Advertisement

ಆಕ್ಷೇಪಾರ್ಹ ಭೂಪಟ: ಟ್ವಿಟರ್ ಇಂಡಿಯಾ ಎಂಡಿ ಮನೀಶ್ ವಿರುದ್ಧ ಎಫ್ ಐಆರ್ ದಾಖಲು

09:14 AM Jun 29, 2021 | Team Udayavani |

ನವದೆಹಲಿ: ಜಮ್ಮು-ಕಾಶ್ಮೀರ ಮತ್ತು ಲಡಾಖ್ ಗಳನ್ನು ಪ್ರತ್ಯೇಕ ದೇಶಗಳಾಗಿ ತೋರಿಸುವ ತಪ್ಪು ಭೂಪಟವನ್ನು ಪ್ರದರ್ಶಿಸಿದ್ದ ಬೆಳವಣಿಗೆ ಹಿನ್ನೆಲೆಯಲ್ಲಿ ಟ್ವಿಟರ್ ಇಂಡಿಯಾ ಆಡಳಿತ ನಿರ್ದೇಶಕ ಮನೀಶ್ ಮಹೇಶ್ವರಿ ವಿರುದ್ಧ ವಿವಿಧ ಐಪಿಸಿ ಸೆಕ್ಷನ್ ಗಳಡಿ ಪ್ರಕರಣ ದಾಖಲಿಸಲಾಗಿದೆ ಎಂದು ವರದಿ ತಿಳಿಸಿದೆ.

Advertisement

ಇದನ್ನೂ ಓದಿ:ಹಳೆಯ ವೈಭವ ಮತ್ತೆ ಮರುಕಳಿಸಲಿ: ತಾರೆಗಳ ತೋಟದಲ್ಲಿ ಕಲಾವಿದರ ಸಂಗಮ

ಟ್ವಿಟರ್ ವೆಬ್ ಸೈಟ್ ನಲ್ಲಿ ಭಾರತದ ಭೂಪಟವನ್ನು ತಪ್ಪಾಗಿ ಪ್ರದರ್ಶಿಸಿದ್ದ ನಿಟ್ಟಿನಲ್ಲಿ ಟ್ವಿಟರ್ ಇಂಡಿಯಾ ಆಡಳಿತ ನಿರ್ದೇಶಕ ಮನೀಶ್ ಮಹೇಶ್ವರಿ ವಿರುದ್ಧ ಭಾರತೀಯ ದಂಡ ಸಂಹಿತೆ ಸೆಕ್ಷನ್ 505(2) ಮತ್ತು ಮಾಹಿತಿ ತಂತ್ರಜ್ಞಾನ(ತಿದ್ದುಪಡಿ) ಕಾಯ್ದೆ 2008ರ ಸೆಕ್ಷನ್ 74ರ ಅನ್ವಯ ದೂರು ದಾಖಲಿಸಿಕೊಳ್ಳಲಾಗಿದೆ ಎಂದು ವರದಿ ಹೇಳಿದೆ.

ಬುಲಂದ್ ಶಹರ್ ನಲ್ಲಿರುವ ಭಜರಂಗದಳದ ಮುಖಂಡರು ಟ್ವಿಟರ್ ಎಂಡಿ ಮನೀಶ್ ಮಹೇಶ್ವರಿ ವಿರುದ್ಧ ದೂರು ನೀಡಿರುವುದಾಗಿ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಜಮ್ಮು-ಕಾಶ್ಮೀರ ಮತ್ತು ಲಡಾಖ್ ಅನ್ನು ಟ್ವಿಟರ್ ವೆಬ್ ಸೈಟ್ ನ ಕೆರೀಯರ್ ವಿಭಾಗದಲ್ಲಿ ಟ್ವೀಪ್ ಲೈಫ್ ಎಂಬ ಶೀರ್ಷಿಕೆಯಡಿ ಪ್ರತ್ಯೇಕ ದೇಶಗಳಾಗಿ ತೋರಿಸುವ ತಪ್ಪು ಭೂಪಟವನ್ನು ಪ್ರದರ್ಶಿಸಿತ್ತು.

ತಪ್ಪು ಭೂಪಟವನ್ನು ಪ್ರದರ್ಶಿಸಿದ್ದ ಟ್ವಿಟರ್ ವಿರುದ್ಧ ನೆಟ್ಟಿಗರು ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದರು. ಅಲ್ಲದೇ ಟ್ವಿಟರ್ ವಿರುದ್ಧ ಕ್ರಮಕೈಗೊಳ್ಳುವಂತೆ ಒತ್ತಾಯಿಸಿದ್ದು, ಈ ಬೆಳವಣಿಗೆ ಬೆನ್ನಲ್ಲೇ ಟ್ವೀಪ್ ಲೈಫ್ ವೆಬ್ ಪೇಜ್ ಅನ್ನು ಸಂಪೂರ್ಣವಾಗಿ ತೆಗೆದು ಹಾಕಿತ್ತು.

Advertisement
Advertisement

Udayavani is now on Telegram. Click here to join our channel and stay updated with the latest news.

Next