Advertisement

ಟ್ವಿಟರ್‌ ಕಚೇರಿ: ಪಾವತಿಯಾಗದ ಬಾಡಿಗೆ; ಉದ್ಯೋಗಿಗಳಿಗೆ ಕಷ್ಟ

05:48 PM Jan 12, 2023 | Team Udayavani |

ಸಿಂಗಾಪುರ: ಉದ್ಯಮಿ ಎಲಾಸ್‌ ಮಸ್ಕ್ ಮಾಲೀಕತ್ವಕ್ಕೆ ಬಂದ ಬಳಿಕ ಟ್ವಿಟರ್‌ಗೆ ಇನ್ನಿಲ್ಲದ ಸಂಕಷ್ಟಗಳು ಎದುರಾಗುತ್ತವೇ ಇವೆ. ಹೊಸ ಬೆಳವಣಿಗೆಯಲ್ಲಿ ಸಿಂಗಾಪುರದಲ್ಲಿ ಮೈಕ್ರೋಬ್ಲಾಗಿಂಗ್‌ ಜಾಲತಾಣದ ಕಚೇರಿ ಇರುವ ಕಟ್ಟಡಕ್ಕೆ ಬಾಡಿಗೆ ಪಾವತಿ ಮಾಡಿಲ್ಲವೆಂದು, ಅಲ್ಲಿ ಇರುವ ಎಲ್ಲಾ ಉದ್ಯೋಗಿಗಳಗಳನ್ನು ಹೊರಕ್ಕೆ ಕಳುಹಿಸಿ, ಬೀಗ ಹಾಕಿದ್ದಾರೆ.

Advertisement

ಸ್ಯಾನ್‌ಫ್ರಾನ್ಸಿಸ್ಕೋದಲ್ಲಿ ಕೂಡ ಕಟ್ಟಡಕ್ಕೆ ಬಾಡಿಗೆ ಪಾವತಿ ಮಾಡದೇ ಇದ್ದ ಕಾರಣಕ್ಕಾಗಿ ಅದರ ಮಾಲೀಕರು ಉದ್ಯೋಗಿಗಳನ್ನು ಹೊರಗೆ ಕಳುಹಿಸಿದ್ದಾರೆ. ಮತ್ತೂಂದು ಬೆಳವಣಿಗೆಯಲ್ಲಿ 150 ಕೋಟಿ ಯೂಸರ್‌ ನೇಮ್‌ಗಳನ್ನು ಬಹಿರಂಗವಾಗಿ ಹರಾಜು ಹಾಕಲು ಮಸ್ಕ್ ಮುಂದಾಗಿದ್ದಾರೆ ಎಂದು “ದ ನ್ಯೂಯಾರ್ಕ್‌ ಟೈಮ್ಸ್‌’ ವರದಿ ಮಾಡಿದೆ.  ಅದನ್ನು ಯಾವ ರೀತಿ ನಡೆಸಲಾಗುತ್ತದೆ ಎಂಬ ಬಗ್ಗೆ ಸ್ಪಷ್ಟತೆ ಇಲ್ಲವೆಂದು ವರದಿಯಲ್ಲಿ ಹೇಳಿದೆ.

Advertisement

Udayavani is now on Telegram. Click here to join our channel and stay updated with the latest news.

Next