Advertisement

ತಮಿಳುನಾಡಿನಲ್ಲಿ ಬಸ್‌-ಲಾರಿ ಡಿಕ್ಕಿ: 20 ಸಾವು

09:57 AM Feb 22, 2020 | Team Udayavani |

ಕೊಯಮತ್ತೂರು/ತಿರುವನಂತಪುರಂ: ತಮಿಳುನಾಡಿನ ತಿರುಪುರ್‌ನಲ್ಲಿ ಭಾರೀ ಅವಘಡವೊಂದು ಸಂಭವಿಸಿದ್ದು, ಕೇರಳದ ಸರಕಾರಿ ಸಾರಿಗೆ ಬಸ್‌ ಹಾಗೂ ಲಾರಿಯೊಂದು ಮುಖಾಮುಖಿ ಡಿಕ್ಕಿ ಹೊಡೆದ ಪರಿಣಾಮ 20 ಮಂದಿ ಪ್ರಯಾಣಿಕರು ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ. ಘಟನೆಯಲ್ಲಿ ಹಲವಾರು ಮಂದಿ ಗಾಯಗೊಂಡಿದ್ದಾರೆ.

Advertisement

ಕೊಯಮತ್ತೂರಿನಿಂದ ಸುಮಾರು 40 ಕಿ.ಮೀ. ದೂರದ ಅವಿನಾಶಿ ನಗರದಲ್ಲಿ ಈ ದುರ್ಘ‌ಟನೆ ಸಂಭವಿಸಿದೆ. ಮೃತರಲ್ಲಿ 6 ಮಂದಿ ಮಹಿಳೆಯರೂ ಸೇರಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಘಟನೆ ಬಗ್ಗೆ ಆಘಾತ ವ್ಯಕ್ತಪಡಿಸಿರುವ ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇರಳ ಸಿಎಂ ಪಿಣರಾಯಿ ವಿಜಯನ್‌, ಮೃತರ ಕುಟುಂಬಗಳಿಗೆ ಸಾಂತ್ವನ ಹೇಳಿದ್ದಾರೆ.

ಘಟನೆ ನಡೆದಿದ್ದು ಹೇಗೆ? ಸುಮಾರು 48 ಮಂದಿಯನ್ನು ಹೊತ್ತ ಕೇರಳ ಸಾರಿಗೆ ಬಸ್‌ ಕೊಯಮತ್ತೂರಿನಿಂದ ಬೆಂಗಳೂರು ಮಾರ್ಗವಾಗಿ ತಿರುವನಂತಪುರಂಗೆ ಹೊರಟಿತ್ತು. ಅವಿನಾಶಿ ಪಟ್ಟಣಕ್ಕೆ ತಲುಪುತ್ತಿದ್ದಂತೆ, ವಿರುದ್ಧ ದಿಕ್ಕಿನಲ್ಲಿ ವೇಗವಾಗಿ ಬಂದ ಕಂಟೇನರ್‌ ಲಾರಿಯೊಂದು ಬಸ್‌ಗೆ ಡಿಕ್ಕಿ ಹೊಡೆಯಿತು.

ಅಪಘಾತದ ತೀವ್ರತೆಗೆ ಬಸ್‌ ಸಂಪೂರ್ಣವಾಗಿ ನಜ್ಜುಗುಜ್ಜಾಗಿದೆ. ಲಾರಿಯ ಚಾಲಕ ನಿದ್ದೆಯ ಮಂಪರಿನಲ್ಲಿದ್ದನೋ ಅಥವಾ ಟೈರ್‌ ಸ್ಫೋಟಗೊಂಡು ಈ ದುರಂತ ನಡೆದಿದೆಯೋ ಎಂಬುದು ಇನ್ನೂ ಗೊತ್ತಾಗಿಲ್ಲ ಎಂದು ಪಾಲಕ್ಕಾಡ್‌ ಎಸ್‌ಪಿ ಶಿವ ವಿಕ್ರಂ ತಿಳಿಸಿದ್ದಾರೆ. ಬಸ್‌ನಲ್ಲಿದ್ದ ಬಹುತೇಕ ಪ್ರಯಾಣಿಕರು ಕೇರಳದ ಪಾಲಕ್ಕಾಡ್‌, ತ್ರಿಶೂರ್‌ ಹಾಗೂ ಎರ್ನಾಕುಲಂ ಜಿಲ್ಲೆಯವರು ಎಂದು ಹೇಳಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next