ನವದೆಹಲಿ: ಭಾರತ, ಇಂಡೋನೇಷ್ಯಾ ಸೇರಿದಂತೆ ಕೆಲವು ರಾಷ್ಟ್ರಗಳಲ್ಲಿ ಟ್ವಿಟರ್ ಆ್ಯಪ್ ತುಂಬ ನಿಧಾನವಾಗಿ ಕಾರ್ಯ ನಿರ್ವಹಿಸುತ್ತಿದೆ.
Advertisement
ಅಮೆರಿಕದಲ್ಲಿ ಟ್ವಿಟರ್ ಆ್ಯಪ್ ರೀಫ್ರೆಶ್ ಆಗಲು 2 ಸೆಕೆಂಡುಗಳು ಸಾಕು. ಆದರೆ ಭಾರತದಲ್ಲಿ ಇದಕ್ಕೆ 10ರಿಂದ 20 ಸೆಕೆಂಡುಗಳು ಬೇಕಾಗುತ್ತಿದೆ. ಇನ್ನು ಕೆಲವು ದೇಶಗಳಲ್ಲಿ ರೀಫ್ರೆಶ್ ಆಗಲು 30 ಸೆಕೆಂಡ್‌ಗಳ ವರೆಗೆ ಸಮಯ ತೆಗೆದುಕೊಳ್ಳುತ್ತಿದೆ.
ಭಾರತದಲ್ಲಿ ಆಗುತ್ತಿರುವ ಸಮಸ್ಯೆಯನ್ನು ಕೂಡಲೇ ಪರಿಹರಿಸುವಂತೆ ಟ್ವಿಟರ್ ಮಾಲೀಕ ಎಲಾನ್ ಮಸ್ಕ್ ತನ್ನ ಉದ್ಯೋಗಿಗಳಿಗೆ ಸೂಚಿಸಿದ್ದಾನೆ. ಕೆಲವು ದಿನಗಳ ಮೊದಲು ಭಾರತದ ಶೇ.90ರಷ್ಟು ಟ್ವಿಟರ್ ಉದ್ಯೋಗಿಗಳನ್ನು ಮಸ್ಕ್ ವಜಾಗೊಳಿಸಿದ್ದರು.