ಸಿಡ್ನಿ: ಮೂರು ವರ್ಷಗಳ ಬಳಿಕ ಟೆಸ್ಟ್ ಕ್ರಿಕೆಟ್ ನಲ್ಲಿ ಅವಕಾಶ ಪಡೆದ ಉಸ್ಮಾನ್ ಖ್ವಾಜಾ ಸಿಡ್ನಿ ಪಂದ್ಯದ ಎರಡನೇ ಇನ್ನಿಂಗ್ಸ್ ನಲ್ಲೂ ಶತಕ ಬಾರಿಸಿ ಮಿಂಚಿದ್ದಾರೆ. ಈ ಮೂಲಕ ಎರಡೂ ಇನ್ನಿಂಗ್ಸ್ ಗಳಲ್ಲಿ ಶತಕ ಬಾರಿಸಿ ಮೆರೆದಾಡಿದ್ದಾರೆ.
ಆಸೀಸ್ ನ ಎರಡನೇ ಇನ್ನಿಂಗ್ಸ್ ನಲ್ಲಿ 68 ರನ್ ಗೆ ಮೂರು ವಿಕೆಟ್ ಕಳೆದುಕೊಂಡ ಪರಿಸ್ಥಿತಿಯಲ್ಲಿ ಆಟಕ್ಕಿಳಿದ ಖ್ವಾಜಾ ಸಿಡ್ನಿಯಲ್ಲಿ ಮತ್ತೊಮ್ಮೆ ತಮ್ಮ ಬ್ಯಾಟಿಂಗ್ ಪ್ರದರ್ಶನ ತೋರಿದರು. ವೇಗವಾಗಿಯೇ ಆಡಿದ ಉಸ್ಮಾನ್ 138 ಎಸೆತಗಳಲ್ಲಿ 101 ಅಜೇಯ ರನ್ ಗಳಿಸಿದರು. ಮೊದಲ ಇನ್ನಿಂಗ್ಸ್ ನಲ್ಲಿ ಖ್ವಾಜಾ 137 ರನ್ ಗಳಿಸಿದ್ದರು.
ಇದನ್ನೂ ಓದಿ:ಇಂದು ರಾಕಿಂಗ್ ಸ್ಟಾರ್ ಯಶ್ ಬರ್ತ್‌ಡೇ: ಮುಂದಿನ ಸಿನಿಮಾ ಬಗ್ಗೆ ಹೆಚ್ಚಿದ ಕುತೂಹಲ
ಇಂಗ್ಲೆಂಡ್ ಗೆ ಭಾರಿ ಗುರಿ: 122 ರನ್ ಮೊದಲ ಇನ್ನಿಂಗ್ಸ್ ಮುನ್ನಡೆಯೊಂದಿಗೆ ಎರಡನೇ ಇನ್ನಿಂಗ್ಸ್ ಆರಂಭಿಸಿದ ಆಸೀಸ್ ಆರಂಭದಲ್ಲಿ ವಿಕೆಟ್ ಕಳೆದುಕೊಂಡಿತು. 86 ರನ್ ಗೆ ನಾಲ್ಕು ವಿಕೆಟ್ ಕಳೆದುಕೊಂಡಿದ್ದಾಗ ಜೊತೆಯಾದ ಖ್ವಾಜಾ ಮತ್ತು ಗ್ರೀನ್ ಐದನೇ ವಿಕೆಟ್ ಗೆ 181 ರನ್ ಜೊತೆಯಾಟವಾಡಿದರು. ಗ್ರೀನ್ 74 ರನ್ ಗಳ ಉಪಯುಕ್ತ ಕಾಣಿಕೆ ನೀಡಿದರು. 265 ರನ್ ಗೆ ಆರು ವಿಕೆಟ್ ಕಳೆದುಕೊಂಡಾಗ ಆಸೀಸ್ ಡಿಕ್ಲೇರ್ ಘೋಷಿಸಿದೆ. ಸಿಡ್ನಿ ಪಂದ್ಯ ಗೆಲ್ಲಲು ಇಂಗ್ಲೆಂಡ್ 388 ರನ್ ಗಳಿಸಬೇಕಿದೆ.