Advertisement
ಆದರೀಗ ಟ್ವಿಟ್ಟರ್ ಸಂಸ್ಥೆ ತನ್ನ ಬಳಕೆದಾರರ ಸಮಸ್ಯೆಯನ್ನು ಆಲಿಸಿದ್ದು ಈ ಕುರಿತು ಪೋಸ್ಟ್ ಒಂದನ್ನು ಹಂಚಿಕೊಂಡಿದೆ. ಟ್ವಿಟ್ಟರ್ ನ ಅಧೀಕೃತ ಖಾತೆಯಲ್ಲಿ ಪ್ರಕಟವಾದ ಈ ಪೋಸ್ಟ್ ಮಿಲಿಯನ್ ಗಟ್ಟಲೇ ಜನರ ಗಮನ ಸೆಳೆದಿದ್ದು, ಇಂಟರ್ ನೆಟ್ ನಲ್ಲಿ ಸೆನ್ಸೇಶನ್ ಕ್ರಿಯೇಟ್ ಮಾಡಿದೆ.
Related Articles
Advertisement
ಹೌದು ! ‘ಪ್ರತಿಯೊಬ್ಬರು ಯಾವಾಗ ಮಾಸ್ಕ್ ಧರಿಸುತ್ತಾರೋ ಅಂದು ಎಡಿಟ್ ಫೀಚರ್ ಅನ್ನು ಒದಗಿಸಲಾಗುವುದು’ ಎಂದು ಟ್ವಿಟ್ಟರ್ ಸಂಸ್ಥೆ ಅಧಿಕೃತವಾಗಿ ತಿಳಿಸಿದೆ. ಆ ಮೂಲಕ ಜನರಲ್ಲಿ ಕೋವಿಡ್ ಸಂಕಷ್ಟದ ಸಮಯದಲ್ಲಿ ಮಾಸ್ಕ್ ಧರಿಸುವಿಕೆಯ ಅಗತ್ಯತೆಯನ್ನು ಒತ್ತಿ ಹೇಳಿದೆ.
ಈ ಪೋಸ್ಟ್ ಜಗತ್ತಿನದಾದ್ಯಂತ ವೈರಲ್ ಆಗಿದ್ದು 2.2 ಮಿಲಿಯನ್ ಲೈಕ್ಸ್ ಮತ್ತು 626K ರೀಟ್ವೀಟ್ ಆಗಿದೆ. ಮಾತ್ರವಲ್ಲದೆ ಅನೇಕರು ಅಭೂತಪೂರ್ವ ಎನಿಸುವಂತಹ ಪ್ರತಿಕ್ರಿಯೆಯನ್ನು ನೀಡಿದ್ದು ಸಾಕಷ್ಟು ಮನರಂಜನೆ ಒದಗಿಸಿದೆ.