Advertisement

ಟ್ವಿಟರ್‌ ಶುದ್ಧೀಕರಣ ಪ್ರಕ್ರಿಯೆ; ಫಾಲೋವರ್‌ಗಳ ಸಂಖ್ಯೆ ಇಳಿಕೆ

06:00 AM Jul 14, 2018 | Team Udayavani |

ನವದೆಹಲಿ: ಸಾಮಾಜಿಕ ಅಂತರ್ಜಾಲ ತಾಣ ಟ್ವಿಟರ್‌ ನಕಲಿ ಖಾತೆಗಳನ್ನು ನಿಯಂತ್ರಿಸುವುದಕ್ಕೆ ಮುಂದಾಗಿದ್ದು, ಕಳೆದ ಎರಡು ದಿನಗಳಿಂದ ಕೋಟ್ಯಂತರ ಖಾತೆಗಳನ್ನು ರದ್ದು ಗೊಳಿಸಿದೆ. ಇದರಿಂದಾಗಿ ಜಗತ್ತಿನಾದ್ಯಂತ ಹಲವು ಗಣ್ಯರ ಖಾತೆಯಲ್ಲಿನ ಫಾಲೋವರ್‌ಗಳ ಸಂಖ್ಯೆಯಲ್ಲಿ ದಿನ ಬೆಳಗಾಗುವುದರೊಳಗೆ ಭಾರಿ ಇಳಿಕೆ ಕಂಡುಬಂದಿದೆ. ವಿಶ್ವದಲ್ಲಿ ಅತಿ ಹೆಚ್ಚು ಫಾಲೋವರ್‌ಗಳನ್ನು ಹೊಂದಿರುವ ಗಣ್ಯರ ಪೈಕಿ ಮೂರನೇ ಸ್ಥಾನದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಫಾಲೋವರ್‌ಗಳ ಸಂಖ್ಯೆ 2.85 ಲಕ್ಷ ಕಡಿಮೆಯಾಗಿದೆ. ಮೋದಿ ಫಾಲೋವರ್‌ಗಳ ಸಂಖ್ಯೆ 4,33,83,525 ಇತ್ತು. ಈಗ 4,30,98,779 ಆಗಿದೆ.

Advertisement

ಖಾತೆ ರದ್ದು ಪ್ರಕ್ರಿಯೆ!: ಕೆಲವು ವರ್ಷಗಳಿಂ ದಲೂ ಟ್ವಿಟರ್‌ನಲ್ಲಿ ಬೋಟ್‌ಗಳು ಹಾಗೂ ನಕಲಿ ಖಾತೆಗಳ ಹಾವಳಿ ಜಾಸ್ತಿಯಾಗಿದೆ ಎಂಬ ಆರೋಪ ವಿತ್ತು. ಅನುಮಾನಾಸ್ಪದ ಖಾತೆಗ ಳನ್ನು ಟ್ವಿಟರ್‌ ಸ್ಥಗಿತಗೊಳಿಸಲು ಆರಂಭಿಸಿತ್ತು. ಆದರೆ ಈ ಖಾತೆಗಳನ್ನು ಅಳಿಸಲಾಗಿರಲಿಲ್ಲ. ಅಂದರೆ ಖಾತೆಗಳಿಂದ ಯಾವುದೇ ಹೊಸ ಪೋಸ್ಟ್‌, ಲೈಕ್‌, ರಿಟ್ವೀಟ್‌ ಮಾಡಲು ಸಾಧ್ಯ ವಾಗುತ್ತಿರಲಿಲ್ಲ. ಆದರೆ ಆ ಖಾತೆಗಳು ಯಾರನ್ನು ಫಾಲೋ ಮಾಡಿದರೂ ಅದು ಫಾಲೋವರ್‌ಗಳ ಪಟ್ಟಿಯಲ್ಲಿ ಕಾಣಿಸುತ್ತಿತ್ತು. ಇದೀಗ ಟ್ವಿಟರ್‌ ಇಂತಹ ಖಾತೆಗಳನ್ನು ಸಂಪೂರ್ಣವಾಗಿ ಅಳಿಸಲು ನಿರ್ಧರಿಸಿದೆ. ಇದರಿಂದ ಸಹಜವಾಗಿಯೇ ಫಾಲೋವರ್‌ಗಳ ಸಂಖ್ಯೆ ಇಳಿಕೆ ಕಂಡಿದೆ.

ಈ ಕಾರಣಕ್ಕೆ ಖಾತೆಗಳನ್ನು ಲಾಕ್‌ ಮಾಡಲಾಗಿತ್ತು

ನಕಲಿ ಖಾತೆಗಳು ಎಂಬ ದೂರು ಬಂದಾಗ
ರೋಬೋಟ್‌ಗಳನ್ನು ಬಳಸಿ ಖಾತೆ ತೆರೆದಾಗ
ಸುಳ್ಳು ಸುದ್ದಿಗಳನ್ನು ಹರಡುವ 
ಪ್ರೊಫೈಲ್‌ಗ‌ಳು
ಟ್ವಿಟರ್‌ನಲ್ಲಿ ಸ್ಪ್ಯಾಮ್‌ ಮಾಡುತ್ತಿದ್ದರೆ
ಇತರರನ್ನು ಬೈಯುವುದು ಹಾಗೂ ದ್ವೇಷಕಾರಿ ಹೇಳಿಕೆ ನೀಡುವುದು

Advertisement

Udayavani is now on Telegram. Click here to join our channel and stay updated with the latest news.

Next