ಸನ್ ಫ್ರಾನ್ಸಿಸ್ಕೋ: ಟ್ವಿಟ್ಟರ್ ಸಂಸ್ಥೆ ತನ್ನ ಬಳಕೆದಾರರಿಗೆ ಹೆಚ್ಚು ಭದ್ರತೆಯನ್ನು ಒದಗಿಸುವ ದೃಷ್ಟಿಯಿಂದ ಹೊಸ ಆಯ್ಕೆಯೊಂದನ್ನು ನೀಡುತ್ತಿದ್ದು ಇನ್ನುಮುಂದೆ ನಮ್ಮ ಟ್ವೀಟ್ ಗಳನ್ನು ಬೇರೆಯವರೂ ರೀ-ಟ್ವೀಟ್ ಮಾಡಬೇಕೆ ಬೇಡವೇ ಎಂದು ನಿರ್ಧರಿಸಬಹುದು. ಇದರಿಂದ ಟ್ವೀಟ್ ಗಳು ವೈರಲ್ ಆಗುವುದು ತಪ್ಪುವುದು ಮಾತ್ರವಲ್ಲದೆ ಅದರಿಂದ ಆಗುವ ದುಷ್ಪರಿಣಾಮಗಳು ಕೂಡ ಕಡಿಮೆಯಾಗುತ್ತದೆ.
ಹೊಸ ಫೀಚರ್ ಗಳನ್ನು 2020 ರಲ್ಲಿ ಸಾಮಾಜಿಕ ಜಾಲತಾಣಗಳಿಗೆ ಅನುಗುಣವಾಗಿ ಬಿಡುಗಡೆ ಮಾಡಲಾಗುವುದು ಎಂದು ಟ್ವಿಟ್ಟರ್ ನ ಡಿಸೈನ್ ಮತ್ತು ರಿಸರ್ಚ್ ಉಪಾಧ್ಯಕ್ಷ ಡ್ಯಾಂಟ್ಲಿ ಡೇವಿಸ್ ತಿಳಿಸಿದ್ದಾರೆ.
ಟ್ವಿಟ್ಟರ್ ನಲ್ಲಿ ಹೊಸ ಹೊಸ ವೈಶಿಷ್ಟ್ಯಗಳನ್ನು ಪರಿಚಯಿಸಯುವ ಪ್ರಕ್ರಿಯೆ ಜಾರಿಯಲ್ಲಿದೆ. ಇವು ನಮ್ಮ ಸಂಶೋಧನೆಯ ಭಾಗವೂ ಕೂಡ ಎಂದು ಇದೇ ವೇಳೆ ತಿಳಿಸಿದ್ದಾರೆ.
ಒಂದು ವೇಳೆ ಬಳಕೆದಾರರು ತಮ್ಮ ಟ್ವೀಟ್ ಗಳನ್ನು ರೀ-ಟ್ವೀಟ್ ಮಾಡುವ ಆಯ್ಕೆಯನ್ನು ನಿಷ್ಕ್ರೀಯಗೊಳಿಸುವ ಸೇವೆ ಕಾರ್ಯಗತಗೊಂಡರೆ ಅತೀ ಹೆಚ್ಚು ದುಷ್ಪರಿಣಾಮಗಳು ತಪ್ಪುತ್ತದೆ ಎಂದು ಅಭಿಪ್ರಾಯ ವ್ಯಕ್ತಪಡಿಸಲಾಗಿದೆ.