Advertisement

ಇಪ್ಪತ್ತು ನಿರೀಕ್ಷೆ ದುಪ್ಪಟ್ಟು

10:04 AM Jan 04, 2020 | mahesh |

2020 ಕಣ್ತುಂಬ ಕನಸು
ದರ್ಬಾರ್‌ ನಡೆಸಲು ಸ್ಟಾರ್ ರೆಡಿ

Advertisement

2020 ಗ್ರ್ಯಾಂಡ್‌ ಎಂಟ್ರಿ ಕೊಟ್ಟಾಗಿದೆ. ಪ್ರತಿ ವರ್ಷ ಆರಂಭದಲ್ಲೂ ಚಿತ್ರರಂಗ ನಿರೀಕ್ಷೆ ಕಂಗಳೊಂದಿಗೆ ಎದುರು ನೋಡುತ್ತಾ, ವರ್ಷಪೂರ್ತಿ ಏನೇನು ಆಗಬಹುದು ಎಂದು ಲೆಕ್ಕಾಚಾರ ಹಾಕುತ್ತದೆ. ಈಗ 2020ರಲ್ಲೂ ಆ ನಿರೀಕ್ಷೆ ಜೋರಾಗಿದೆ. 2019ಕ್ಕೆ ಹೋಲಿಸಿದರೆ, ನಿರೀಕ್ಷೆ ಪ್ರಮಾಣ ಕೊಂಚ ಹೆಚ್ಚೇ ಇದೆ. ಅದಕ್ಕೆ ಕಾರಣ ಕಣ್ಣ ಮುಂದಿರುವ ಸಿನಿಮಾಗಳು. ಒಂದೊಂದು ಸಿನಿಮಾಗಳನ್ನು ನೋಡಿದಾಗಲೂ ಅದರ ಹಿಂದಿನ ಶ್ರಮ ಹಾಗೂ ಆ ಸಿನಿಮಾದ ಭವಿಷ್ಯ ಕಾಣುತ್ತದೆ. ಅದೇ ಕಾರಣದಿಂದ ಕನ್ನಡ ಸಿನಿ ಪ್ರೇಕ್ಷಕರ ಜೊತೆಗೆ ಗಾಂಧಿನಗರದ ಸಿನಿಪಂಡಿತರು 2020ರ ಮೇಲೆ ನಿರೀಕ್ಷೆ ಇಟ್ಟಿದ್ದಾರೆ.

2020ರ ಒಂದು ವಿಶೇಷವೆಂದರೆ ಬಹುತೇಕ ಎಲ್ಲಾ ಸ್ಟಾರ್‌ಗಳ ಸಿನಿಮಾಗಳು ಈ ವರ್ಷ ತೆರೆಗೆ ಬರಲಿವೆ. ಈ ಮೂಲಕ 2020 ಆರಂಭದಿಂದಲೇ ರಂಗೇರಲಿದೆ. ಹಾಗೆ ನೋಡಿದರೆ ಒಂದಿಬ್ಬರು ಸ್ಟಾರ್‌ಗಳ ಹೊರತಾಗಿ ಬಹುತೇಕ ನಟರ ಸಿನಿಮಾಗಳು 2019ರಲ್ಲೂ ತೆರೆಕಂಡಿತ್ತು. ಆದರೆ, 2020ರಲ್ಲಿ ಕನ್ನಡ ಚಿತ್ರರಂಗದ ಮುಂಚೂಣಿಯಲ್ಲಿರುವ ನಟರ ಚಿತ್ರಗಳ ಜೊತೆಗೆ ಬಹುತೇಕ ಎಲ್ಲಾ ಹೀರೋಗಳು ತೆರೆಮೇಲೆ ದರ್ಶನ ಭಾಗ್ಯ ನೀಡಲಿದ್ದಾರೆ. ದರ್ಶನ್‌, ಸುದೀಪ್‌, ಪುನೀತ್‌, ಶಿವರಾಜಕುಮಾರ್‌, ಯಶ್‌, ಉಪೇಂದ್ರ, ಧ್ರುವ ಸರ್ಜಾ, ಗಣೇಶ್‌, ವಿಜಯ್‌, ಮುರಳಿ, ರವಿಚಂದ್ರನ್‌, ಜಗ್ಗೇಶ್‌, ರಮೇಶ್‌ ಅರವಿಂದ್‌, ಚಿರಂಜೀವಿ ಸರ್ಜಾ, ರಕ್ಷಿತ್‌ ಶೆಟ್ಟಿ, ಶರಣ್‌, ಅಜೇಯ್‌ ರಾವ್‌, ಯೋಗಿ, ಪ್ರಜ್ವಲ್‌, ಧನಂಜಯ್‌ …

