Advertisement

ರಾಜ್ಯದಲ್ಲಿ 23 ಹೊಸ ಒಮಿಕ್ರಾನ್ ಕೇಸ್; 2 ವರ್ಷದ ಮಗುವಿನಲ್ಲೂ ಸೋಂಕು

08:34 PM Dec 31, 2021 | Team Udayavani |

ಬೆಂಗಳೂರು: ರಾಜ್ಯದಲ್ಲಿ ಶುಕ್ರವಾರ ಎರಡು ವರ್ಷದ ಮಗು ಸೇರಿದಂತೆ 23 ಮಂದಿಗೆ ಓಮಿಕ್ರಾನ್‌ ಪಾಸಿಟಿವ್‌ ದೃಢಪಟ್ಟಿದೆ. ಆ ಮೂಲಕ ಒಮಿಕ್ರಾನ್‌ ಸಂಖ್ಯೆ 66ಕ್ಕೆ ಏರಿಕೆಯಾಗಿದೆ.

Advertisement

ಇದೇ ಮೊದಲ ಬಾರಿಗೆ ಸೋಂಕಿತ ಸಂಪರ್ಕಕ್ಕೆ ಬಂದ ಬಾಲಕಿಯಲ್ಲಿ ಸೋಂಕು ದೃಢಗೊಂಡಿದೆ. 23 ಪ್ರಕರಣದಲ್ಲಿ 19ಪ್ರಕರಣಗಳು ಅಂತಾರಾಷ್ಟ್ರೀಯ ಪ್ರಯಾಣಿಕರು, ಒಮಿಕ್ರಾನ್‌ ಸೋಂಕಿತ ಸಂಪರ್ಕಕ್ಕೆ ಬಂದ ಓರ್ವ ಬಾಲಕಿ, ಆಂಧ್ರ, ಬಿಹಾರ ಮೂಲದ ತಲಾ ಒಬ್ಬರು ಸೇರಿದಂತೆ ಬೆಂಗಳೂರು ಮೂಲದ ವ್ಯಕ್ತಿಯಲ್ಲಿ ಸೋಂಕು ದೃಢಗೊಂಡಿದೆ. ಎಲ್ಲ ಪ್ರಕರಣದಲ್ಲಿ ಕೊರೊನಾ ಲಕ್ಷಣಗಳು ಪತ್ತೆಯಾಗಿದೆ.

ವಿಮಾನ ನಿಲ್ದಾಣಕ್ಕೆ ಡಿ.24ರಂದು ಅಮೇರಿಕಾದಿಂದ ಬಂದ 15ವರ್ಷ ಬಾಲಕನಲ್ಲಿ ಪಾಸಿಟಿವ್‌ ಪತ್ತೆಯಾಗಿದೆ. ಬಾಲಕನಲ್ಲಿ ಕೊರೊನಾ ಲಕ್ಷಣಗಳು ಪತ್ತೆಯಾಗಿಲ್ಲ. ಪ್ರಸ್ತುತ ಬೆಂಗಳೂರಿನ ಆಸ್ಪತ್ರೆಯಲ್ಲಿ ಐಸೋಲೇಟ್‌ ಆಗಿದ್ದಾರೆ. ಸಂಪರ್ಕಕ್ಕೆ ಬಂದ 18 ಪ್ರಾಥಮಿಕ ಸಂಪರ್ಕಿತರನ್ನು ಪತ್ತೆ ಮಾಡಲಾಗಿದೆ.

Koo App

Twenty three new cases of Omicron confirmed in Karnataka today, of which 19 are international travellers from USA, Europe, Middle East and Africa. #Omicron #COVID19 @BSBommai @mansukhmandviya

