾಗೂ, ಇನ್ನುಳಿದ ಆರೋಪಿಗಳ ಪತ್ತೆಗೆ ಕ್ರಮವಹಿಸಲಾಗಿದೆ ಎಂದು ಎ.ಸಿ.ಎಫ್ ಸತೀಶ್ ಅವರು ತಿಳಿಸಿದ್ದಾರೆ.

ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶ ವ್ಯಾಪ್ತಿಯಲ್ಲಿ ಹುಲಿಯನ್ನು ಹತ್ಯೆಗೈದು ಅದರ ನಾಲ್ಕು ಕಾಲು ಮತ್ತು ಕೋರೆ ಹಲ್ಲುಗಳನ್ನು ಆರೋಪಿಗಳು ಅಪಹರಿಸಿದ್ದರು.

ಬಂಡೀಪುರ ಉದ್ಯಾನದ ಶ್ವಾನ ರಾಣಾನಿಂದಾಗಿ ಹುಲಿ ಹತ್ಯೆಯಾದ 24 ಗಂಟೆಯೊಳಗೆ ಪ್ರಮುಖ ಆರೋಪಿ ಸಂತೋಶ್ ನನ್ನು ಬಂದಿಸಲಾಗಿತ್ತು. ಮತ್ತು ಈತನಿಂದ 7 ಹುಲಿ ಉಗುರುಗಳನ್ನು ವಶಪಡಿಸಿಕೊಳ್ಳಲಾಗಿತ್ತು.

ಮತ್ತು, ಆತ ನೀಡಿದ ಸುಳಿವನ್ನಾಧರಿಸಿ ತಲೆ ಮರೆಸಿಕೊಂಡಿದ್ದ ಆರೋಪಿಗಳನ್ನು ಪತ್ತೆ ಹಚ್ಚಲು 6 ವಿಶೇಷ ತಂಡಗಳನ್ನು ರಚಿಸಲಾಗಿತ್ತು.

Advertisement

ಆರೋಪಿ ಸಂತೋಷ್ ನೀಡಿದ ಮಾಹಿತಿಯನ್ನಾಧರಿಸಿ ಬೆಂಗಳೂರಿನತ್ತ ತೆರಳಿದ್ದ ವಿಶೇಷ ತಂಡದ ಅಧಿಕಾರಿ. ಎ.ಸಿ.ಎಫ್ ಆಂಟೋನಿ ಪೌಲ್, ಆರ್ ಎಫ್ ಓ ಚೌಗುಲೆ ನೇತೃತ್ವದ ತಂಡಕ್ಕೆ ಸಿಕ್ಕಿದ ಖಚಿತ ಮಾಹಿತಿ ಮೇರೆಗೆ ರಾಮನಗರ ಪಟ್ಟಣದ KSRTC ಬಸ್ ನಿಲ್ದಾಣ ಬಳಿ ಪೆಟ್ರೋಲ್ ಪಂಪ್ ಹತ್ತಿರ ಕುಳಿತುಕೊಂಡಿದ್ದ ಕೊಡಗು ಜಿಲ್ಲೆಯ ವಿರಾಜಪೇಟೆ ತಾಲೂಕಿನ ಬಾಳೆಲೆ ನಿಟ್ಟೂರಿನ ವಟ್ಟ0ಗಡ ರಂಜು ಬಿನ್ ಬೆಳ್ಳಿಯಪ್ಪನನ್ನು ವಶಕ್ಕೆ ಪಡೆದುಕೊಂಡಿದ್ದರು.

ಈತನನ್ನು ತೀವ್ರವಾಗಿ ವಿಚಾರಣೆ ನಡೆಸಿದ ವೇಳೆ ಆರೋಪಿ ನೀಡಿದ ಮಾಹಿತಿಯ ಮೇರೆಗೆ 4 ಹುಲಿ ಉಗುರುಗಳು ಮತ್ತು 2 ಕೊರೆ ಹಲ್ಲುಗಳನ್ನು ಆರೋಪಿ ರಂಜುನ ಮಾವ ಅನ್ನಾಲವಾಡ್ ವಿಶ್ವನಾಥ್ ರವರ ಕಾಫಿ ತೋಟದಲ್ಲಿ ವಶಪಡಿಸಿಕೊಳ್ಳಲಾಗಿದೆ ಎಂದು ನಾಗರಹೊಳೆ ಹುಲಿ ಯೋಜನೆ ನಿರ್ದೇಶಕ ಡಿ.ಮಹೇಶ್ ಕುಮಾರ್ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next