ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಗೆ ಅ. 29ರಂದು ಪ್ರಧಾನಿ ನರೇಂದ್ರ ಮೋದಿ ಅವರು ಆಗಮಿಸುವ ಸಾಧ್ಯತೆ ಇರುವುದರಿಂದ ತುಳುವರ ಬೇಡಿಕೆಯನ್ನು ಪ್ರಧಾನಿಗೆ ತಲುಪಿಸಲು ತುಳುನಾಡು ಯೂನಿಫಿಕೇಶನ್ ಸಂಘಟನೆಯು ಇನ್ನೊಂದು ಟ್ವಿಟರ್ ಅಭಿಯಾನಕ್ಕೆ ಮುಂದಾಗಿದೆ. ಇದರಲ್ಲಿ ಎಲ್ಲ ಟ್ವೀಟ್‌ಗಳನ್ನು ರಾಜ್ಯವನ್ನು ಪ್ರತಿನಿಧಿಸುವ ಸಂಸದರಿಗೆ ಟ್ಯಾಗ್ ಮಾಡಲು ನಿರ್ಧರಿಸಲಾಗಿದೆ.
ಅ. 29ರಂದು ಪ್ರಧಾನಿ ನರೇಂದ್ರ ಮೋದಿ ರಾಜ್ಯಕ್ಕೆ ಆಗ ಮಿಸಲಿದ್ದಾರೆ. ಇದೇ ವೇಳೆ ಜಿಲ್ಲೆಗೂ ಬರುವ ಸಾಧ್ಯತೆ ಇರು ವುದ ರಿಂದ ಸಂಘಟನೆಯು ತುಳು ಭಾಷೆಯನ್ನು ಸಂವಿ ಧಾನದ ಎಂಟನೇ ಪರಿಚ್ಛೇದಕ್ಕೆ ಸೇರಿಸಬೇಕು ಸೇರಿದಂತೆ ತುಳುವರ ಬೇಡಿಕೆಯನ್ನು ಪ್ರಧಾನಿಯವರ ಮುಂದಿಡಲು ಸಾಮಾಜಿಕ ತಾಣ ಟ್ವೀಟರನ್ನು ಬಳಸಿಕೊಂಡಿದೆ.
ಅ. 28 ಮತ್ತು 29ರಂದು ಟ್ವೀಟರ್ ಅಭಿಯಾನ ನಡೆಯಲಿದ್ದು, ಯಾವುದೇ ಟಾರ್ಗೆಟ್ ಇಡಲಾಗಿಲ್ಲ. ಯಾರು ಬೇಕಾದರೂ ಭಾಗವಹಿಸಬಹುದು. ಮಾಡಿದ ಎಲ್ಲ ಟ್ವೀಟ್‌ಗಳನ್ನು ರಾಜ್ಯದ ಸಂಸದ ರಿಗೆ ಟ್ಯಾಗ್ ಮಾಡಲಾಗುತ್ತದೆ. ಪ್ರಮುಖವಾಗಿ ಜಿಲ್ಲೆಯ ನಾಯಕ ರಾದ ಡಿ.ವಿ. ಸದಾ ನಂದ ಗೌಡ, ನಳಿನ್ ಕುಮಾರ್ ಕಟೀಲು ಅವರಿಗೆ ಟ್ಯಾಗ್ ಮಾಡಿ ತುಳುನಾಡಿನ ಧ್ವನಿಯನ್ನು ಪ್ರಧಾನಿಯವರಿಗೆ ತಲುಪಿಸುವ ಪ್ರಯತ್ನ ನಡೆಯಲಿದೆ.
ಈ ಹಿಂದೆ ಆ. 10ರಂದು ಸಂಘಟನೆ ಟ್ವೀಟರ್ ಅಭಿಯಾನ ನಡೆಸಿದ್ದು, ಒಟ್ಟು 49,000 ಮಂದಿ ಪಾಲ್ಗೊಂಡಿದ್ದರು. ನ. 1ರ ಕರ್ನಾಟಕ ರಾಜ್ಯೋತ್ಸವ ದಂದು ಕೂಡ ಟ್ವೀಟರ್‌ನಲ್ಲಿ ಬ್ಲಾಕ್ ಡೇ ಫಾರ್ ತುಳುನಾಡು ಎಂಬ ಹ್ಯಾಶ್‌ಟ್ಯಾಗ್‌ನೊಂದಿಗೆ ಅಭಿಯಾನ ನಡೆಯಲಿದ್ದು, ಒಂದು ಲಕ್ಷ ಟ್ವೀಟ್ ಗುರಿ ಇರಿಸಲಾಗಿದೆ. ಅದಕ್ಕೂ ಮುನ್ನ ಪ್ರಧಾನಿ ಬರುತ್ತಿರುವ ಹಿನ್ನೆಲೆಯಲ್ಲಿ ಈ ಟ್ವೀಟ್ ಅಭಿಯಾನ ಮಹತ್ವ ಪಡೆದಿದೆ. ವಾಟಾಳ್ ನಾಗರಾಜ್ ಅವರೂ ಟ್ವೀಟರ್ ಅಭಿಯಾನಕ್ಕೆ ಬೆಂಬಲ ಸೂಚಿಸಿದ್ದಾರೆ.
ಟ್ವೀಟ್ ಟ್ಯಾಗ್: NarendraModi@PMO india @bsyBJP#tuluto8thschedule#Save Tulunad
ಪ್ರಧಾನಿಗೆ ಆಗ್ರಹ
ಪಂಚದ್ರಾವಿಡ ಭಾಷೆಗಳಲ್ಲಿ ಒಂದಾದ ತುಳು ಭಾಷೆ ಸಂವಿಧಾನದ 8ನೇ ಪರಿ ಚ್ಛೇದಕ್ಕೆ ಸೇರ್ಪಡೆಯಾಗಬೇಕೆಂಬುದು ಹಲವು ವರ್ಷಗಳ ಹೋರಾಟವಾಗಿದೆ. ತುಳು ಭಾಷೆ 8ನೇ ಪರಿಚ್ಛೇದಕ್ಕೆ ಸೇರ್ಪಡೆ ಯಾಗಬೇಕೆಂಬುದು ಶ್ರೀ ಕ್ಷೇತ್ರ ಧರ್ಮಸ್ಥಳ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆ ಅವರ ಕನಸು. ಈ ನಿಟ್ಟಿನಲ್ಲಿ ಅವರು ಹಲವು ಬಾರಿ ಪ್ರಧಾನಿ ಸೇರಿದಂತೆ ಪ್ರಮುಖರನ್ನು ಒತ್ತಾಯಿಸುತ್ತಲೇ ಬಂದಿ ದ್ದಾರೆ. ಈ ಬಾರಿ ಪ್ರಧಾನಿ ಜಿಲ್ಲೆಗೆ ಆಗಮಿಸಿ ದ್ದಲ್ಲಿ ಖುದ್ದು ಹೆಗ್ಗಡೆಯವರೇ ಮತ್ತೂಮ್ಮೆ ಪ್ರಧಾನಿಯವರನ್ನು ಆಗ್ರಹಿಸುವ ಬಗ್ಗೆ ತಿಳಿಸಿದ್ದಾರೆ ಎಂದು ತುಳುನಾಡು ಯೂನಿಫಿ ಕೇಶನ್ ಅಧ್ಯಕ್ಷ ಅಶ್ವತ್ಥ್ ತಿಳಿಸಿದ್ದಾರೆ.