Advertisement

Dr. Sudhakar K (@drsudhakark.official) 31 Dec 2021

ಡಿ.11ರಂದು ನೈಜರೀಯಾದಿಂದ ಬೆಂಗಳೂರಿಗೆ ಆಗಮಿಸಿದ 47ವರ್ಷ ವ್ಯಕ್ತಿಯಲ್ಲಿ ಒಮಿಕ್ರಾನ್‌ ದೃಢಪಟ್ಟಿದೆ. ಡಿ.11ರ ಆರ್‌ಟಿಪಿಸಿಆರ್‌ ಪರೀಕ್ಷೆಯಲ್ಲಿ ನೆಗೆಟಿವ್‌ ಬಂದಿದ್ದು, ಡಿ. 20ರ ವರದಿಯಲ್ಲಿ ಪಾಸಿಟಿವ್‌ ಪತ್ತೆಯಾದೆ. ಕೊರೊನಾ ಲಕ್ಷಣ ಪತ್ತೆಯಾಗಿದ್ದು, 18 ಪ್ರಾಥಮಿಕ ಸಂಪರ್ಕಿತರಲ್ಲಿ 12ವರ್ಷ ಬಾಲಕಿಯಲ್ಲಿ ಒಕ್ರಾನ್‌ ದೃಢವಾಗಿದೆ. ಇಬ್ಬರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಗುಣಮುಖರಾಗಿ ಮನೆಗೆ ತೆರಳಿದ್ದಾರೆ.

ಡಿ.24ರಂದು ಡೆನ್ಮಾರ್ಕ್‌ನಿಂದ ಬೆಂಗಳೂರಿಗೆ ಆಗಮಿಸಿದ ಆಂಧ್ರ ಪ್ರದೇಶ ಮೂಲದ 33 ವರ್ಷದ ವ್ಯಕ್ತಿಯಲ್ಲಿ ಕೊರೊನಾ ಪಾಸಿಟವ್‌ ವರದಿಯಾಗಿದ್ದು, ವ್ಯಕ್ತಿಯನ್ನು ಬೆಂಗಳೂರಿನ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ವ್ಯಕ್ತಿಯಲ್ಲಿ ಕೊರೊನಾ ಲಕ್ಷಣಗಳು ಕಂಡು ಬಂದಿದ್ದು, ಇತನ ಸಂಪರ್ಕಕ್ಕೆ ಬಂದ 18 ಪ್ರಾಥಮಿಕ ಸಂಪರ್ಕಿತರನ್ನು ಪತ್ತೆ ಹಚ್ಚಲಾಗಿದೆ.

ಡಿ.25ರಂದು ಅಮೇರಿಕಾದಿಂದ ಬೆಂಗಳೂರಿಗೆ ಆಗಮಿಸಿದ 25ವರ್ಷದ ಮಹಿಳೆ, 29ವರ್ಷದ ವ್ಯಕ್ತಿ, ಕೊರೊನಾ ಪಾಸಿಟಿವ್‌ ಪತ್ತೆಯಾಗಿದ್ದು, ಸೋಂಕಿತರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಕೊರೊನಾ ಲಕ್ಷಣಗಳಿದ್ದು, ಸಂಪರ್ಕಕ್ಕೆ ಬಂದ 18 ಪ್ರಾಥಮಿಕ ಸಂಪರ್ಕಿತರನ್ನು ಪತ್ತೆ ಮಾಡಲಾಗಿದೆ.

ಡಿ.25ರಂದು ದಕ್ಷಿಣ ಆಫ್ರಿಕಾದಿಂದ ಬೆಂಗಳೂರಿಗೆ ಆಗಮಿಸಿದ ದಕ್ಷಿಣ ಕನ್ನಡ ಮೂಲದ 10ವರ್ಷದ ಬಾಲಕಿ ಹಾಗೂ 35ವರ್ಷದ ಮಹಿಳೆಯಲ್ಲಿ ಒಮಿಕ್ರಾನ್‌ ಪತ್ತೆಯಾಗಿದ್ದು, ಕೋವಿಡ್‌ ಲಕ್ಷಣಗಳಿದ್ದು, ಪ್ರಸ್ತುತ ಬೆಂಗಳೂರು ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 18 ಪ್ರಾಥಮಿಕ ಸಂಪರ್ಕಿತರನ್ನು ಪತ್ತೆ ಹಚ್ಚಲಾಗಿದೆ.
ಡಿ.25ರಂದು ದುಬೈನಿಂದ ಬೆಂಗಳೂರಿಗೆ ಆಗಮಿಸಿದ ಬಿಬಿಎಂಪಿ ವ್ಯಾಪ್ತಿಯ 19ವರ್ಷದ ಬಾಲಕನಲ್ಲಿ ಒಮಿಕ್ರಾನ್‌ ದೃಢವಾಗಿದೆ. ವ್ಯಕ್ತಿಯಲ್ಲಿ ಕೊರೊನಾ ಲಕ್ಷಣಗಳಿದ್ದು, ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 18 ಪ್ರಾಥಮಿಕ ಸಂಪರ್ಕಿತರನ್ನು ಪತ್ತೆ ಮಾಡಲಾಗಿದೆ.

