Advertisement

ತುಳು ರಾಜ್ಯ ಭಾಷೆಗೆ ಆಗ್ರಹ: ಟ್ವೀಟ್‌ ಅಭಿಯಾನಕ್ಕೆ ಬೆಂಬಲ

12:28 AM Sep 06, 2021 | Team Udayavani |

ಮಂಗಳೂರು: ತುಳು ಭಾಷೆಯನ್ನು ರಾಜ್ಯದ ಅಧಿಕೃತ ಭಾಷೆಯನ್ನಾಗಿ ಘೋಷಿಸುವ ನಿರ್ಣಯವನ್ನು ಸೆ. 13ರಿಂದ 24ರ ವರೆಗೆ ನಡೆಯುವ ಅಧಿವೇಶನದಲ್ಲಿ ಕೈಗೊಳ್ಳಬೇಕು ಎಂದು ಆಗ್ರಹಿಸಿ ಜೈ ತುಳುನಾಡು ಸೇರಿದಂತೆ ತುಳುನಾಡಿನ ವಿವಿಧ ಸಂಘಟನೆಗಳ ಆಶ್ರಯದಲ್ಲಿ ರವಿವಾರ “ಟ್ವೀಟ್‌ ಅಭಿಯಾನ’ ನಡೆದಿದ್ದು, ಸಾರ್ವಜನಿಕರಿಂದ ಉತ್ತಮ ಬೆಂಬಲ ವ್ಯಕ್ತವಾಯಿತು.

Advertisement

ಸೆ. 4ರ ಮಧ್ಯರಾತ್ರಿ 12ರಿಂದ ಸೆ. 5ರ ಮಧ್ಯರಾತ್ರಿ 11.59 ರವರೆಗೆ ನಡೆದ ಟ್ವೀಟ್‌ ಅಭಿಯಾನದಲ್ಲಿ ಜನಪ್ರತಿನಿಧಿಗಳು, ಸಿನೆಮಾ ತಾರೆಯರು, ಸಾರ್ವಜನಿಕರೂ ಸೇರಿ #TuluOfficialinKA_KL ಮತ್ತು #SpeakUpForTulu  ಹ್ಯಾಶ್‌ ಟ್ಯಾಗ್‌ ಮುಖೇನ ಟ್ವೀಟ್‌ ಮಾಡಿದ್ದಾರೆ. ಟ್ವಿಟ್ಟರ್‌ನಲ್ಲಿಯೂ ಇದು ಟ್ರೆಂಡ್‌ ಆಗಿತ್ತು. ಟ್ವೀಟ್‌ಗಳನ್ನು ಕರಾವಳಿಯ ಜನಪ್ರತಿನಿಧಿಗಳು, ಮುಖ್ಯಮಂತ್ರಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಸುನಿಲ್‌ ಕುಮಾರ್‌ ಅವರಿಗೂ ಟ್ಯಾಗ್‌ ಮಾಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next