ಬೆಂಗಳೂರು: ದ್ವಿಚಕ್ರ ಮತ್ತು ತ್ರಿಚಕ್ರ ವಾಹನಗಳ ಉತ್ಪಾದನೆಯಲ್ಲಿ ಅಗ್ರಗಣ್ಯ ಕಂಪನಿ ಎನಿಸಿರುವ ಟಿವಿಎಸ್ ಮೋಟಾರ್ ವಾಹನ ವಿನ್ಯಾಸ ವಿದ್ಯಾರ್ಥಿಗಳಿಗಾಗಿ ಆಯೋಜಿಸಿದ್ದ ಮೊದಲ ಆವೃತ್ತಿಯ ಟಿವಿಎಸ್ “ಎನ್‌ಟಿಒಆರ್‌ಕ್ಯೂ-125 (ಎನ್‌ಟೋರ್ಕ್) ಕಾಲ್ ಆಫ್ ಡಿಸೈನ್’ ಸ್ಪರ್ಧೆ ಯಶಸ್ವಿಯಾಗಿ ಪೂರ್ಣಗೊಂಡಿದೆ.
ಈ ಸ್ಪರ್ಧೆಯಲ್ಲಿ ಬೆಂಗಳೂರಿನ ಸ್ಟೇಟ್ ಸ್ಕೂಲ್ ಆಫ್ ಡಿಸೈನ್‌ನ ಇವಾಂಕಾ ತಿಮ್ಮಯ್ಯ ಅಗ್ರ ಪ್ರಶಸ್ತಿ ಗಳಿಸಿದ್ದಾರೆ. ಇವರ ಟಿವಿಎಸ್ ಎನ್‌ಟೋರ್ಕ್ 125 ರೇಸ್ ಮೆಷಿನ್‌ನ ವಿನ್ಯಾಸ ಅವರಿಗೆ ಪ್ರಶಸ್ತಿ ಮುಡಿಗೇರಿಸಲು ನೆರವಾಗಿದೆ. ಗಾಂಧಿನಗರದ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಡಿಸೈನ್ಸ್‌ನ ಅನೂಪ್ ನೆಲ್ಲಿಕಲಾಯಿಲ್ ಮೊದಲ ರನ್ನರ್ ಅಪ್ ಹಾಗೂ ಮುಂಬೈ ಐಐಟಿ ಕೈಗಾರಿಕಾ ವಿನ್ಯಾಸ ಕೇಂದ್ರದ ಸಿದ್ಧಾರ್ಥ ಸಂಗ್ವಾನ್, ಗಾಂಧಿನಗರದ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಡಿಸೈನ್ಸ್‌ನ ಸಚಿನ್ ಸಿಂಗ್ ತೇನ್‌ಸಿಂಗ್ ಜಂಟಿಯಾಗಿ ದ್ವಿತೀಯ ರನ್ನರ್ ಅಪ್ ಪ್ರಶಸ್ತಿ ಪಡೆದಿದ್ದಾರೆ.
ಟಿವಿಎಸ್ ಕಂಪನಿ ಹೊರತಂದಿರುವ ನೂತನ ದ್ವಿಚಕ್ರ ವಾಹನವನ್ನು ವಿವಿಧ ಬಗೆಯ ರೇಸ್ ಯಂತ್ರ ವಿನ್ಯಾಸದಲ್ಲಿ ಹೊರತರಲು “ಕಾಲ್ ಆಫ್ ಡಿಸೈನ್ 2019’ರ ಸ್ಪರ್ಧೆಯ ಮೂಲಕ ವಿದ್ಯಾರ್ಥಿಗಳಿಗೆ ತಮ್ಮ ಕಲ್ಪನೆಯನ್ನು ಮೆಷಿನ್ ಪ್ರತಿರೂಪದಲ್ಲಿ ಮಾಡಲು ಅವಕಾಶ ಕಲ್ಪಿಸಲಾಗಿತ್ತು. ಇದರಲ್ಲಿ ದೇಶದ ವಿವಿಧ ಭಾಗದ 20 ಡಿಸೈನಿಂಗ್ ಕಾಲೇಜಿನ 300ಕ್ಕೂ ಅಧಿಕ ಸ್ಪರ್ಧಿಗಳು ಹಾಗೂ 20ಕ್ಕೂ ಹೆಚ್ಚು ಆಟೋಮೊಬೈಲ್ ಮುದ್ರಣ ಮಾಧ್ಯಮದ ಪತ್ರಕರ್ತರು ಭಾಗವಹಿಸಿದ್ದರು.
