Advertisement

ಟಿವಿಎಸ್‌ನಿಂದ “ಎಥೆನಾಲ್‌’ಬೈಕ್‌ ಬಿಡುಗಡೆ

04:38 AM Jul 14, 2019 | Lakshmi GovindaRaj |

ಬೆಂಗಳೂರು: ಆಟೋಮೊಬೈಲ್‌ ಕ್ಷೇತ್ರದ ಖ್ಯಾತ ಟಿವಿಎಸ್‌ ಮೋಟಾರ್‌ ಕಂಪನಿ ದೇಶದ ಪ್ರಥಮ ಎಥೆನಾಲ್‌ ಬಳಸುವ ಬೈಕ್‌ ಅನ್ನು ಬಿಡುಗಡೆ ಮಾಡಿದೆ. ದೆಹಲಿಯಲ್ಲಿ ಟಿವಿಎಸ್‌ ಅಪಾಚೆ ಆರ್‌ಟಿಆರ್‌ 200 ಎಫ್‌ಐ ಇ100 ಮೋಟಾರ್‌ ಸೈಕಲ್‌ನ ವಿಶೇಷ ಆವೃತ್ತಿಯನ್ನು ಕೇಂದ್ರ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್‌ ಜೈರಾಂ ಗಡ್ಕರಿ, ನೀತಿ ಆಯೋಗದ ಸಿಇಒ ಅಮಿತಾಬ್‌ ಕಾಂತ್‌ ಹಾಗೂ ಟಿವಿಎಸ್‌ ಮೋಟಾರ್‌ ಕಂ. ಅಧ್ಯಕ್ಷ ವೇಣು ಶ್ರೀನಿವಾಸನ್‌ ಅವರು ಶುಕ್ರವಾರ ಅನಾವರಣಗೊಳಿಸಿದರು.

Advertisement

ನಂತರ ಮಾತನಾಡಿದ ಸಚಿವ ಗಡ್ಕರಿ ಅವರು ದೇಶದಲ್ಲಿ ಎಥೆನಾಲ್‌ ಬಂಕ್‌ಗಳನ್ನು ತೆರೆಯುವಂತೆ ಪೆಟ್ರೋಲಿಯಂ ಸಚಿವಾಲಯವನ್ನು ಕೋರುವುದಾಗಿ ತಿಳಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಟಿವಿಎಸ್‌ ಅಧ್ಯಕ್ಷ ವೇಣು ಅವರು, ಕಂಪನಿ 2018ರಲ್ಲಿ ನಡೆದ ಆಟೋ ಎಕ್ಸ್‌ಪೋದಲ್ಲಿ ಎಥೆನಾಲ್‌ ಕಾನ್ಸೆಪ್ಟ್ ಟಿವಿಎಸ್‌ ಅಪಾಚೆ ಆರ್‌ಟಿಆರ್‌ 200 4ವಿ ಬೈಕ್‌ ಅನ್ನು ಪ್ರದರ್ಶಿಸಿತ್ತು.

ವಾಹನ‌ ಉದ್ಯಮವು ಇತ್ತೀಚಿನ ದಿನಗಳಲ್ಲಿ ಪರಿಸರಸ್ನೇಹಿ ಇಂಧನಗಳ (ಎಲೆಕ್ಟ್ರಿಕ್‌, ಹೈಬ್ರಿಡ್‌, ಎಥೆನಾಲ್‌) ಬಳಕೆಯತ್ತ ಒತ್ತು ನೀಡುತ್ತಿದೆ. ಆ ಕಾನ್ಸೆಪ್ಟ್ನಡಿ ನಮ್ಮ ಕಂಪನಿ ಮೊಟ್ಟ ಮೊದಲ ಬಾರಿಗೆ ಎಥೆನಾಲ್‌ ಅನ್ನು ದ್ವಿಚಕ್ರ ವಾಹನದ ಇಂಧನವಾಗಿ ಬಳಕೆ ಮಾಡುವ ಆರ್‌ಟಿಆರ್‌ 200 ಎಫ್‌ಐ ಇ100 ಬೈಕ್‌ ಹೊರತಂದಿದೆ. ಪೆಟ್ರೋಲ್‌ಗಿಂತ ಕಡಿಮೆ ದರದಲ್ಲಿ ದೊರೆಯುವ ಇಂಧನ ಇದಾಗಿದೆ ಎಂದರು.

ನ್ಪೋರ್ಟ್ಸ್ ವೈಶಿಷ್ಟತೆ ಹೊಂದಿರುವ ಈ ಮೋಟಾರ್‌ ಸೈಕಲ್‌ ಮೇಲೆ ಎಥೆನಾಲ್‌ ಹಸಿರು ಲೋಗೋ ಹಾಕಲಾಗಿದೆ. ಗಂಟೆಗೆ 129 ಕಿ.ಮೀ. ವೇಗದಲ್ಲಿ ಓಡುವ ಇ100ಗೆ ಟ್ವಿನ್‌-ಸೇ³ ಟ್ವಿನ್‌-ಪೋರ್ಟ್‌ ಇಎಫ್‌ಐ ತಂತ್ರಜ್ಞಾನ ಅಳವಡಿಸಲಾಗಿದ್ದು, 21ಪಿಎಸ್‌ನ 8500 ಆರ್‌ಪಿಎಂ ಶಕ್ತಿ ಇದಕ್ಕಿದೆ. ಕರ್ನಾಟಕ, ಮಹಾರಾಷ್ಟ್ರ ಹಾಗೂ ಉತ್ತರ ಪ್ರದೇಶದಲ್ಲಿ ಮಾತ್ರ ಲಭ್ಯವಿರುವ ಈ ಆವೃತ್ತಿಯ ಬೈಕ್‌ನ ಎಕ್ಸ್‌ ಶೋರೂಮ್‌ ಬೆಲೆ 1.20 ಲಕ್ಷ ರೂ.

Advertisement

Udayavani is now on Telegram. Click here to join our channel and stay updated with the latest news.

Next