ವಾಷಿಂಗ್ಟನ್: ಟ್ವಿಟರ್‌ನಲ್ಲಿ ಹೆಚ್ಚೆಂದರೆ 280 ಕ್ಯಾರೆಕ್ಟರ್‌ಗಳ ಟ್ವೀಟ್ ಮಾಡಬಹುದು. ಅದಕ್ಕಿಂತ ದೀರ್ಘ ಟ್ವೀಟ್ ಮಾಡಬೇಕೆಂದರೆ ಅದನ್ನು ಎಲ್ಲಾದರೂ ಬರೆದು ಅದರ ಸ್ಕ್ರೀನ್ ಶಾಟ್ ಮಾತ್ರ ಹಂಚಿಕೊಳ್ಳಬಹುದಷ್ಟೇ.
ಇದನ್ನೂ ಓದಿ:ಇಂಧನ ಬೆಲೆ ಏರಿಕೆ ನಮ್ಮ ಕೈಯಲ್ಲಿಲ್ಲ; ಕೇಂದ್ರ ಪೆಟ್ರೋಲಿಯಂ ಸಚಿವ ಹರ್ದೀಪ್
ಆದರೆ ಇನ್ನು ಮುಂದೆ ಹಾಗಿರುವುದಿಲ್ಲ. ಫೇಸ್‌ಬುಕ್ ರೆಡ್ಡಿಟ್ ರೀತಿಯಲ್ಲೇ ದೀರ್ಘ ಬರಹಗಳನ್ನು ನೀವು ಟ್ವಿಟರ್‌ನಲ್ಲೂ ಹಂಚಿಕೊಳ್ಳಬಹುದು. ಅದಕ್ಕೆಂದು ಸಂಸ್ಥೆ ಹೊಸ ಅಪ್‌ಡೇಟ್ ಒಂದರ ಮೇಲೆ ಕೆಲಸ ಮಾಡುತ್ತಿದೆ.
ಡಿಜಿಟಲ್ ಪತ್ತೆದಾರಿಕೆ ಕೆಲಸ ಮಾಡುವುದಕ್ಕೆ ಪ್ರಸಿದ್ಧರಾಗಿರುವ ಜಾನೆ ಮಂಚುನ್ ವೊಂಗ್ ಈ ಬಗ್ಗೆ ಟ್ವಿಟರ್‌ನಲ್ಲೇ ಮಾಹಿತಿ ಹಂಚಿ ಕೊಂಡಿದ್ದಾರೆ. “ಟ್ವಿಟರ್ ಆರ್ಟಿಕಲ್’ ಹೆಸರಿನ ನೂತನ ಆಯ್ಕೆಯ ಸ್ಕ್ರೀನ್‌ಶಾಟ್ ಹಂಚಿಕೊಂಡಿ ರುವ ಅವರು, “ಇದು ಟ್ವಿಟರ್‌ನಲ್ಲಿ ದೊಡ್ಡ ಬರಹಗಳನ್ನು ಬರೆಯುವುದಕ್ಕೆ ಅವಕಾಶ ಮಾಡಿಕೊಡಬಲ್ಲ ಅಪ್‌ಡೇಟ್ ಆಗಿರುವ ಸಾಧ್ಯತೆಯಿದೆ’ ಎಂದು ಬರೆದುಕೊಂಡಿದ್ದಾರೆ.
ಅದಾಗ್ಯೂ ಟ್ವಿಟರ್ ಈ ಬಗ್ಗೆ ಸದ್ಯಕ್ಕೆ ಯಾವುದೇ ಮಾಹಿತಿ ಕೊಟ್ಟಿಲ್ಲ. ಟ್ವಿಟರ್ ಪ್ರಾರಂಭಿಕ ವರ್ಷಗಳಲ್ಲಿ ಒಂದು ಟ್ವೀಟ್‌ಗೆ 140 ಕ್ಯಾರೆಕ್ಟರ್ ಗಳ ಗಡಿ ಇಟ್ಟಿತ್ತು. ಅನಂತರ ಅದನ್ನು 280 ಕ್ಯಾರೆಕ್ಟರ್‌ಗೆ ಏರಿಸಲಾಯಿತು.