ಹೀಗೆ ಬಹುತೇಕ ಎಲ್ಲಾ ನಟರ ಸಿನಿಮಾಗಳು ಈ ವರ್ಷ ತೆರೆಕಾಣುತ್ತಿವೆ. ಅದರಲ್ಲೂ ಈ ಬಾರಿ ನಿರೀಕ್ಷೆ ಹುಟ್ಟಿಸಿರುವ ಸ್ಟಾರ್‌ ಸಿನಿಮಾಗಳಲ್ಲಿ ಮೊದಲಿಗೆ ಕಾಣಸಿಗೋದು “ಕೆಜಿಎಫ್-2′. ಯಶ್‌ ನಾಯಕರಾಗಿರುವ ಈ ಚಿತ್ರ ಈಗಾಗಲೇ ದೊಡ್ಡ ಮಟ್ಟದ ನಿರೀಕ್ಷೆ ಹುಟ್ಟು ಹಾಕಿದ್ದು, ಈ ವರ್ಷವೇ ಪ್ಯಾನ್‌ ಇಂಡಿಯಾ ಸಿನಿಮಾವಾಗಿ ಬಿಡುಗಡೆಯಾ­ಗಲಿದೆ. ಮೊದಲ ಭಾಗ ಹಿಟ್‌ ಆಗುವ ಮೂಲಕ ಚಾಪ್ಟರ್‌ 2 ನಿರೀಕ್ಷೆ ಹೆಚ್ಚಾಗಿದೆ. ಈಗಾಗಲೇ ಬಿಡುಗಡೆ­ಯಾ­ಗಿರುವ ಚಿತ್ರದ ಫ‌ಸ್ಟ್‌ ಲುಕ್‌ ಚಿತ್ರದ ಮೇಲಿನ ನಿರೀಕ್ಷೆ­ಯನ್ನು ದುಪ್ಪಟ್ಟುಗೊಳಿಸಿದೆ. ಇದರ ಜೊತೆಗೆ ದರ್ಶನ್‌ ನಾಯಕರಾಗಿರುವ “ರಾಬರ್ಟ್‌’, ಉಪೇಂದ್ರ ಅವರ “ಕಬ್ಜ’, ಪುನೀತ್‌ ರಾಜಕುಮಾರ್‌ “ಯುವರತ್ನ’, ಶಿವರಾಜಕುಮಾರ್‌ “ಭಜರಂಗಿ-2′, ಸುದೀಪ್‌ “ಕೋಟಿಗೊಬ್ಬ-3′, ವಿಜಯ್‌ “ಸಲಗ’, ಜಗ್ಗೇಶ್‌ “ತೋತಾಪುರಿ’, ರಕ್ಷಿತ್‌ ಶೆಟ್ಟಿ “777 ಚಾರ್ಲಿ’, ಗಣೇಶ್‌ “ಗಾಳಿಪಟ-2′ ಚಿತ್ರಗಳು ಈಗಾಗಲೇ ಚಿತ್ರರಂಗದಲ್ಲಿ ನಿರೀಕ್ಷೆ ಮೂಡಿಸಿವೆ. ಹಾಗೆಂದು ಇತರ ಚಿತ್ರಗಳ ಬಗ್ಗೆ ನಿರೀಕ್ಷೆ ಇಲ್ಲವೇ ಎಂದರೆ ಖಂಡಿತಾ ಇದೆ. ಒಂದಲ್ಲ, ಒಂದು ಕಾರಣದಿಂದ ಆ ಚಿತ್ರಗಳು ನಿರೀಕ್ಷೆ ಹುಟ್ಟಿಸಿವೆ. ಸ್ಟಾರ್‌ಗಳು ನಟಿಸಿದ್ದಾರೆಂಬ ಕಾರಣಕ್ಕೆ ಒಂದಷ್ಟು ಚಿತ್ರಗಳು ನಿರೀಕ್ಷೆಯಲ್ಲಿದ್ದರೆ, ಇನ್ನೊಂದಿಷ್ಟು ಚಿತ್ರಗಳು ನಿರ್ದೇಶಕ, ಟೈಟಲ್‌, ಫ‌ಸ್ಟ್‌ಲುಕ್‌ ಕಾರಣಗಳಿಂದ ನಿರೀಕ್ಷೆ ಹುಟ್ಟಿಸಿವೆ.

