ಮುಂಬಯಿ: “ಡ್ರಗ್ಸ್ ಪ್ರಕರಣದಲ್ಲಿ ಆರ್ಯನ್ ಖಾನ್‌ರನ್ನು ಪಾರು ಮಾಡಲು 25 ಕೋಟಿ ರೂ. ಮೊತ್ತವನ್ನು ನಟ ಶಾರುಖ್ ಖಾನ್ ಅವರಿಂದ ಲಂಚ ಕೇಳಿದ್ದಾರೆ.
ಎನ್‌ಸಿಬಿಯ ಮುಂಬಯಿ ಕಚೇರಿಯ ನಿರ್ದೇಶಕ ಸಮೀರ್ ವಾಂಖೆಡೆ ಹೆಸರಲ್ಲಿ ಸಾಕ್ಷಿದಾರ ಕಿರಣ್ ಗೋಸಾವಿ ಈ ಮೊತ್ತ ಕೇಳಿದ್ದಾರೆ’ ಎಂದು ಗೋಸಾವಿ ಅವರ ಚಾಲಕ ಪ್ರಭಾಕರ ರೊಹೊಜಿ ಸೈಲ್ ಆರೋಪ ಮಾಡಿದ್ದಾರೆ. ಇದರ ಜತೆಗೆ ಹತ್ತು ಖಾಲಿ ಪೇಪರ್‌ಗಳಿಗೆ ಎನ್‌ಸಿಪಿ ಅಧಿಕಾರಿಗಳು ಸಹಿ ಹಾಕುವಂತೆ ಬಲವಂತ ಮಾಡಿದ್ದರು ಎಂದೂ ಹೇಳಿಕೊಂಡಿದ್ದಾರೆ. ಇದರಿಂದಾಗಿ ಬಹುಚರ್ಚಿತ ಪ್ರಕರಣಕ್ಕೆ ಹೊಸ ಟ್ವಿಸ್ಟ್ ಸಿಕ್ಕಿದಂತಾಗಿದೆ.
25 ಕೋಟಿ ರೊ. ಮೊತ್ತದ ಮೊದಲ ಕಂತಿನಲ್ಲಿ 50 ಲಕ್ಷ ರೂ. ಮೊತ್ತವನ್ನು ಸಂಗ್ರಹಿಸಿ ಕಿರಣ್ ಗೋಸಾವಿ ಅವರಿಗೆ ಹಸ್ತಾಂತರಿಸಿದ್ದೆ ಎಂದೂ ಸೈಲ್ ಅವರು ದೂರಿದ್ದಾರೆ. ಈ ಪ್ರಕರಣದಲ್ಲಿ ಸ್ಯಾಮ್ ಡಿ’ ಸೋಜಾ ಎಂಬವರೂ ಭಾಗಿಯಾಗಿ ದ್ದಾರೆ. ಅವರು ಶಾರುಖ್ ಖಾನ್ ಅವರಿಂದ 25 ಕೋಟಿ ರೂ. ಮೊತ್ತವನ್ನು ಕೇಳಿದ್ದಾರೆ ಎಂದು ದೂರಿದ್ದಾರೆ. ಫೋನ್‌ನಲ್ಲಿ ಸ್ಯಾಮ್ ಜತೆಗೆ ಮಾತನಾಡುವ ವೇಳೆ, ಗೋಸಾವಿ ಈ ಅಂಶ ಪ್ರಸ್ತಾವಿಸಿದ್ದರು. ದಾಳಿ ನಡೆದ ದಿನ ಕಿರಣ್ ಗೋಸಾವಿ ಜತೆಗೆ ವಿಲಾಸಿ ನೌಕೆಗೆ ಭೇಟಿ ನೀಡಿದ್ದೆ ಎಂದಿದ್ದಾರೆ.
ಇದನ್ನೂ ಓದಿ:ಕಿತ್ತೂರಿನಲ್ಲಿ ಮೋಡಿ ಮಾಡಿದ ವಿಜಯಪ್ರಕಾಶ ಹಾಡು
ಎನ್‌ಸಿಬಿ ತಿರಸ್ಕಾರ: ಈ ಹೇಳಿಕೆಯನ್ನು ಎನ್‌ಸಿಬಿ ತಿರಸ್ಕರಿಸಿ ಹೇಳಿಕೆ ಬಿಡುಗಡೆ ಮಾಡಿದೆ. ಸಮೀರ್ ವಾಂಖೆಡೆ ಇಂಥ ಆರೋಪಗಳನ್ನು ನಿರಾಕರಿಸಿದ್ದಾರೆ ಎಂದಿದೆ. ಜತೆಗೆ ಈ ಆರೋಪಗಳಿಗೆ ಸೂಕ್ತ ಸಾಕ್ಷ್ಯಾಧಾರಗಳೂ ಇಲ್ಲವೆಂದಿದೆ.
ಬಿಜೆಪಿ ಸೇರಿದರೆ…: ಒಂದು ವೇಳೆ, ನಟ ಶಾರುಖ್ ಖಾನ್ ಬಿಜೆಪಿ ಸೇರಿ ದರೆ, ಸದ್ಯ ಪತ್ತೆಯಾಗಿರುವ ಮಾದಕ ವಸ್ತುಗಳು ಸಕ್ಕರೆಯಾಗಿ ಮಾರ್ಪಾ ಡಾಗಲಿವೆ ಎಂದು ಎನ್‌ಸಿಪಿ ಮುಖಂಡ ಛಗನ್ ಭುಜಬಲ್ ಲೇವಡಿ ಮಾಡಿದ್ದಾರೆ.