ನವದೆಹಲಿ : ಕೋವಿಡ್ ಎರಡನೇ ಅಲೆ ವಿರುದ್ಧ ಹೋರಾಟ ನಡೆಸಿರುವ ಭಾರತಕ್ಕೆ ಟ್ವಿಟರ್ ಕೈ ಜೋಡಿಸಿದೆ. ಮೈಕ್ರೋ ಬ್ಲಾಗಿಂಗ್ ಸೋಶಿಯಲ್ ಮೀಡಿಯಾ ಆದ ಟ್ವಿಟರ್ ಸಂಸ್ಥೆ 110 ಕೋಟಿ ರೂಪಾಯಿ ಆರ್ಥಿಕ ನೆರವು ನೀಡಿದೆ.
ಭಾರತದಲ್ಲಿ ವೈದ್ಯಕೀಯ ನೆರವು ನೀಡಲು ಮೂರು ಸರ್ಕಾರೇತರ ಸಂಸ್ಥೆಗಳಿಗೆ ಈ ದೇಣಿಗೆ ನೀಡಿಲಾಗಿದೆ ಎಂದು ಟ್ವಿಟರ್ ಇಂಕ್‌ನ ಸಿಇಒ ಜಾಕ್ ಪ್ಯಾಟ್ರಿಕ್ ಟ್ವೀಟ್ ಮಾಡಿದ್ದಾರೆ.
ಕಳೆದ ವರ್ಷ ಕೋವಿಡ್ ಮೊದಲ ಅಲೆಯಿಂದ ನಲುಗಿದ್ದ ಭಾರತಕ್ಕೆ ಎರಡನೇ ಅಲೆ ಮತ್ತಷ್ಟು ಹೊಡೆತ ಕೊಡುತ್ತಿದೆ. ಪ್ರತಿ ನಿತ್ಯ ಮೂರು ಲಕ್ಷಕ್ಕೂ ಹೆಚ್ಚು ಕೋವಿಡ್ ಪ್ರಕರಣಗಳು ವರದಿಯಾಗುತ್ತಿವೆ. ಇತ್ತ ಸಾವಿನ ಸಂಖ್ಯೆಯೂ ಹೆಚ್ಚುತ್ತಿದೆ. ಕೋವಿಡ್ ಮಹಾಮಾರಿಯನ್ನು ಯಶಸ್ವಿಯಾಗಿ ಎದುರಿಸಲು ಸನ್ನದ್ದಗೊಂಡಿರುವ ಭಾರತ, ಕೋವಿಡ್ ರೋಗಿಗಳಿಗೆ ಆಕ್ಸಿಜನ್ ಹಾಗೂ ಬೆಡ್ ವ್ಯವಸ್ಥೆ ಕಲ್ಪಿಸಿದೆ.
ಇತ್ತ ಲಸಿಕಾ ಅಭಿಯಾನವನ್ನೂ ಚುರುಕುಗೊಳಿಸಿರುವ ಭಾರತ, 18 ವಯೋಮಾನ ದಾಟಿದವರಿಗೆಲ್ಲ ಲಸಿಕೆ ನೀಡುತ್ತಿದೆ.