ನವದೆಹಲಿ: ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಎಲ್‌ಇಡಿ ಓಪನ್-ಸೆಲ್ ಪ್ಯಾನಲ್‌ಗಳ ಬೆಲೆ ಹೆಚ್ಚಾಗಿದ್ದು, ಇದರ ಪರಿಣಾಮ, ಮುಂದಿನ ತಿಂಗಳಿನಿಂದ ಭಾರತದಲ್ಲಿ ಮಾರಾಟವಾಗುವ ಎಲ್‌ಇಡಿ ಟಿವಿಗಳ ಬೆಲೆಯಲ್ಲಿ ಗಣನೀಯವಾಗಿ ಏರಿಕೆಯಾಗಲಿದೆ.
ಇದನ್ನೂ ಓದಿ:ಗ್ರಾಹಕರೇ ಗಮನಿಸಿ: Bank ಕೆಲಸ ಇಂದೇ(ಮಾ.12) ಮುಗಿಸಿ;ವಾರಾಂತ್ಯಕ್ಕೆ ಹಣ ತೆಗೆದಿಟ್ಟುಕೊಳ್ಳಿ!
ಎಲ್‌ಇಡಿ ಟಿವಿ ತಯಾರಿಕೆಯಲ್ಲಿ ಪ್ರಮುಖವಾದ ಭಾಗವಾಗಿರುವ ಓಪನ್-ಸೆಲ್ ಪ್ಯಾನಲ್‌ಗಳ ಬೆಲೆ ಶೇ. 35ರಷ್ಟು ಹೆಚ್ಚಾಗಿರುವುದರಿಂದ, ಜನಪ್ರಿಯ ಟಿವಿ ಬ್ರಾಂಡ್‌ಗಳಾದ ಪ್ಯಾನಸೋನಿಕ್, ಹೈಯರ್ ಹಾಗೂ ಥಾಮ್ಸನ್ ಕಂಪನಿಗಳು ತಮ್ಮ ಟಿವಿಗಳ ಬೆಲೆಯನ್ನು ಹೆಚ್ಚಿಸುವ ಬಗ್ಗೆ ಚಿಂತನೆ ನಡೆಸಿವೆ.
ಈ ಕುರಿತಂತೆ ಪ್ರತಿಕ್ರಿಯೆ ನೀಡಿರುವ ಪ್ಯಾನಸೋನಿಕ್ ಸಂಸ್ಥೆಯ ಸಿಇಒ ಮನೀಶ್ ಶರ್ಮಾ, ಬರುವ ಏಪ್ರಿಲ್‌ನಿಂದ ಪ್ಯಾನಸೋನಿಕ್ ಸಂಸ್ಥೆಗಳ ಎಲ್‌ಇಡಿ ಟಿವಿಗಳ ಬೆಲೆಯಲ್ಲಿ ಶೇ. 5ರಿಂದ 7ರವರೆಗೆ ಹೆಚ್ಚಾಗಬಹುದು” ಎಂದು ಹೇಳಿದ್ದಾರೆ. ಮತ್ತೊಂದು ಅಂದಾಜಿನ ಪ್ರಕಾರ, ಪ್ರತಿ ಎಲ್‌ಇಡಿ ಟಿವಿಯ ಬೆಲೆ 2,000 ರೂ.ಗಳಿಂದ 3,000 ರೂ.ಗಳವರೆಗೆ ವೃದ್ಧಿಯಾಗುತ್ತದೆ.
ಶೀಘ್ರವೇ 900 ಮಂದಿ ಫ್ಲ್ಯಾಟ್ ಖರೀದಿ ಕನಸು ನನಸು:
ಗ್ರೇಟರ್ ನೋಯ್ಡಾದಲ್ಲಿ ಸ್ಥಗಿತಗೊಂಡಿದ್ದ ಬಿಲ್ಡರ್ ಯೋಜನೆಗಳಿಗೆ ಕೇಂದ್ರ ಸರ್ಕಾರ 165 ಕೋಟಿ ರೂಪಾಯಿ ಬಿಡುಗಡೆ ಮಾಡಿದ್ದು, ಇದರಿಂದ ಮನೆ ಕೊಂಡುಕೊಳ್ಳುವ 900 ಮಂದಿಯ ಕನಸು ನನಸಾಗಲಿದೆ ಎಂದು ಮಾಧ್ಯಮದ ವರದಿಯೊಂದು ತಿಳಿಸಿದೆ.
ಈ ಯೋಜನೆ 2 ಹಂತಗಳಲ್ಲಿ ಪೂರ್ಣಗೊಳ್ಳಲಿದೆ. 2022ರ ಫೆಬ್ರವರಿ ತಿಂಗಳಿನಲ್ಲಿ ಗ್ರಾಹಕರು ಫ್ಲ್ಯಾಟ್ ಪಡೆಯಲಿದ್ದಾರೆ. ಇನ್ನೂ ನಾಲ್ಕು ಬಿಲ್ಡರ್ ಯೋಜನೆಗಳಿಗೆ ಶೀಘ್ರವೇ ಹಣ ಲಭ್ಯವಾಗುವ ನಿರೀಕ್ಷೆ ಇದೆ ಎಂದು ವರದಿ ತಿಳಿಸಿದೆ.