2020ರಲ್ಲಿ ಸ್ಟಾರ್‌ಗಳ ಅಬ್ಬರ ಜೋರಾಗಲಿರುವುದು ನಿಜ. ಹಾಗಂತ ಒಂದು ವರ್ಷವನ್ನು ಕೇವಲ ಸ್ಟಾರ್‌ಗಳು ತುಂಬಲು ಸಾಧ್ಯವಿಲ್ಲ. ಹಾಗಾಗಿ, ಹೊಸಬರು ಕೂಡಾ ಹೊಸ ವರ್ಷಕ್ಕೆ ಅದೃಷ್ಟ ಪರೀಕ್ಷೆಗೆ ಸಿದ್ಧರಾಗಿದ್ದಾರೆ. ಆದರೆ, ಇತ್ತೀಚಿನ ವರ್ಷಗಳಲ್ಲಿ ಹೊಸಬರ ಗೆಲುವಿನ ಪ್ರಮಾಣ ಗಣನೀಯವಾಗಿ ಕುಸಿಯುತ್ತಿದೆ. ಸ್ಟಾರ್‌ಗಳ ಸಿನಿಮಾಗಳಿಂದ ಚಿತ್ರರಂದ ವಹಿವಾಟು ಹೆಚ್ಚಿದರೆ, ಹೊಸಬರ ಗೆಲುವಿನಿಂದ ಚಿತ್ರರಂಗದ ವಾರ್ಷಿಕ ಗೆಲುವಿನ ಪ್ರಮಾಣ ಹೆಚ್ಚುತ್ತದೆ. ಹಾಗಾಗಿ, ಹೊಸಬರು ಶ್ರದ್ಧೆ ಹಾಗೂ ಕಾಳಜಿಯಿಂದ ಸಿನಿಮಾ ಮಾಡುವ ಅನಿವಾರ್ಯತೆ ಇದೆ. ಅಂದಹಾಗೆ, ಇಲ್ಲಿ ನೀಡಿ­ರುವ ಸಿನಿಮಾಗಳ ಹೆಸರೇ ಅಂತಿಮ ಎನ್ನುವಂತಿಲ್ಲ. ಏಕೆಂದರೆ ಯಾವ ಸಿನಿಮಾಗಳು ಯಾವಾಗ ನಿರೀಕ್ಷೆ ಹುಟ್ಟಿಸುತ್ತವೆ ಎಂದು ಹೇಳ್ಳೋದು ಕಷ್ಟ. ಇನ್ನೂ ಒಂದು ವರ್ಷವಿದೆ. ಯಾವ್ಯಾವ ಸಿನಿಮಾಗಳು ನಿರೀಕ್ಷೆಯ ಪಟ್ಟಿ ಸೇರುತ್ತವೋ ಕಾದು ನೋಡಬೇಕು.

Advertisement

ಹೆಚ್ಚಾಗಲಿದೆ ಪ್ಯಾನ್‌ ಇಂಡಿಯಾ ಸದ್ದು
ಹೊಸ ಪ್ರಯತ್ನ-ಪ್ರಯೋಗ 2020ರಲ್ಲೂ ಒಂದಷ್ಟು ಚಿತ್ರಗಳು ಹೊಸ ಪ್ರಯತ್ನ ಹಾಗೂ ಪ್ರಯೋಗದ ಮೂಲಕ ಗಮನ ಸೆಳೆದಿವೆ. ಈಗಾಗಲೇ ಚಿತ್ರೀಕರಣ ಮುಗಿಸಿ ಬಿಡುಗಡೆಯ ಗಂತದಲ್ಲಿರುವ ಕೆಲವು ಚಿತ್ರಗಳು ನಾನಾ ಕಾರಣಗಳಿಗಾಗಿ ನಿರೀಕ್ಷೆ ಹುಟ್ಟಿಸಿವೆ. ಮುಖ್ಯವಾಗಿ ಕಂಟೆಂಟ್‌ ಸಿನಿಮಾವಾಗಿ ಈ ಚಿತ್ರಗಳು ಗಮನ ಸೆಳೆದಿವೆ. ಮುಂದೆ ಈ ಪಟ್ಟಿಗೆ ಇನ್ನೊಂದಿಷ್ಟು ಸಿನಿಮಾಗಳು ಸೇರಿಕೊಳ್ಳಬಹುದು. ಮಾಯಾ­ ಬಜಾರ್‌, ಆ್ಯಕ್ಟ್ 1978 ರುದ್ರ ಪ್ರಯಾಗ, ಸೇಂಟ್‌ ಮಾರ್ಕ್‌ ರೋಡ್‌, ಗೋಧಾ, ಗ್ರಾಮಾಯಣ, ವಿಷ್ಣುಪ್ರಿಯ, ಚೇಸ್‌, ತ್ರಿವಿಕ್ರಮ, ಬಿಚ್ಚುಗತ್ತಿ, ಇಂಡಿಯ ವರ್ಸಸ್‌ ಇಂಗ್ಲೆಂಡ್‌, ಟೆನ್‌, ಭೀಮಸೇನಾ ನಳಮಹಾರಾಜ…

