Advertisement

ಟ್ರಂಪ್‌ ಟ್ವೀಟ್‌ ನಿಷ್ಕ್ರಿಯಗೊಳಿಸಿದ ಟ್ವಿಟರ್‌

10:48 AM Jul 20, 2020 | mahesh |

ವಾಷಿಂಗ್ಟನ್‌: ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರು ಶನಿವಾರ ರೀ-ಟ್ವೀಟ್‌ ಮಾಡಿದ್ದ ಪ್ರಚಾರ ಶೈಲಿಯ ವೀಡಿಯೋವೊಂದನ್ನು ಟ್ವಿಟ್ಟರ್‌ ನಿಷ್ಕ್ರಿಯಗೊಳಿಸಿದೆ. ಲಿಂಕಿನ್‌ ಪಾರ್ಕ್‌ ಗುಂಪಿನ ಸಂಗೀತವನ್ನು ಒಳಗೊಂಡಿರುವ ಈ ವೀಡಿಯೋವನ್ನು ಶನಿವಾರ ತಡರಾತ್ರಿ ಟ್ರಂಪ್‌ ಅವರ ಟ್ವಿಟರ್‌ ಖಾತೆಯಿಂದ ತೆಗೆಯಲಾಗಿದೆ. ಕೃತಿಸ್ವಾಮ್ಯ ದೂರಿನ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಂಡಿದ್ದಾಗಿ ಟ್ವಿಟರ್‌ ತಿಳಿಸಿದೆ. ಆದರೆ ಶ್ವೇತಭವನದ ಅಧಿಕಾರಿಗಳು ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

Advertisement

ಅಮೆರಿಕದ ಹೆಸರಾಂತ ರಾಕ್‌ ಮ್ಯೂಸಿಕ್‌ ಬ್ಯಾಂಡ್‌ ಆದ ಲಿಂಕಿನ್‌ ಪಾರ್ಕ್‌ ನಿಂದ ಹೊರಬಂದಿದ್ದ “ಇನ್‌ ದ ಎಂಡ್‌’ ಎಂಬ ಮ್ಯೂಸಿಕ್‌ ಆಲ್ಬಂನಲ್ಲಿನ ಸಂಗೀತದ ತುಣುಕೊಂದನ್ನು ಕದ್ದು ಟ್ರಂಪ್‌ ಅವರ ಪ್ರಚಾರ ತಂಡ ಟ್ರಂಪ್‌ ಅವರ ವೀಡಿಯೋವೊಂದಕ್ಕೆ ಬಳಸಿಕೊಂಡಿತ್ತು. ಈ ಬಗ್ಗೆ ಅನೇಕ ಆಕ್ಷೇಪಗಳು, ದೂರುಗಳು ಬಂದಿದ್ದರಿಂದ ಆ ವೀಡಿಯೋವನ್ನು ಟ್ವಿಟರ್‌ ಸಂಸ್ಥೆ ತೆಗೆದುಹಾಕಿದೆ.

“ಬಿಡೆನ್‌ ಅಧ್ಯಕ್ಷರಾದರೆ ಭಾರತಕ್ಕೆ ಯುಎನ್‌ಎಸ್‌ಸಿ ಸದಸ್ಯತ್ವ’
ಇದೇ ನವೆಂಬರ್‌ನಲ್ಲಿ ನಡೆಯಲಿರುವ ಅಧ್ಯಕ್ಷೀಯ ಚುನಾವಣೆಯಲ್ಲಿ ಡೆಮಾಕ್ರೆಟಿಕ್‌ ಪಕ್ಷದ ಅಭ್ಯರ್ಥಿ ಜೋ ಬಿಡೆನ್‌ ಆಯ್ಕೆಯಾದರೆ, ವಿಶ್ವಸಂಸ್ಥೆಯಂತಹ ಜಾಗತಿಕ ಸಂಘಟನೆಗಳನ್ನು ಪುನರ್‌ ರೂಪಿಸಲು ಶ್ರಮಿಸಲಿದ್ದಾರೆ. ಅಲ್ಲದೆ ಭದ್ರತಾ ಮಂಡಳಿಯಲ್ಲಿ ಭಾರತಕ್ಕೆ ಶಾಶ್ವತ ಸದಸ್ಯತ್ವ ದೊರಕಿಸಲು ನೆರವಾಗಲಿದ್ದಾರೆ ಎಂದು ಈ ಹಿಂದೆ ಭಾರತದಲ್ಲಿ ಅಮೆರಿಕದ ರಾಯಭಾರಿಯಾಗಿದ್ದ ರಿಚರ್ಡ್‌ ವರ್ಮಾ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next