ವಾಷಿಂಗ್ಟನ್: ಜಗತ್ತಿನಾದ್ಯಂತ ಜನಜನಿತಾಗಿರುವ ಸಾಮಾಜಿಕ ಜಾಲತಾಣ ಟ್ವೀಟರ್ ಬಳಕೆದಾರರಿಗೊಂದು ಸಂತಸದ ಸುದ್ದಿ ಹೊರಬಿದ್ದಿದೆ. ಟ್ವೀಟರ್ ಖಾತೆಯ ಅಕ್ಷರಮಿತಿಯನ್ನು ಅಧಿಕೃತವಾಗಿ ಹೆಚ್ಚು ಮಾಡಿರುವುದಾಗಿ ಘೋಷಿಸಿದೆ.
ಟ್ವೀಟರ್ ಬಳಕೆದಾರರಿಗೆ ಇದ್ದ 140 ಕ್ಯಾರೆಕ್ಟರ್ಸ್ಸ್ ಮಿತಿಯನ್ನು ಇದೀಗ 240ಕ್ಕೆ ಹೆಚ್ಚಿಸಿದೆ. 2006ರಲ್ಲಿ ಪ್ರಾರಂಭಗೊಂಡಿದ್ದ ಟ್ವೀಟರ್ ಇದೀಗ ತಮ್ಮ ಬಳಕೆದಾರರಿಗೆ ಹೆಚ್ಚಿನ ಅನುಕೂಲವಾಗುವ ನಿಟ್ಟಿನಲ್ಲಿ ಅಕ್ಷರಮಿತಿಯನ್ನು ದ್ವಿಗುಣಗೊಳಿಸಿದೆ. ಟ್ವೀಟರ್ ನಿರ್ಧಾರಕ್ಕೆ ತುಂಬಾ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ ಎಂದು ವರದಿ ತಿಳಿಸಿದೆ.
ನಾವು ಇದನ್ನು ಹೇಗೆ ಮತ್ತಷ್ಟು ಅಭಿವೃದ್ಧಿಪಡಿಸಿ ಬದಲಾವಣೆ ಮಾಡಬಹುದು ಎಂಬ ಬಗ್ಗೆ ನಮ್ಮ ಗ್ಲೋಬಲ್ ಸಮುದಾಯ ಸಮಸ್ಯೆಯನ್ನು ಗಮನಿಸಿ, ಅಧ್ಯಯನ ನಡೆಸಿದ ನಂತರವೇ ಈ ಬದಲಾವಣೆ ಮಾಡಲಾಗಿದೆ ಎಂದು ಟ್ವೀಟರ್ ಪ್ರೊಡಕ್ಟ್ ಮ್ಯಾನೇಜರ್ ಅಲಿಝಾ ರೋಸೆನ್ ತಮ್ಮ ಬ್ಲಾಗ್ ನಲ್ಲಿ ಬರೆದುಕೊಂಡಿದ್ದಾರೆ.
ಈಗ ಟ್ವೀಟರ್ ಖಾತೇಲಿ ಸ್ವಯಂಚಾಲಿತವಾಗಿ 280 ಕ್ಯಾರೆಕ್ಟರ್ ಫೀಚರ್ ಕಾಣಿಸಿಕೊಳ್ಳುತ್ತೆ. ಒಂದು ವೇಳೆ ಹೊಸ ಅಕ್ಷರಮಿತಿ ಕಾಣಿಸದಿದ್ದರೆ ಕೂಡಲೇ ನಿಮ್ಮ ಮೊಬೈಲ್ ಆಪ್ ಅನ್ನು ಅಪ್ ಡೇಟ್ ಮಾಡಿಕೊಳ್ಳಿ ಅಥವಾ ಕಂಪ್ಯೂಟರ್ ನಲ್ಲಾದರೆ ಟ್ವೀಟರ್ ಡಾಟ್ ಕಾಂ ಅನ್ನು ರಿಫ್ರೆಶ್ ಮಾಡಿಕೊಳ್ಳಬೇಕು ಎಂದು ತಿಳಿಸಿದ್ದಾರೆ. ಆದರೆ ಜಪಾನ್, ಕೊರಿಯನ್ ಹಾಗೂ ಚೀನಾದಲ್ಲಿ ಟ್ವೀಟರ್ ಬಳಕೆದಾರರಿಗೆ 140 ಕ್ಯಾರೆಕ್ಟರ್ ಅಕ್ಷರ
ಮಿತಿ ಇಡಲಾಗಿದೆ.