Advertisement

ವೆಂಕಯ್ಯ ಪರ ಟ್ವೀಟ್‌;ಕೆರಳಿದ ಕನ್ನಡಿಗರು, ಡಿಲೀಟ್‌ ಮಾಡಿದ ಜಗ್ಗೇಶ್‌!

01:30 PM Aug 06, 2017 | |

ಬೆಂಗಳೂರು: ಬಿಜೆಪಿಯ ಹಿರಿಯ ನಾಯಕರಾಗಿದ್ದ ವೆಂಕಯ್ಯ ನಾಯ್ಡು ಅವರು ಉಪರಾಷ್ಟ್ರಪತಿ ಯಾಗಿ ಆಯ್ಕೆಯಾದ ಬಳಿಕ ನಟ, ಬಿಜೆಪಿ ನಾಯಕ ಜಗ್ಗೇಶ್‌ ಮಾಡಿರುವ ಟ್ವೀಟ್‌ವೊಂದು ವಿವಾದ ಹುಟ್ಟು ಹಾಕಿದೆ. 

Advertisement

ಟ್ವೀಟ್‌ನಲ್ಲೇನಿದೆ? 
”ಕರ್ನಾಟಕದಲ್ಲಿ ಅವರನ್ನ ಭಾಷಾ ಭಾವನೆಯಲ್ಲಿ ರಾಜ್ಯಸಭೆಗೆ ಆಕ್ಷೇಪಿಸಿದರು. ಆದರೆ ಇಂದು ಭಾರತಕ್ಕೆ ಉಪ ರಾಷ್ಟ್ರಪತಿ. ಬಾರದು ಬಪ್ಪದು…ಬಪ್ಪದು ತಪ್ಪದು..ಇದೇ ದೇವರ ಲೀಲೆ” ಎಂದು ಟ್ವೀಟ್‌ನಲ್ಲಿ ಬರೆದಿದ್ದರು.

ಟ್ವೀಟ್‌ ವಿರುದ್ಧ ಹಲವರು ಆಕ್ಷೇಪ ವ್ಯಕ್ತ ಪಡಿಸಿದ್ದರು. ಇದು ಕನ್ನಡಿಗರಿಗೆ ಮಾಡಿದ ಅಪಮಾನ ಎಂಬಿತ್ಯಾದಿ ಕಟು ಶಬ್ಧಗಳಿಂದ ಟೀಕಿಸಿದ್ದರು. ವಿವಾದಕ್ಕೆ  ಕಾರಣವಾದ ಬಳಿಕ ಟ್ವೀಟನ್ನು ಜಗ್ಗೇಶ್‌ ಅಳಿಸಿ ಹಾಕಿದ್ದಾರೆ.

ರಾಜ್ಯ ಸಭೆಗೆ ವೆಂಕಯ್ಯ ನಾಯ್ಡು ಅವರು ಕರ್ನಾಟಕದಿಂದ ಅಭ್ಯರ್ಥಿಯಾಗಲು ಕನ್ನಡ ಪರ ಸಂಘಟನೆಗಳು ಗೋ ವೆಂಕಯ್ಯ ಎಂದು ಆಂದೋಲನವನ್ನೇ ಆರಂಭಿಸಿದ್ದರು. ಆ ಬಳಿಕ ಬಿಜೆಪಿ ನಿರ್ಮಲಾ ಸೀತಾರಮನ್‌ ಅವರನ್ನು ಅಭ್ಯರ್ಥಿಯನ್ನಾಗಿಸಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next