Advertisement

ಇವಿಎಂ ಪರೀಕ್ಷೆ ಮಾಡಬೇಕೆಂದು 21 ವಿಪಕ್ಷಗಳು ಸುಪ್ರೀಂಗೆ

09:11 AM Apr 25, 2019 | Vishnu Das |

ಹೊಸದಿಲ್ಲಿ: ದೇಶದಲ್ಲಿ ಮೂರು ಹಂತಗಳ ಲೋಕಸಭಾ ಚುನಾವಣೆ ಮುಗಿಯುತ್ತಿದ್ದಂತೆ ಇವಿಎಂಗಳ ವಿಶ್ವಾಸಾರ್ಹತೆಯನ್ನು ಪ್ರಶ್ನಿಸಿ 21 ವಿಪಕ್ಷಗಳು  ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿವೆ.

Advertisement

ಶೇಕಡಾ 50 ರಷ್ಟು ವಿವಿಪ್ಯಾಟ್‌ ಬಳಸಲಾಗಿರುವ ಇವಿಎಂಗಳನ್ನು ಪರೀಕ್ಷೆ ಮಾಡಲು ಚುನಾವಣಾ ಆಯೋಗಕ್ಕೆ ಸಲಹೆ ನೀಡುವ ಮೂಲಕ ಮತ ಎಣಿಕೆ ಯಲ್ಲಿ ಪಾರದರ್ಶಕತೆ ತೋರಬೇಕು ಎಂದು ಕೋರ್ಟ್‌ಗೆ ಮನವಿ ಮಾಡಿವೆ.

ಟಿಡಿಪಿ, ಎನ್‌ಸಿಪಿ, ಟಿಎಂಸಿ, ಡಿಎಂಕೆ, ಆಪ್‌, ಸಿಪಿಐ(ಎಂ), ಸಿಪಿಐ ಸೇರಿ 21 ಪಕ್ಷಗಳು ಈ ಕುರಿತು ಕೋರ್ಟ್‌ಗೆ ಮನವಿ ಮಾಡಿವೆ.

ಟಿಡಿಪಿ ನಾಯಕ, ಆಂಧ್ರಪ್ರದೇಶ ಸಿಎಂ ಇವಿಎಂಗಳು ಹ್ಯಾಕ್‌ ಆಗುವ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದರು. ಎಸ್‌ಪಿ ನಾಯಕ ಅಖೀಲೇಶ್‌ ಯಾದವ್‌ ಅವರು ಇವಿಎಂಗಳಲ್ಲಿ ಅಕ್ರಮವಾಗುತ್ತಿದ್ದು, ಎಲ್ಲಾ ಮತಗಳು ಬಿಜೆಪಿಗೆ ಹೋಗುತ್ತಿವೆ ಎಂದು ಆರೋಪಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next