Advertisement

ಕೋವಿಡ್‌-19 ಸಮರಕ್ಕೆ ಟಿವಿಎಸ್‌ ಕಂಪನಿ ನೆರವು

02:57 PM May 09, 2021 | Team Udayavani |

ಬೆಂಗಳೂರು: ಕೋವಿಡ್‌-19ವಿರುದ್ಧದ ಸಮರಕ್ಕೆ ನೆರವು ನೀಡಲು ಸಮಗ್ರ ಯೋಜನೆ ರೂಪಿ ಸಿರುವ ಟಿವಿಎಸ್‌ ಮೋಟಾರ್‌ ಕಂಪನಿಸುಂದರಂ ಕ್ಲೇಟಾನ್‌ ಹಾಗೂ ಇತರ ಸಮೂಹ ಸಂಸ್ಥೆಗಳ ಜೊತೆಗೊಡಿ ವೈದ್ಯ ಕೀಯ ಹಾಗೂ ಇತರ ಸೌಲಭ್ಯಗಳನ್ನು ಪೂರೈಸಲು 40 ಕೋಟಿ ರೂಪಾಯಿಗಳ ವಾಗ್ಧಾನ ಮಾಡಿದೆ.

Advertisement

ಟಿವಿಎಸ್‌ ಮೋಟಾರ್‌ ಮತ್ತು ಸುಂದರಂ ಕ್ಲೇಟಾನ್‌ ಲಿಮಿಟೆಡ್‌ನ‌ ಸಾಮಾಜಿಕ ಅಂಗವಾಗಿರುವ ಶ್ರೀನಿವಾಸನ್‌ ಸರ್ವಿಸೆಸ್‌ ಟ್ರಸ್ಟ್ ಈ ಯೋಜನೆ ಕಾರ್ಯಗತಗೊಳಿಸಲಿದೆ. 40 ಕೋಟಿ ರೂ.ಮೊತ್ತವನ್ನು ಆಕ್ಸಿಜನ್‌ ಕಾನ್ಸನ್ಟ್ರೆಟರ್‌, ಪಿಪಿಇ ಕಿಟ್‌,ಔಷಧಿಗಳು, ವೈದ್ಯಕೀಯ ಉಪಕರಣಗಳು ಸೇರಿದಂತೆ ಜೀವರಕ್ಷಕ ಸೌಲಭ್ಯಗಳನ್ನು ಇಡೀದೇಶದಲ್ಲಿ ಪೂರೈಸಲು ಬಳಸಲಾಗುವುದು.

ಈ ಯೋಜನೆಯ ಭಾಗವಾಗಿ ಕರ್ನಾಟಕ,ತಮಿಳುನಾಡು, ಹಿಮಾಚಲ ಪ್ರದೇಶ ರಾಜ್ಯಗಳ ವಿವಿಧ ಆಸ್ಪತ್ರೆಗಳು ಮತ್ತು ಆರೋಗ್ಯ ಕೇಂದ್ರಗಳಿಗೆ 2 ಸಾವಿರ ಆಕ್ಸಿಜನ್‌ ಕಾನ್ಸನ್ಟ್ರೆಟರ್‌ ಒದಗಿಸಲಾಗುವುದು. ಪ್ರತಿದಿನ 20 ಸಾವಿರ ಆಹಾರದ ಪ್ಯಾಕೇಟ್‌ಗಳನ್ನು ಅಗತ್ಯ ಸೇವೆಗಳನ್ನು ಒದಗಿಸುವಲ್ಲಿ ತೊಡಗಿಸಿಕೊಂvವ ‌ ರಿಗೆ ವಿತರಿಸ ಲಾಗುವುದು.ಇದಲ್ಲದೆ ಈ ರಾಜ್ಯಗಳ 500ಕ್ಕೂಹೆಚ್ಚು ಸರ್ಕಾರಿ ಆರೋಗ್ಯ ಕೇಂದ್ರಗಳಲ್ಲಿ ಲಕ್ಷಾಂತರ ಮಾಸ್ಕ್, ಸಾವಿರಾರು ಆಕ್ಸಿಮೀಟರ್‌ ಹಾಗೂಪಿಪಿಇ ಕಿಟ್‌ಗಳನ್ನು, ಹ್ಯಾಂಡ್‌ ಸ್ಯಾನಿಟೈಸರ್‌, ಅಗತ್ಯ ಔಷಧಿಗಳುನ್ನು ಪೂರೈಸಲಾಗುವುದು.

ಜೊತೆಗೆ ದೇಶದ ಗ್ರಾಮೀಣ ಭಾಗದ ಕೋವಿಡ್‌ಕೇರ್‌ ಸೆಂಟರ್‌ಗಳಲ್ಲಿ ಅಗತ್ಯ ನೆರವು ಒದಗಿಸಲು ಕಂಪೆನಿ ನಿರಂತರವಾಗಿ ಪ್ರಯತ್ನಿಸಲಿದೆ. ‌ ಯೋಜನೆ ಕುರಿತು ಮಾತನಾಡಿದ ಟಿವಿಎಸ್‌ ಮೋಟಾರ್‌ ಕಂಪನಿಯ ಅಧ್ಯಕ್ಷ ವೇಣು ಶ್ರೀನಿವಾಸನ್‌, ಕೊರೊನಾ ಎರಡನೇ ಅಲೆ ಉಲ್ಬಣಗೊಂಡ ಪರಿಣಾಮ ಇಡೀದೇಶ ಸಂದಿಗ್ಧ ಪರಿಸ್ಥಿತಿ ಎದುರಿಸುತ್ತಿದೆ. ಈ ಸಾಂಕ್ರಾಮಿಕದ ಪ್ರಭಾವದಿಂದ ಹೊರಬರಬೇಕಾ ದರೆಸಂಘಟಿತ ಪ್ರಯತ್ನಗಳನ್ನು ನಡೆಸಬೇಕಾ ಗಿದೆ.  ಈನಿಟ್ಟಿನಲ್ಲಿ ಸರ್ಕಾರದ ಜೊತೆ ಕೈಜೋಡಿಸಲು ಟಿವಿಎಸ್‌ ಮೋಟಾರ್‌ ಸಿದ œವಿದೆ ಎಂದು ಹೇಳಿದರು.

ಚೆನೈ„ನ ರಾಜೀವಗಾಂಧಿ ಸಾರ್ವಜನಿಕ ಆಸ ³ತ್ರೆ,ಸ್ಟೇನ್ಲ ಮೆಡಿಕಲ್‌ ಕಾಲೇಜು ಆಸ ³ತ್ರೆಯ ಜೊತೆಗೆಟಿವಿಎಸ್‌ ಮೋಟಾರ್‌ ಕೆಲಸ ಮಾಡುತ್ತಿದೆ.ಕಾರ್ಖಾನೆ ಇರುವ ಹೊಸೂರು, ಮೈಸೂರಿನಲ್ಲಿಎರಡು ಆ್ಯಂಬುಲೆನ್ಸ್‌ಗಳನ್ನು ಸ್ಥಳೀಯ ಆಡಳಿತಕ್ಕೆಹಸ್ತಾಂತರಿಸಲಾಗಿದೆ ಎಂದು ತಿಳಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next