ಸಂಜಯ್‌ ದತ್‌ ಎಂಟ್ರಿ
ಇತ್ತೀಚಿನ ವರ್ಷಗಳಲ್ಲಿ ಕನ್ನಡ ಚಿತ್ರರಂಗಕ್ಕೆ ಬಾಲಿವುಡ್‌ ನಟ-ನಟಿಯರು ಎಂಟ್ರಿಕೊಡುತ್ತಲೇ ಇದ್ದಾರೆ. ಈಗಾಗಲೇ “ಪೈಲ್ವಾನ್‌’ ಮೂಲಕ ಸುನೀಲ್‌ ಶೆಟ್ಟಿ ಎಂಟ್ರಿಕೊಟ್ಟರೆ ಈ ಬಾರಿ ಸಂಜಯ್‌ ದತ್‌ ಸರದಿ. ಹೌದು, ಯಶ್‌ ನಟನೆಯ “ಕೆಜಿಎಫ್-2′ ಚಿತ್ರದಲ್ಲಿ ಸಂಜಯ್‌ ದತ್‌ ನಟಿಸುತ್ತಿದ್ದು, ಅಧೀರ ಎಂಬ ಪಾತ್ರ ಮಾಡುತ್ತಿದ್ದಾರೆ. ಈ ಮೂಲಕ ಮೊದಲ ಬಾರಿಗೆ ದಕ್ಷಿಣ ಭಾರತೀಯ ಸಿನಿಮಾವೊಂದರಲ್ಲಿ
ಅವರು ನಟಿಸಿ­ದಂತಾಗುತ್ತದೆ.

ಈ ಚಿತ್ರಗಳ ಮೇಲೂ ಗಮನವಿರಲಿ
ದ್ರೋಣ, ಬುದ್ಧಿವಂತ-2, ಪಾಪ್‌ಕಾರ್ನ್ ಮಂಕಿ ಟೈಗರ್‌, ತೋತಾಪುರಿ, ಖಾಕಿ, ಶಿವಾರ್ಜುನ, ಇನ್ಸ್‌ಪೆಕ್ಟರ್‌ ವಿಕ್ರಂ, ಜಂಟಲ್‌ಮೆನ್‌, ಅರ್ಜುನ್‌ ಗೌಡ, ಕೃಷ್ಣ ಟಾಕೀಸ್‌, ಮಾಲ್ಗುಡಿ ಡೇಸ್‌, ಮದಗಜ, ರವಿ ಬೋಪಣ್ಣ, 100, ಅವತಾರ್‌ ಪುರುಷ, ಬಿಚ್ಚುಗತ್ತಿ, ಇಂಡಿಯಾ ವರ್ಸಸ್‌ ಇಂಗ್ಲೆಂಡ್‌, ಪ್ರೇಮಂ ಪೂಜ್ಯಂ, ಲವ್‌ ಮಾಕ್ಟೇಲ್‌

