Advertisement

Deepfake: ಆಲಿಯಾ, ಕಿಯಾರಾ,ದೀಪಿಕಾ.. ನಟಿಯರ ನಗ್ನ ಡೀಪ್‌ಫೇಕ್ ವಿಡಿಯೋ ಟ್ವಿಟರ್ ಮೂಲಕ ಶೇರ್?

06:24 PM Nov 07, 2023 | Team Udayavani |

ಮುಂಬಯಿ: ರಶ್ಮಿಕಾ ಮಂದಣ್ಣ ಅವರ ಫೋಟೋವನ್ನು ಬಳಸಿಕೊಂಡು ಮಾರ್ಫಿಂಗ್‌ ಮಾಡಿರುವ ಸುದ್ದಿ ವೈರಲ್‌ ಆಗುತ್ತಿದ್ದಂತೆ ಇದೀಗ ಸರಣಿಯಾಗಿ ಈ ನಕಲಿ ಟ್ರೆಂಡ್‌ ಸೋಶಿಯಲ್‌ ಮೀಡಿಯಾದಲ್ಲಿ ಮುಂದುವರದಿದೆ.

Advertisement

ಝಾರ ಪಟೇಲ್‌ ಅವರ ಒರಿಜಿನಲ್‌ ವಿಡಿಯೋ ಬಳಸಿಕೊಂಡು ಅದಕ್ಕೆ ರಶ್ಮಿಕಾ ಅವರ ಫೋಟೋವನ್ನು ಜೋಡಿಸಿ ವೈರಲ್‌ ಮಾಡಿರುವ ವಿಚಾರ ಗೊತ್ತೇ ಇದೆ. ಆ ಬಳಿಕ ನಟಿ ಕತ್ರಿನಾ ಕೈಫ್‌ ಅವರ ಸಿನಿಮಾದ ಫೋಟೋವನ್ನು ಕೂಡ ಆಶ್ಲೀಲವಾಗಿ ಮಾರ್ಫಿಂಗ್‌ ಮಾಡಿ ವೈರಲ್‌ ಮಾಡಲಾಗಿದೆ.

ಇದೀಗ ಟ್ವಿಟರ್‌ ನಲ್ಲಿ ಬಾಲಿವುಡ್‌ ತಾರೆಯರ ಫೋಟೋವನ್ನು ಮಾರ್ಫಿಂಗ್‌ ಮಾಡಿ ಅಪ್ಲೋಡ್‌ ಮಾಡಲಾಗಿದೆ.

ಕ್ರೇಜಿಯಾಶ್ಫಾನ್ ಎಂಬ(@crazyashfan) ಟ್ವಿಟರ್‌ ಖಾತೆಯೊಂದು ಬಾಲಿವುಡ್‌ ಬೆಡಗಿಯರ ಫೋಟೋವನ್ನು ಆಶ್ಲೀಲವಾಗಿ ಮಾರ್ಫಿಂಗ್‌ ಮಾಡಿದೆ ಎಂದು ಬೂಮ್ ಲೈವ್ ವರದಿ ತಿಳಿಸಿದೆ. ಕ್ರೇಜಿಯಾಶ್ಫಾನ್ ತನ್ನ ಖಾತೆಯಲ್ಲಿ ಫೋಟೋವನ್ನು ತಿರುಚುವ ಕಲಾವಿದ (Photo and video manipulation artist) ಎಂದು ಬರೆದುಕೊಂಡಿದ್ದ. ಆದರೆ ಆತನ ಖಾತೆಯನ್ನು ಭಾರತೀಯ ನಟಿಯರ ಮುಖಗಳನ್ನು ವಯಸ್ಕ ನಟಿಯರ (Adult Starts) ಮುಖಗಳೊಂದಿಗೆ ಜೋಡಿಸಲು AI ತಂತ್ರಜ್ಞಾನವನ್ನು ಬಳಸುತ್ತಿದ್ದ ಎಂದು ವರದಿ ತಿಳಿಸಿದೆ.

ಇದನ್ನೂ ಓದಿ: Deepfake: ರಶ್ಮಿಕಾ ಬಳಿಕ ಕತ್ರಿನಾಳ ಫೋಟೋ ಡೀಪ್‌ ಫೇಕ್; ಆಶ್ಲೀಲ ಮಾರ್ಫಿಂಗ್‌ ವೈರಲ್

Advertisement

ಟ್ವಿಟರ್‌ ಖಾತೆಯಲ್ಲಿ ಒಟ್ಟು 39 ಪೋಸ್ಟ್‌ ಗಳನ್ನು ಈತ ಮಾಡಿದ್ದು, ಇದರಲ್ಲಿ ಆಲಿಯಾ ಭಟ್, ಕಿಯಾರಾ ಅಡ್ವಾಣಿ, ಕಾಜೋಲ್, ದೀಪಿಕಾ ಪಡುಕೋಣೆ ಸೇರಿದಂತೆ ಇತರೆ ಬಿಟೌನ್‌ ಬೆಡಗಿಯರು ಲೈಂಗಿಕ ಚಟುವಟಿಕೆಯಲ್ಲಿ ತೊಡಗಿರುವಂತೆ ಫೋಟೋಗಳನ್ನು ಮಾರ್ಫಿಂಗ್‌ ಮಾಡಲಾಗುತ್ತಿತ್ತು ಎಂದು ವರದಿ ತಿಳಿಸಿದೆ.

ಈ ಖಾತೆ ಇತರೆ ನಾಲ್ಕು ಖಾತೆಯನ್ನು ಫಾಲೋ ಮಾಡುತ್ತಿತ್ತು. ಆ ಖಾತೆ ಕೂಡ ಇಂಥದ್ದೇ ಮಾರ್ಫಿಂಗ್‌ ಮಾಡುವ ಕೆಲಸವನ್ನು ಮಾಡುತ್ತಿತ್ತು. ಸದ್ಯ ಫೋಟೋಗಳು ವೈರಲ್‌ ಆದ ಬಳಿಕ ಈ ಖಾತೆಯನ್ನು ಡಿಲೀಟ್‌ ಮಾಡಲಾಗಿದೆ ಎಂದು ವರದಿ ತಿಳಿಸಿದೆ. ʼ

ಬಾಲಿವುಡ್‌ ನಟಯರು ಮಾತ್ರವಲ್ಲದೆ ಹಾಲಿವುಡ್‌ ಸ್ಟಾರ್‌ ನಟಿ ಸ್ಕಾರ್ಲಾಟ್ ಜೋಹಾನ್ಸೆನ್ ಅವರು ತನ್ನ ಧ್ವನಿಯನ್ನು ಎಐ ಕ್ಲೋನ್‌ ನಲ್ಲಿ ಜಾಹೀರಾತುವೊಂದಕ್ಕೆ ಬಳಸಿದ ಕಾರಣ ಅದರ ವಿರುದ್ದ ದೂರು ದಾಖಲಿಸಿದ್ದರು.

 

Advertisement

Udayavani is now on Telegram. Click here to join our channel and stay updated with the latest news.

Next