Advertisement

ಮಹೇಂದ್ರ ಸಿಂಗ್ ಧೋನಿ ಟ್ವಿಟರ್ ಖಾತೆಯಿಂದ ‘ಬ್ಲೂ ಟಿಕ್’ ಮಾಯ!

04:43 PM Aug 06, 2021 | Team Udayavani |

ಮುಂಬೈ: ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಅವರ ಅಧಿಕೃತ ಟ್ವಿಟ್ಟರ್ ಖಾತೆಯ ಬ್ಲೂ ಟಿಕ್ ನ್ನು ಟ್ವಿಟ್ಟರ್ ಸಂಸ್ಥೆ ತೆಗೆದು ಹಾಕಿದೆ. ಈ ಕ್ರಮಕ್ಕೆ ನಿಖರ ಕಾರಣ ಇದುವರೆಗೂ ತಿಳಿದುಬಂದಿಲ್ಲ.

Advertisement

ಪ್ರಸಿದ್ಧ ವ್ಯಕ್ತಿಗಳ ಸಾಮಾಜಿಕ ಜಾಲತಾಣಗಳ ಖಾತೆ ಅಧಿಕೃತ ಎಂದು ಸೂಚಿಸಲು ಬ್ಲೂ ಟಿಕ್ ನೀಡಲಾಗುತ್ತದೆ. ಮಹೇಂದ್ರ ಸಿಂಗ್ ಧೋನಿ ಅವರು ಟ್ವಿಟ್ಟರ್ ನಲ್ಲಿ 8.2 ಮಿಲಿಯನ್ ಹಿಂಬಾಲಕರನ್ನು ಹೊಂದಿದ್ದಾರೆ. ಧೋನಿಯವರು ಜನವರಿ 8ರಂದು ಕೊನೆಯದಾಗಿ ಟ್ವೀಟ್ ಮಾಡಿದ್ದರು.

ಇದನ್ನೂ ಓದಿ:ಟೋಕಿಯೊ: ಸೆಮಿ ಫೈನಲ್ ನಲ್ಲಿ ಎಡವಿದ ಕುಸ್ತಿಪಟು ಭಜರಂಗ್ ಪೂನಿಯಾ

2020ರ ಆಗಸ್ಟ್ 15ರಂದು ಮಹೇಂದ್ರ ಸಿಂಗ್ ಧೋನಿ ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ವಿದಾಯ ಹೇಳಿದ್ದರು. ಇದಾದ ಬಳಿಕ ಧೋನಿ ಐಪಿಎಲ್ ನಲ್ಲಿ ಮಾತ್ರ ಆಡುತ್ತಿದ್ದಾರೆ. ಐಪಿಎಲ್ ನ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಮಹೇಂದ್ರ ಸಿಂಗ್ ಧೋನಿ ಮುನ್ನಡೆಸುತ್ತಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next