ಮತ್ತೆ ಹಿಟ್‌ ಕಾಂಬಿನೇಶನ್‌
ಈಗಾಗಲೇ ಒಂದು ಅಥವಾ ಒಂದಕ್ಕಿಂತ ಹೆಚ್ಚು ಸಿನಿಮಾ ಕೊಟ್ಟು ಹಿಟ್‌ ಕಾಂಬಿನೇಶನ್‌ ಎನಿಸಿಕೊಂಡಿರುವ ಒಂದಷ್ಟು ನಿರ್ದೇಶಕ-ನಟರ ಸಿನಿಮಾಗಳು ಈ ವರ್ಷ ತೆರೆಗೆ ಬರಲಿವೆ. ನಿರ್ದೇಶಕ ಸೂರಿ ನಾಯಕ ಧನಂಜಯ್‌ ಅವರ “ಪಾಪ್‌ಕಾರ್ನ್ ಮಂಕಿ ಟೈಗರ್‌’, ಯೋಗರಾಜ್‌ ಭಟ್‌-ಗಣೇಶ್‌, ದಿಗಂತ್‌ ಅವರ “ಗಾಳಿಪಟ-2′, ಸಂತೋಷ್‌ ಆನಂದರಾಮ್‌- ಪುನೀತ್‌ರಾಜಕುಮಾರ್‌ ಅವರ “ಯುವರತ್ನ’, ಉಪೇಂದ್ರ-ಆರ್‌.ಚಂದ್ರು ಅವರ “ಕಬ್ಜ’, ಪ್ರಶಾಂತ್‌ ನೀಲ್‌-ಯಶ್‌ “ಕೆಜಿಎಫ್-2′, ವಿಜಯ ಪ್ರಸಾದ್‌-ಜಗ್ಗೇಶ್‌ “ತೋತಾಪುರಿ’ ಚಿತ್ರಗಳು ಈ ವರ್ಷ ತೆರೆಕಾಣಲಿವೆ.

ಒಂದಕ್ಕಿಂತ ಹೆಚ್ಚು ಬಾರಿ ತೆರೆಮೇಲೆ
ಈ ಬಾರಿ ಕನ್ನಡ ಹಲವು ನಟರ ಒಂದಕ್ಕಿಂತ ಹೆಚ್ಚು ಚಿತ್ರಗಳು ಬಿಡುಗಡೆಯಾಗಲಿವೆ. ಶಿವರಾಜಕುಮಾರ್‌ ಅವರ “ದ್ರೋಣ’, “ಭಜರಂಗಿ-2′, ಉಪೇಂದ್ರ ನಟನೆಯ “ಬುದ್ಧಿವಂತ-2′, “ಕಬ್ಜ’, “ಹೋಮ್‌ ಮಿನಿಸ್ಟರ್‌’, ಯೋಗಿಯ “ಒಂಬತ್ತನೇ ಅದ್ಭುತ’, “ಕಿರಿಕ್‌ ಶಂಕರ’, “ಲಂಕೆ’, ಪ್ರಜ್ವಲ್‌ ದೇವರಾಜ್‌ ಅಭಿನಯದ “ಇನ್ಸ್‌ಪೆಕ್ಟರ್‌ ವಿಕ್ರಂ’, “ಜಂಟಲ್‌ಮೆನ್‌’, “ಅರ್ಜುನ್‌ ಗೌಡ’, ಅಜೇಯ್‌ ರಾವ್‌ ನಾಯಕರಾಗಿರುವ “ಶೋಕಿವಾಲಾ’, “ಕೃಷ್ಣ ಟಾಕೀಸ್‌’, ಜಗ್ಗೇಶ್‌ ಅವರ “ತೋತಾಪುರಿ ಭಾಗ 1-2′, ರಮೇಶ್‌ ಅರವಿಂದ್‌ ಅವರ “100′, “ಶಿವಾಜಿ ಸುರತ್ಕಲ್‌’, ದಿಗಂತ್‌ “ಹುಟ್ಟುಹಬ್ಬದ ಶುಭಾಶಯಗಳು’, “ಗಾಳಿಪಟ-2′

ನಿರೀಕ್ಷೆಯ ಸ್ಟಾರ್‌ ಸಿನಿಮಾಗಳು
ಕೆಜಿಎಫ್ -2ರಾಬರ್ಟ್‌ ಕಬ್ಜ
ಕೋಟಿಗೊಬ್ಬ-3 ಪೊಗರು  ಸಲಗ
ಭಜರಂಗಿ-2 ಯುವರತ್ನ ಗಾಳಿಪಟ-2

Advertisement

Udayavani is now on Telegram. Click here to join our channel and stay updated with the latest news.

Next