ಸಾಮಾಜಿಕ ಜಾಲತಾಣಗಳು ಅಂದಾಗ ತಕ್ಷಣ ನೆನಪಾಗುವುದು ಫೇಸ್ ಬುಕ್, ವಾಟ್ಸ್‌ಆ್ಯಪ್, ಟ್ವಿಟರ್ ಮತ್ತು ಇನ್ಸ್ಟಾಗ್ರಾಂ. ಈ ಪೈಕಿ ಟ್ವಿಟರ್ ಸ್ವಲ್ಪ ಹೆಚ್ಚು ಅನ್ನುವಷ್ಟೇ ಜನಪ್ರಿಯತೆ ಪಡೆದುಕೊಂಡಿತ್ತುಮತ್ತು ಏಕಸ್ವಾಮ್ಯ ಹೊಂದಿತ್ತು ಅನ್ನುವುದುನಿಜ. ಅಂಥ ಟ್ವಿಟರ್‌ಗೆ ಪ್ರತಿಸ್ಪರ್ಧಿಯ ರೂಪದಲ್ಲಿ “ಕೂ’ ಹೆಸರಿನ ಆ್ಯಪ್ ಬಂದಿರುವುದು ಈಗಿನ ಸುದ್ದಿ. ಸ್ವದೇಶಿ ಆ್ಯಪ್‌ಎಂಬುದು “ಕೂ’ ಗೆ ವರದಾನವಾಗಿದ್ದು, ಈಗಾಗಲೇ ಅದರ ಬಳಕೆದಾರರ ಸಂಖ್ಯೆ 30ಲಕ್ಷಕ್ಕೇರಿದೆ. ಅಲ್ಲದೇ ಟ್ವಿಟರ್‌ನಿಂದ “ಕೂ’ಗೆ ವಲಸೆ ಪರ್ವವೂ ಪ್ರಾರಂಭಗೊಂಡಿದೆ.
ಹೀಗಿದೆ “ಕೂ’ :
ಆ್ಯಪ್ ಬೆಂಗಳೂರು ಮೂಲದ ಉದ್ಯಮಿಗಳಾದ ಅಪ್ರಮೇಯ ರಾಧಾಕೃಷ್ಣ ಮತ್ತು ಮಯಾಂಕ್ ಬಿಡ್‌ವಟ್ಕಾ ಇದರ ಸ್ಥಾಪಕರು. ಹಿಂದಿನ ವರ್ಷ ಕೇಂದ್ರ ಸರ್ಕಾರ ಆಯೋಜಿಸಿದ್ದ ಆತ್ಮನಿರ್ಭರ ಆ್ಯಪ್ ಚಾಲೇಂಜ್‌ನಲ್ಲಿ ಈ ಆ್ಯಪ್ ದ್ವಿತೀಯ ಸ್ಥಾನಪಡೆದಿತ್ತು. ಆಡಿಯೋ, ಮಲ್ಟಿಮೀಡಿಯಾ ಸೇರಿದಂತೆ ಟ್ವಿಟರ್‌ನಲ್ಲಿ ಇರುವ ಅನೇಕ ಅಂಶಗಳು ಇದರಲ್ಲೂ ಇವೆ.
6 ಭಾಷೆಗಳಲ್ಲಿ ಲಭ್ಯ :
ಪ್ರಥಮ ಬಾರಿಗೆ ಕನ್ನಡದಲ್ಲಿ ಸೇವೆ ಪ್ರಾರಂಭಿಸಿದ “ಕೂ’ ಇದೀಗ ಹಿಂದಿ, ತಮಿಳು, ತೆಲುಗು, ಮರಾಠಿ ಹಾಗೂ ಇಂಗ್ಲಿಷ್ ಸೇರಿದಂತೆ 6 ಭಾಷೆಗಳಲ್ಲಿ ಸೇವೆ ನೀಡುತ್ತಿದೆ. ಮುಂದಿನ ದಿನಗಳಲ್ಲಿ ಬೆಂಗಾಲಿ, ಗುಜರಾತಿ, ಕಾಶ್ಮೀರಿ, ಕೊಂಕಣಿ, ಮಲಯಾಳಂ, ನೇಪಾಳಿ, ಸಂಸ್ಕೃತ ಸೇರಿದಂತೆ ಭಾರತದ ಪ್ರಮುಖ ಭಾಷೆಗಳಲ್ಲಿ ಸೇವೆ ನೀಡುವ ಮಹತ್ವಾಕಾಂಕ್ಷೆ ಹೊಂದಿದೆ.ಸರ್ಕಾರಿ ಪ್ರಕಟಣೆಗಳಿಗೂ ಬಳಕೆ ಸಾಧ್ಯತೆ ಸರ್ಕಾರದ ಪ್ರಕಟಣೆ ಮತ್ತು ಮಾಹಿತಿಗಳನ್ನು ಟ್ವಿಟರ್ ಮೂಲಕ ಪ್ರಕಟಿ ಸುತ್ತಿದ್ದ ಕೇಂದ್ರ ಸರ್ಕಾರ, ಇದೀಗ “ಕೂ’ ಸಾಮಾಜಿಕ ಮಾಧ್ಯಮ ವೇದಿಕೆಯನ್ನು ಪರಿಣಾಮಕಾರಿಯಾಗಿ ಬಳಸಲು ಸಿದ್ಧತೆನಡೆಸುತ್ತಿದೆ. ಟ್ವಿಟರ್ ನೊಂದಿಗೆ ಸರ್ಕಾರದ ಬಾಂಧವ್ಯ ಹದಗೆಡುತ್ತಿರುವ ಕಾರಣ, “ಕೂ’ ಬಳಸಲು ಚಿಂತನೆ ನಡೆದಿದೆ.
