ನವದೆಹಲಿ: ಭಾರತದ ಸೇರಿದಂತೆ ವಿಶ್ವದಾದ್ಯಂತ ಮೈಕ್ರೋ-ಬ್ಲಾಗಿಂಗ್ ಸೇವೆ ಟ್ವಿಟರ್ ಸರ್ವರ್ ಮತ್ತೊಮ್ಮೆ ಡೌನ್ ಆಗಿದ್ದು, ಸೇವೆ ಸ್ಥಗಿತಗೊಂಡಿದ್ದರಿಂದ ಬಳಕೆದಾರರು ಪರದಾಡುವಂತಾಗಿದೆ.
ಈ ಹಿಂದೆ ಸಮಸ್ಯೆ ತಲೆದೂರಿದಾಗ ಟ್ವಿಟರ್ ಸಿಇಒ ಎಲೋನ್ ಮಸ್ಕ್ ಟ್ವಿಟರ್ ನಲ್ಲಿರುವ ಸಮಸ್ಯೆಗಳನ್ನು ಸರಿಪಡಿಸಲು ನಮ್ಮ ತಂಡ ನಿರಂತರ ಕೆಲಸ ಮಾಡುತ್ತಿದೆ ಎಂದು ಹೇಳಿದ್ದರು,ಆದರೆ ಈ ಹೇಳಿಕೆ ಬೆನ್ನಲ್ಲೇ ಮತ್ತೆ ಕೆಲವರಿಗೆ ಸರ್ವರ್ ಡೌನ್ ಸಮಸ್ಯೆ ತಲೆದೂರಿದೆ.
ಕೆಲವು ಟ್ವಿಟರ್ ಬಳಕೆದಾರರಿಗೆ ತಮ್ಮ ಮೊಬೈಲ್ ಫೋನ್ ಹಾಗೂ ಡೆಸ್ಕ್ ಟಾಪ್ ನಲ್ಲಿ ಟ್ವಿಟರ್ ಬಳಕೆ ಮಾಡಲು ಸಾಧ್ಯವಾಗುತ್ತಿಲ್ಲ ಕ್ಲಿಕ್ ಮಾಡಿದ ಕೂಡಲೇ ‘ವೆಲ್ ಕಮ್ ಟು ಟ್ವಿಟರ್’ ಎಂದು ತೋರಿಸುತ್ತದೆ ಎಂದು ದೂರಿದ್ದಾರೆ. ಇನ್ನು ಕೆಲವರು ಎಲಾನ್ ಮಸ್ಕ್ ಇತ್ತೀಚಿಗೆ ತನ್ನ ಸಂಸ್ಥೆಯ ಸಾವಿರಾರು ಉದ್ಯೋಗಿಗಳನ್ನು ವಜಾಗೊಳಿಸಿದ ಪರಿಣಾಮ ಈ ಸಮಸ್ಯೆ ತಲೆದೂರಿರಬಹುದು ಎಂದು ಹೇಳಿದ್ದಾರೆ.
ಡೌನ್‌ಡೆಕ್ಟರ್, ವೆಬ್‌ಸೈಟ್‌ಗಳು ಮತ್ತು ಪ್ಲಾಟ್‌ಫಾರ್ಮ್‌ಗಳ ಜಾಗತಿಕ ಸಮಸ್ಯೆಗಳನ್ನು ಪತ್ತೆಹಚ್ಚುವ ವೆಬ್‌ಸೈಟ್, ಭಾರತದಲ್ಲಿನ ಬಳಕೆದಾರರಿಂದ ಸುಮಾರು 619 ದೂರುಗಳು ಬಂದಿವೆ ಎಂದು ವರದಿ ಮಾಡಿವೆ.