Advertisement

ಈ ನೆಲದ ಮಾಹಿತಿ ತಂತ್ರಜ್ಞಾನ ನಿಯಮ 2021 ನನ್ನು ಟ್ವೀಟರ್ ಪಾಲಿಸತಕ್ಕದ್ದು : ಕೇಂದ್ರ ಸರ್ಕಾರ

08:47 PM Jul 05, 2021 | Team Udayavani |

ನವ ದೆಹಲಿ : ಮಾಹಿತಿ ತಂತ್ರಜ್ಞಾನ ನಿಯಮ 2021 ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಈ ನೆಲದ ಕಾನೂನು. ಟ್ವೀಟರ್ ಇದನ್ನು ಪಾಲಿಸದೇ ಇರಲು ಸಾಧ್ಯವಿಲ್ಲ. ಕಡ್ಡಾಯವಾಗಿ ಈ ನಿಯಮಗಳನ್ನು ಪಾಲಿಸತಕ್ಕದ್ದು ಎಂದು ಕೇಂದ್ರ ಸರ್ಕಾರ ಇಂದು(ಸೋಮವಾರ, ಜುಲೈ 5) ದೆಹಲಿ ಹೈ ಕೋರ್ಟ್ ಗೆ ಹೇಳಿದೆ.

Advertisement

ಭಾರತದ ದೇಶ ಜಾರಿಗೆ ತಂದಿರುವ ಮಾಹಿತಿ ತಂತ್ರಜ್ಞಾನ ನಿಯಮ 2021 ನನ್ನು ಪಾಲಿಸುವಲ್ಲಿ ಟ್ವೀಟರ್ ಸಂಸ್ಥೆ ನಿರ್ಲಕ್ಷ್ಯ ಧೋರಣೆಯನ್ನು ತೋರಿಸಿದೆ. ಈ ಹಿನ್ನೆಲೆಯಲ್ಲಿ ಟ್ವೀಟರ್ ಭವಿಷ್ಯದ ದಿನಗಳಲ್ಲಿ ಸಾಮಾಜಿಕ ಜಾಲತಾಣವೆಂಬ ಕಾರಣಕ್ಕೆ ಹೊಂದಿರುವ ಕೆಲವು ಪ್ರಮುಖ ರಿಯಾಯಿತಿಗಳನ್ನು ಕಳೆದುಕೊಳ್ಳುವುದರಲ್ಲಿ ಅನುಮಾನವಿಲ್ಲ ಎಂದು ತಿಳಿಸಿದೆ.

ಇದನ್ನೂ ಓದಿ : 750 ಆಮ್ಲಜನಕ ಸಾಂದ್ರಕ ನೀಡಿದ ಗೀವ್‌ ಇಂಡಿಯಾ : ಸಿಎಂ, ಡಿಸಿಎಂಗೆ ಹಸ್ತಾಂತರ

ಮಾಹಿತಿ ತಂತ್ರಜ್ಞಾನ ನಿಯಮ 2021ರ ನಿಯಮಗಳಿ ಜಾರಿಗೆ ಬಂದ ಆರಂಭದಲ್ಲಿ ಟ್ವಿಟರ್, ಸ್ಥಾನಿಕ ದೂರು ವಿಲೇವಾರಿ ಅಧಿಕಾರಿ ಮತ್ತು ನೋಡೆಲ್ ಸಂಪರ್ಕ ಅಧಿಕಾರಿಯನ್ನು ನೇಮಿಸಿಕೊಂಡಿರುವುದನ್ನು ಹೊರತಾಗಿ ನಿಯಮದ  ಅನ್ವಯ ಟ್ವಿಟರ್ ಸಂಸ್ಥೆ ಈವರೆಗೂ ದೂರು ವಿಲೇವಾರಿ ಅಧಿಕಾರಿಯನ್ನು ನೇಮಕ ಮಾಡಿಕೊಂಡಿಲ್ಲ. ಆದರೆ,  ಕೆಲವು ದಿನಗಳಲ್ಲಿ ಸ್ಥಾನಿಕ ದೂರು ವಿಲೇವಾರಿ ಅಧಿಕಾರಿ ಮತ್ತು ನೋಡೆಲ್ ಸಂಪರ್ಕ ಅಧಿಕಾರಿ ಇವರಿಬ್ಬರೂ ತಮ್ಮ ಸ್ಥಾನಗಳಿಗೆ ರಾಜೀನಾಮೆ ನೀಡಿದರು ಎಂದು ಟ್ವಿಟರ್ ಹೇಳಿಕೊಂಡಿತ್ತು.