ಡಿ.18ರಂದು ದಕ್ಷಿಣ ಆಫ್ರಿಕಾದಿಂದ ಬೆಂಗಳೂರಿಗೆ ಆಗಮಿಸಿದ 49ವರ್ಷದ ವ್ಯಕ್ತಿಯಲ್ಲಿ ಒಮಿಕ್ರಾನ್‌ ದೃಢಗೊಂಡಿದೆ. ಲಕ್ಷಣಗಳಿದ್ದು, ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. 18 ಪ್ರಾಥಮಿಕ ಸಂಪರ್ಕಿತರನ್ನು ಪತ್ತೆ ಮಾಡಲಾಗಿದೆ.

ಡಿ.19ರಂದು ಯುಎಇಯಿಂದ ಬೆಂಗಳೂರಿಗೆ ಆಗಮಿಸಿದ ಬಿಬಿಎಂಪಿ ವ್ಯಾಪ್ತಿಯ 42ವರ್ಷದ ಮಹಿಳೆಯಲ್ಲಿ ಒಮಿಕ್ರಾನ್‌ ದೃಢವಾಗಿದೆ. ವಿಮಾನ ನಿಲ್ದಾಣದಲ್ಲಿ ನಡೆಸಲಾದ ಪರೀಕ್ಷೆಯಲ್ಲಿ ನೆಗೆಟಿವ್‌ ಬಂದಿದ್ದು, ಮನೆ ಐಸೋಲೇಶನ್‌ ಒಳಗಾಗಿದ್ದಾರೆ.ಡಿ.22ರಂದು ಲಕ್ಷಣ ಕಂಡು ಬಂದ ಹಿನ್ನೆಲೆಯಲ್ಲಿ ಕೋವಿಡ್‌ ಪರೀಕ್ಷೆಗೆ ಒಳಪಡಿಸಿದಾಗ ಕೊರೊನಾ ದೃಢಪಟ್ಟಿದ್ದು, 18 ಪ್ರಾಥಮಿಕ ಸಂಪರ್ಕಿತರಲ್ಲಿ ಒಬ್ಬರಲ್ಲಿ ಒಮಿಕ್ರಾನ್‌ ದೃಢಗೊಂಡಿದೆ.

ಡಿ.26ರಂದು ಅಮೇರಿಕಾದಿಂದ ಆಗಮಿಸಿದ 12 ಬಾಲಕಿ, 45, 33ವರ್ಷದ ವ್ಯಕ್ತಿ ಹಾಗೂ 25ವರ್ಷದ ಯುವತಿಯಲ್ಲಿ ಒಮಿಕ್ರಾನ್‌ ದೃಢವಾಗಿದೆ. ಲಕ್ಷಣಗಳಿದ್ದು, ಬೆಂಗಳೂರಿನ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 18 ಪ್ರಾಥಮಿಕ ಸಂಪರ್ಕಿತರನ್ನು ಪತ್ತೆ ಮಾಡಲಾಗಿದೆ.

ಡಿ.19ರಂದು ದಕ್ಷಿಣ ಆಫ್ರಿಕಾದಿಂದ ಬೆಂಗಳೂರಿಗೆ ಆಗಮಿಸಿದ 2ವರ್ಷ ಬಾಲಕ, 10ವರ್ಷದ ಬಾಲಕಿ, 33ವರ್ಷದ ಮಹಿಳೆಯಲ್ಲಿ ಒಮಿಕ್ರಾನ್‌ ದೃಢವಾಗಿದೆ. ವಿಮಾನ ನಿಲ್ದಾಣದಲ್ಲಿ ನೆಗೆಟಿವ್‌ ಬಂದ ಹಿನ್ನೆಲೆಯಲ್ಲಿ ಮನೆ ಐಸೋಲೇಶನ್‌ ಒಳಪಡಿಸಿದ್ದು, ಡಿ.23ರ ಪರೀಕ್ಷೆಯಲ್ಲಿ ಕೊರೊನಾ ದೃಢವಾಗಿತ್ತು. ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡುತ್ತಿದ್ದು, ಲಕ್ಷಣಗಳ ಪತ್ತೆಯಾಗಿದೆ. 18 ಪ್ರಾಥಮಿಕ ಸಂಪರ್ಕಿತರನ್ನು ಪತ್ತೆ ಹಚ್ಚಾಗಿದೆ.

