Advertisement
ಸುಡುಬಿಸಿಲಿಗೆ ತಾ|ನಾದ್ಯಂತ ಆಕಸ್ಮಿಕ ಬೆಂಕಿಗೆ ನೂರಾರು ಎಕರೆ ಕೃಷಿ ಭೂಮಿ ಸಹಿತ ಖಾಸಗಿ- ಸರಕಾರಿ ಗುಡ್ಡ ಪ್ರದೇಶಗಳು ಬೆಂಕಿಗೆ ಆಹುತಿಯಾಗಿವೆ. ಆಸ್ತಿಪಾಸ್ತಿ ನಷ್ಟವಾಗಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಜನವರಿಯಿಂದ ಮಾರ್ಚ್‌ವರೆಗೆ ತಾ|ನಲ್ಲಿ ಸಂಭವಿಸಿದ ಬೆಂಕಿ ಅವಘಡಗಳ ಅಂಕಿ-ಅಂಶದಲ್ಲಿ ಗಣನೀಯ ಏರಿಕೆಯಾಗಿದೆ.
Related Articles
Advertisement
ಪ್ರವಾಹ, ಬರ, ಭೂಕಂಪ, ಬಿರುಗಾಳಿ, ಕಾಳ್ಗಿಚ್ಚು, ಚಂಡಮಾರುತ, ಭೂಕುಸಿತ, ಜ್ವಾಲಾಮುಖೀ ಮುಂತಾದ ಪ್ರಕೃತಿ ವಿಕೋಪಗಳು ಹಾಗೂ ಮಾನವ ಸೃಷ್ಟಿಸುವ ವಿಪತ್ತುಗಳ ಸಂದರ್ಭದಲ್ಲಿ ಅಗ್ನಿಶಾಮಕ ದಳದ ಸಿಬಂದಿ ತತ್‌ಕ್ಷಣ ಸ್ಪಂದಿಸಬೇಕು. ರಾಜ್ಯ ಅಗ್ನಿ ಶಾಮಕ ಸಲಹಾ ಸಮಿತಿ (ಎಸ್‌ಎಫ್ಎಸಿ) ನಿಯಮಾನುಸಾರ ಪ್ರತೀ 10 ಚ.ಕಿ.ಮೀ. ಪ್ರದೇಶಕ್ಕೆ ಒಂದು ಅಗ್ನಿಶಾಮಕ ಠಾಣೆ ಇರಬೇಕು. ಅತೀ ಹೆಚ್ಚು ಅಪಾಯಕಾರಿ ಪ್ರದೇಶಗಳಲ್ಲಿ ಗರಿಷ್ಠ 3 ನಿಮಿಷಗಳಲ್ಲಿ ಪ್ರತಿಕ್ರಿಯಿಸಲು ಪ್ರಯತ್ನಿಸಬೇಕು. ಇನ್ನಿತರ ಪ್ರದೇಶ ಗಳನ್ನು ತಲುಪಲು 5 ನಿಮಿಷ ಮೀರಬಾರದು. ಆದರೆ, ನಿಯಮ ಮಾಡಿದವರು ಅನುಷ್ಠಾನ ಕುರಿತು ತಲೆ ಕೆಡಿಸಿಕೊಳ್ಳದಿರುವುದು ಅಗ್ನಿಶಾಮಕ ದಳದ ಸಿಬಂದಿಗೆ ತಲೆ ನೋವಾಗಿದೆ.
ಅನಾಹುತ ಕೈ ಮೀರಿದರೆ ಸಿಬಂದಿ ಮೇಲೆ ಅಕ್ರೋಶಅನಾಹುತ ಕೈ ಮೀರಿದರೆ ಅಸಹಾಯಕ ಸಿಬಂದಿಯೇ ಜನರ ಆಕ್ರೊçಶಕ್ಕೆ ಗುರಿಯಾಗುತ್ತಾರೆ. ಈ ನಿಟ್ಟಿನಲ್ಲಿ ಸ್ಥಳೀಯ ಜನಪ್ರತಿನಿಧಿಗಳು, ಆಡಳಿತ ಸಂಸ್ಥೆಗಳು ಠಾಣೆಯ ತುರ್ತು ಅಗತ್ಯಗಳನ್ನು ಪೂರೈಸಲು ಕ್ರಮ ಕೈಗೊಳ್ಳಬೇಕು ಹೆಬ್ರಿಗೆ ವಿಶೇಷ ಪ್ರಕರಣವೆಂದು ಪರಿಗಣಿಸಿ ಹೊಸ ಅಗ್ನಿ ಶಾಮಕ ಠಾಣೆಯನ್ನು ಮಂಜೂರುಗೊಳಿಸುವ ಬಗ್ಗೆ ಸಿಎಂ ಬಸವರಾಜ ಬೊಮ್ಮಾಯಿ ಅವರು ಗೃಹ ಸಚಿವರಾಗಿದ್ದ ವೇಳೆ ಹೇಳಿದ್ದರು. ಬಳಿಕ ಅವರು ಸಿಎಂ ಆಗಿದ್ದಾರೆ. ಪೊಲೀಸ್ ಠಾಣೆ
ಪಕ್ಕ ಅಗ್ನಿಶಾಮಕ ಠಾಣೆಗೆ 2 ಎಕರೆ ಜಾಗ ಗುರುತಿಸಲಾಗಿದೆ. 2026ಕ್ಕೆ ಹೆಬ್ರಿಗೆ ಠಾಣೆ
ಪಂಚವಾರ್ಷಿಕ ಮಾದರಿಯಲ್ಲಿ 2020ರಿಂದ ಅಗ್ನಿಶಾಮಕ ಠಾಣೆಗಳ ನಿರ್ಮಾಣಗೊಳಿಸಲಾಗುತ್ತಿದೆ. 2021-22ರಲ್ಲಿ ಬೈಂದೂರು ಠಾಣೆಪೂರ್ಣಗೊಳ್ಳುತ್ತ ಬರುತ್ತಿದ್ದು, 2023ರಿಂದ 2026ರ ಅವಧಿಯೊಳಗೆ ಬ್ರಹ್ಮಾವರ ಮತ್ತು ಹೆಬ್ರಿ ಎರಡೂ ಕೇಂದ್ರಗಳು ಪೂರ್ಣಗೊಂಡು ಕಾರ್ಯಾರಂಭಿಸಲಿವೆ. -ವಸಂತ ಕುಮಾರ್, ಜಿಲ್ಲಾ ಅಗ್ನಿಶಾಮಕದಳ ಅಧಿಕಾರಿ, ಉಡುಪಿ *ಬಾಲಕೃಷ್ಣ ಭೀಮಗುಳಿ