ದೇಶದಲ್ಲಿ ದಾಖಲಾಗುವ ದೂರುಗಳನ್ನು ಸಂಸ್ಥೆಯ ಅಮೆರಿಕಾ ಶಾಖೆಯ ಅಧಿಕಾರಿಗಳೇ ನಿರ್ವಹಣೆ ಮಾಡುತ್ತಾರೆ., ಇದು ದೇಶದ ನೆಲದ ಕಾನೂನಿಗೆ ವಿರುದ್ಧವಾಗಿದೆ ಎಂದು ಸರ್ಕಾರ ಕೋರ್ಟ್ ಗೆ ತಿಳಿಸಿದೆ.

Advertisement

ಈ ತಿಂಗಳ ಆರಂಭದಲ್ಲೇ ಅಂದರೇ, ಜುಲೈ 1ರೊಳಗಾಗಿ ಮಾಹಿತಿ ತಂತ್ರಜ್ಞಾನ ನಿಯಮ 2021 ನನ್ನು ಟ್ವೀಟರ್ ಸಂಸ್ಥೆ ಪೂರ್ಣ ಪ್ರಮಾಣದಲ್ಲಿ ಅನುಸರಿಸಬೇಕಿತ್ತು, ಆದರೇ, ಸಂಸ್ಥೆ ಸರ್ಕಾರದ ಕಾನೂನನ್ನು ಉಲ್ಲಂಘನೆ ಮಾಡಿದೆ. ಮುಖ್ಯ ದೂರು ಪರಿಹಾರ ಅಧಿಕಾರಿಯನ್ನು ಇದುವರೆಗೂ ನೇಮಿಸಿಕೊಂಡಿಲ್ಲ, ಮಾತ್ರವಲ್ಲದೇ,  ಸ್ಥಾನಿಕ ದೂರು ಪರಿಹಾರ ಅಧಿಕಾರಿ ಹಾಗೂ ನೋಡೆಲ್ ಸಂಪರ್ಕ ಅಧಿಕಾರಿಗಳ ಹುದ್ದೆಗಳು ಇನ್ನೂ ಖಾಲಿ ಇವೆ.  ಮೇ 29ರೊಳಗಾಗಿ ದೇಶದಲ್ಲಿ ಸಂಪರ್ಕಕ್ಕೆ ನೀಡಬೇಕಾದ ವಿಳಾಸವನ್ನು ನೀಡಬೇಕಿತ್ತು, ಆದರೇ, ಅದನ್ನೂ ಕೂಡ ಸಂಸ್ಥೆ ನೀಡದೇ, ದೇಶದ ಕಾನೂನಿನ ವಿರುದ್ಧ ನಡೆದುಕೊಳ್ಳುತ್ತಿದೆ ಸರ್ಕಾರ ಹೇಳಿದೆ.

ಇದನ್ನೂ ಓದಿ : ಬ್ರಾಹ್ಮಣರಿಗೂ ಜಾತಿ ಪ್ರಮಾಣಪತ್ರ ಸಿಕ್ಕಿದ್ದು ನಮ್ಮ ಸರ್ಕಾರದಿಂದ : ಸಚಿವ ಆರ್ ಅಶೋಕ್

Advertisement

Udayavani is now on Telegram. Click here to join our channel and stay updated with the latest news.

Next