ಸ್ಪರ್ಧಿಗಳನ್ನು ಎರಡು ಹಂತಗಳಲ್ಲಿ ವಿಭಜಿಸಲಾಗಿದ್ದು ಇದರ ಅನ್ವಯ ವಿದ್ಯಾರ್ಥಿಗಳು ಹಾಗೂ ವಾಹನ ಪತ್ರಕರ್ತರು ತಮ್ಮ ಸೃಜನಾತ್ಮಕ, ವಿನೂತನ ಸಾಮರ್ಥ್ಯವನ್ನು ಪ್ರದರ್ಶಿಸಲು ಅವಕಾಶ ಕಲ್ಪಿಸಲಾಗಿತ್ತು. ಮಾಧ್ಯಮ ವರ್ಗದಿಂದ ಸ್ಪರ್ಧಿಸಿದವರ ಪೈಕಿ ಮೂರು ಪ್ರಶಸ್ತಿಗಳನ್ನು ತನ್ನದಾಗಿಸಿಕೊಂಡರು.
ವಿದ್ಯಾರ್ಥಿಗಳಿಗೆ ಪ್ರೋತ್ಸಾಹ: ಹೊಸೂರಿನ ಉತ್ಪಾದನಾ ಘಟಕದ ಆವರಣದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಟಿವಿಎಸ್ ಕಂಪನಿ ನಿರ್ದೇಶಕ ಕೆ.ಎನ್. ರಾಧಾಕೃಷ್ಣ ಅವರು ಪ್ರಶಸ್ತಿ ವಿತರಿಸಿ ಮಾತನಾಡಿದರು. ನಮ್ಮ ಸಂಸ್ಥೆ ಈ ವರ್ಷದಿಂದ ಆರಂಭಿಸಿರುವ ಮೊದಲ ಆವೃತ್ತಿಯ ಕಾಲ್ ಆಫ್ ಡಿಸೈನ್ ಸ್ಪರ್ಧೆ ಯಶಸ್ವಿಯಾಗಿದೆ. ಆಟೋಮೊಬೈಲ್ ಕ್ಷೇತ್ರದ ವಾಹನಗಳ ವಿನ್ಯಾಸದ ಬಗ್ಗೆ ಅಧ್ಯಯನ ನಡೆಸುತ್ತಿರುವ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ನೀಡುವ ಸಲುವಾಗಿ ಪ್ರತಿವರ್ಷ ಇಂತಹ ಕಾರ್ಯಕ್ರಮ ಆಯೋಜನೆ ಮಾಡಲಾಗುವುದು ಎಂದರು.
ತೀರ್ಪುಗಾರರ ತಂಡದಲ್ಲಿ ಟಿವಿಎಸ್ ಮೋಟಾರ್ ಕಂಪನಿ ಆರ್ ಆ್ಯಂಡ್ ಡಿ ಸ್ಟೈಲ್ ಮತ್ತು ಡಿಸೈನ್ ಹಿರಿಯ ಉಪಾಧ್ಯಕ್ಷ ಎಲಿಯಸ್ ಅಬ್ರಹಾಂ, ಸ್ಕೂಟರ್ ವಿನ್ಯಾಸ ಮುಖ್ಯಸ್ಥ ಅಮಿತ್ ರಾಜ್‌ವಾಡೆ, ಹೆಲ್‌ರೈಸಸ ಮೋಟರ್‌ವೆàರ್ ವಿನ್ಯಾಸ ಮುಖ್ಯಸ್ಥ ಮುಂತಸೇರ್ ಮೀರ್‌ಕರ್ ಹಾಗೂ ಕಮ್ಯೂಟರ್ ಮೋಟರ್‌ಸೈಕಲ್ಸ್ ಮಾರಾಟ (ಉಪಾಧ್ಯಕ್ಷ) ಅನಿರುದ್ಧ್ ಹಲ್ದಾರ್ ಇದ್ದರು.