ಪ್ರಧಾನಿ ನರೇಂದ್ರ ಮೋದಿ ಶೀಘ್ರದಲ್ಲೇ ಟ್ವಿಟರ್ ತೊರೆದು ಸ್ವದೇಶಿ “ಕೂ’ ಸೇರುವ ನಿರೀಕ್ಷೆ ಇದೆ ಎಂದೂ ಹೇಳಲಾಗಿದೆ. ಈಗಾಗಲೇ ಕೇಂದ್ರ ಸಚಿವರು, ಕರ್ನಾಟಕದ ಹಲವು ಸಚಿವರು,ಶಾಸಕರು, ಸೆಲೆಬ್ರಿಟಿಗಳು, ಕ್ರೀಡಾಪಟುಗಳು”ಕೂ’ ಆ್ಯಪ್ ಬಳಸಲು ಆರಂಭಿಸಿದ್ದು ದಿನದಿಂದ ದಿನಕ್ಕೆ ಬಳಕೆದಾರರ ಸಂಖ್ಯೆ ಏರುತ್ತಿದೆ.
“ಕೂ’ :
- ಸ್ಥಾಪನೆ 2020 ಮಾರ್ಚ್ 1
- ಸ್ಥಾಪಕರು: ಅಪ್ರಮೇಯ ರಾಧಾಕೃಷ್ಣ, ಮಯಾಂಕ್ ಬಿಡ್‌ವಟ್ಕಾ
- ಪ್ರಧಾನ ಕಚೇರಿ: ಬೆಂಗಳೂರು
- ಬಳಕೆದಾರರು: 4 ಮಿಲಿಯನ್
ಟ್ವಿಟರ್:
- ಸ್ಥಾಪನೆ 2006 ಮಾರ್ಚ್ 21
- ಸ್ಥಾಪಕರು: ಜ್ಯಾಕ್ ಡಾರ್ಸೆ, ಇವಾನ್ ವಿಲಿಯಮ್ಸ್
- ಪ್ರಧಾನ ಕಚೇರಿ: ಸ್ಯಾನ್ ಫ್ರಾನ್ಸಿಸ್ಕೋ, ಅಮೆರಿಕ
- ಬಳಕೆದಾರರು: 35 ಕೋಟಿ
- ಉದ್ಯೋಗಿಗಳು: 4600 (ಸೆಪ್ಟೆಂಬರ್ 2019ರ ಮಾಹಿತಿ.)
ಬಳಕೆದಾರನಿಗೇನು ಪ್ರಯೋಜನ? ;
- ಟ್ವಿಟರ್‌ನಲ್ಲಿ ಬರೆಯಬಹುದಾದ ಅಕ್ಷರಗಳ ಗರಿಷ್ಠ ಸಂಖ್ಯೆ ಆದರೆ, “ಕೂ’ನಲ್ಲಿ ಗರಿಷ್ಠ 400 ಅಕ್ಷರಗಳನ್ನು ಬರೆಯಬಹುದಾಗಿದೆ.
- ಟ್ವಿಟರ್‌ನಂತೆಯೇ “ಕೂ’ನಲ್ಲಿಯೂ ಟ್ಯಾಗ್ ಮಾಡುವ ಆಯ್ಕೆ ಇದೆ.ಹ್ಯಾಷ್ ಟ್ಯಾಗ್ ಟ್ರೆಂಡ್ ಕೂಡಾ ಸೃಷ್ಟಿಸಬಹುದು.
- ಟ್ವಿಟರ್ ಖಾತೆ ತೆರೆಯಲು ಇಮೇಲ್ ಇತ್ಯಾದಿ ಅಗತ್ಯ. ಆದರೆ “ಕೂ’ನಲ್ಲಿ ಖಾತೆ ತೆರೆಯಲು ಮೊಬೈಲ್ ಸಂಖ್ಯೆ ಮತ್ತು ಓಟಿಪಿ ಇದ್ದರೆ ಸಾಕು.
- ಟ್ವಿಟರ್ ನಂತೆಯೇ “ಕೂ’ ಕೂಡಾ ಆಡಿಯೋ ಸೇರಿದಂತೆ ಮಲ್ಟಿ ಮೀಡಿಯಾವನ್ನು ಬೆಂಬಲಿಸುತ್ತದೆ.
– ಎಂ.ಎಸ್.ಶೋಭಿತ್, ಮೂಡ್ಕಣಿ