Advertisement

ತುಳು ರಾಜ್ಯ ಭಾಷೆಗಾಗಿ ಇಂದು ಟ್ವೀಟ್‌ ಅಭಿಯಾನ

10:49 PM Sep 04, 2021 | Team Udayavani |

ಮಂಗಳೂರು: ತುಳು ಭಾಷೆಯನ್ನು ರಾಜ್ಯದ ಅಧಿಕೃತ ಭಾಷೆಯನ್ನಾಗಿ ಘೋಷಿಸುವ ನಿರ್ಣಯವನ್ನು ಸೆ. 13ರಿಂದ 24ರ ವರೆಗೆ ನಡೆಯುವ ಅಧಿವೇಶನದಲ್ಲಿ ಕೈಗೊಳ್ಳಬೇಕು ಎಂದು ಆಗ್ರಹಿಸಿ ಸೆ. 5ರಂದು ಜೈ ತುಳುನಾಡು ಸೇರಿದಂತೆ ತುಳುನಾಡಿನ ವಿವಿಧ ಸಂಘಟನೆಗಳ ಆಶ್ರಯದಲ್ಲಿ “ಟ್ವೀಟ್‌ ಅಭಿಯಾನ’ ನಡೆಯಲಿದೆ.

Advertisement

ಅಧಿವೇಶನದಲ್ಲಿ “ನಮ್ಮ ಶಾಸಕರು ಮಸೂದೆ ಮಂಡನೆ ಮಾಡಿ ತುಳು ಭಾಷೆಯನ್ನು ನಮ್ಮ ರಾಜ್ಯದ ಅಧಿಕೃತ ಭಾಷೆಯನ್ನಾಗಿ ಮಾಡಬೇಕು’ ಎಂಬ ಒತ್ತಾಯದೊಂದಿಗೆ ಸೆ. 4ರ ಮಧ್ಯರಾತ್ರಿ 12 ಗಂಟೆಯಿಂದ ಸೆ. 5ರ ಮಧ್ಯರಾತ್ರಿ 11.59ರ ವರೆಗೆ #TuluOfficialinKA_KL ಮತ್ತು #SpeakUpForTulu  ಎಂಬ ಹ್ಯಾಶ್‌ಟ್ಯಾಗ್‌ ಮುಖೇನ ಟ್ವೀಟರ್‌ ಅಭಿಯಾನ ನಡೆಯಲಿದೆ.

Advertisement

Udayavani is now on Telegram. Click here to join our channel and stay updated with the latest news.

Next