Advertisement

ಟ್ವಿಟರ್‌ ಫೈಲ್ಸ್‌ ರಹಸ್ಯ ಬಯಲು: ಕೇಂದ್ರ ಸರ್ಕಾರ

08:24 PM Dec 10, 2022 | Team Udayavani |

ನವದೆಹಲಿ: ಮುಕ್ತ ಹಾಗೂ ವಾಕ್‌ ಸ್ವಾತಂತ್ರ್ಯದ ಹೆಸರಲ್ಲಿ ಟ್ವಿಟರ್‌ ನಡೆಸುತ್ತಿರುವ ತಪ್ಪು ಮಾಹಿತಿ ನೀಡುವ ಕ್ರಮವನ್ನು ಸರ್ವಥಾ ಒಪ್ಪಲು ಸಾಧ್ಯವಿಲ್ಲ ಎಂದು ಕೇಂದ್ರ ಸರ್ಕಾರ ಹೇಳಿದೆ.

Advertisement

ಈ ಬಗ್ಗೆ ಮಾಹಿತಿ ನೀಡಿದ ಕೇಂದ್ರ ಮಾಹಿತಿ ತಂತ್ರಜ್ಞಾನ ಮತ್ತು ಇಲೆಕ್ಟ್ರಾನಿಕ್ಸ್‌ ಖಾತೆ ಸಹಾಯಕ ಸಚಿವ ರಾಜೀವ್‌ ಚಂದ್ರಶೇಖರ್‌ ಟ್ವಿಟರ್‌ನ ಉದ್ಯೋಗಿಗಳೇ ಅವರಿಗೆ ವಿರುದ್ಧವಾಗಿರುವ ವ್ಯಕ್ತಿಗಳು, ಸಂಘಟನೆಗಳು, ಪ್ರತಿರೋಧ ವ್ಯಕ್ತಪಡಿಸುವವರನ್ನು ಕಪ್ಪುಪಟ್ಟಿಗೆ ಸೇರಿಸಿದ್ದರು. ಇಂಥ ಕ್ರಮ ಕೈಗೊಳ್ಳುವ ಮೂಲಕ ತಾರತಮ್ಯ ನಿಲುವು ಅನುಸರಿಸಲಾಗುತ್ತಿತ್ತು. ಸದ್ಯ ಅದಕ್ಕೆ ಮುಕ್ತಾಯ ಹಾಡಲಾಗಿದೆ ಎಂದು ಹೇಳಿದ್ದಾರೆ.

“ಟ್ವಿಟರ್‌ ಫೈಲ್ಸ್‌’ ಎಂಬ ತನಿಖಾ ವರದಿಗಳಿಂದ ಇದು ದೃಢಪಟ್ಟಿದೆ. ಮೈಕ್ರೋಬ್ಲಾಗಿಂಗ್‌ ಸಂಸ್ಥೆಯ ಹೊಸ ಮಾಲೀಕ ಎಲಾನ್‌ ಮಸ್ಕ್ ಹೊಸ ಮಾಹಿತಿಯನ್ನು ಬಹಿರಂಗಪಡಿಸಿದ್ದಾರೆ ಎಂದು ಸಚಿವ ರಾಜೀವ್‌ ಚಂದ್ರಶೇಖರ್‌ ತಿಳಿಸಿದ್ದಾರೆ.

ಬಳಕೆದಾರರಿಗೆ ಅರಿವೇ ಆಗದಂತೆ ರಹಸ್ಯವಾಗದಂತೆ ಟ್ವೀಟ್‌ಗಳನ್ನು ನಿರ್ಬಂಧಿಸುತ್ತಿದ್ದರು ಎಂದು ಅವರು ಹೇಳಿದ್ದಾರೆ.

 

Advertisement
Advertisement

Udayavani is now on Telegram. Click here to join our channel and stay updated with the latest news.

Next