ಡಿ.14ರಂದು ಯುಕೆಯಿಂದ ಬೆಂಗಳೂರಿಗೆ ಆಗಮಿಸಿದ ತಮಿಳುನಾಡು ಮೂಲದ 18ವರ್ಷದ ಯುವಕನಲ್ಲಿ ಒಮಿಕ್ರಾನ್‌ ದೃಢಗೊಂಡಿದ್ದು, ಬೆಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಗುಣಮುಖರಾಗಿದ್ದಾರೆ.

ಡಿ.18ರಂದು ದುಬೈನಿಂದ ಬೆಂಗಳೂರಿಗೆ ಆಗಮಿಸಿದ 22ವರ್ಷದ ಯುವಕನಲ್ಲಿ ಒಮಿಕ್ರಾನ್‌ ದೃಢಗೊಂಡಿದೆ. ವಿಮಾನ ನಿಲ್ದಾಣದಲ್ಲಿ ನಡೆಸಲಾದ ಪರೀಕ್ಷೆ ನೆಗೆಟಿವ್‌ ಬಂದಿದ್ದು, ಲಕ್ಷಣ ಪತ್ತೆಯಾದ ಹಿನ್ನೆಲೆಯಲ್ಲಿ ಡಿ. 25ರಂದು ಕೋವಿಡ್‌ ಪರೀಕ್ಷೆ ಒಳಪಡಿಸಲಾಗಿತ್ತು. ಈ ವೇಳೆ ಕೋವಿಡ್‌ ದೃಢಗೊಂಡಿತ್ತ. ಪ್ರಸ್ತುತ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. 18 ಪ್ರಾಥಮಿಕ ಸಂಪರ್ಕಿತರನ್ನು ಪತ್ತೆ ಹಚ್ಚಲಾಗಿದೆ.

ಬೆಂಗಳೂರು ಬಿಬಿಎಂಪಿ ವ್ಯಾಪ್ತಿಯಲ್ಲಿ 45ವರ್ಷ ಅಂತಾರಾಷ್ಟ್ರೀಯ ಪ್ರಯಾಣವಿಲ್ಲದ ಮಹಿಳೆಯಲ್ಲಿ ಒಮಿಕ್ರಾನ್‌ ದೃಢಗೊಂಡಿದೆ. ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 5 ಪ್ರಾಥಮಿಕ ಸಂಪರ್ಕಿತರನ್ನು ಪತ್ತೆ ಮಾಡಲಾಗಿದೆ.

ಡಿ.26ರಂದು ಆಂಧ್ರ ಪ್ರದೇಶದ ಮೂಲದ 28ವರ್ಷದ ಯುವಕನಲ್ಲಿ ಕೊರಿನಾ ದೃಢಪಟ್ಟಿದ್ದು, ಮಾದರಿಯನ್ನು ಜೀನೋಮ್‌ ಸಿಕ್ವೇನ್ಸಿಂಗ್‌ ಪರೀಕ್ಷೆ ಕಳುಹಿಸಿದ್ದು, ಈ ವೇಳೆ ಒಮಿಕ್ರಾನ್‌ ದೃಢವಾಗಿದೆ. ವ್ಯಕ್ತಿ ಪ್ರಸ್ತುತ ಆಂಧ್ರ ಪ್ರದೇಶದಲ್ಲಿ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಬಿಹಾರ್‌ ಮೂಲದ 25ವರ್ಷದ ವ್ಯಕ್ತಿಯ ಒಮಿಕ್ರಾನ್‌ ದೃಢವಾಗಿದೆ. ಡಿ.25ರಂದು ಬೆಂಗಳೂರು-ಬಿಹಾರ ಮಾರ್ಗವಾಗಿ ವಿಮಾನದ ಮೂಲಕ ತೆರಳಿದ್ದಾರೆ. ಈ ವೇಳೆ ಸಂಗ್ರಹಿಸಲಾದ ಮಾದರಿ ಒಮಿಕ್ರಾನ್‌ ದೃಢವಾಗಿದೆ. ಬಿಹಾರದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next