ಹೊಸೂರು: ದ್ವಿಚಕ್ರ ಮತ್ತು ತ್ರಿಚಕ್ರ ವಾಹನಗಳ ಉತ್ಪಾದನಾ ಸಂಸ್ಥೆ ಟಿವಿಎಸ್ ಮೋಟಾರ್, ತನ್ನ ಟಿವಿಎಸ್ ಅಪಾಚೆ ಆರ್‌ಟಿಆರ್ ಸರಣಿಯ ವಾಹನಗಳನ್ನು ಎಬಿಎಸ್ ಸೌಲಭ್ಯದೊಂದಿಗೆ ನವೀಕರಿಸಿ ಬಿಡುಗಡೆ ಮಾಡಿದೆ.
ಸೂಪರ್ ಮೋಟೊ ಎಬಿಎಸ್ ಸೌಲಭ್ಯವನ್ನು ಅಪಾಚೆ ಆರ್‌ಟಿಆರ್ 1602, ಅಪಾಚೆ ಆರ್‌ಟಿಆರ್ 1604 ಮತ್ತು ಅಪಾಚೆ ಆರ್‌ಟಿಆರ್ 180 ವಾಹನಗಳನ್ನು ಸವಾರಿಗೆ ಅನುಕೂಲ ಹಾಗೂ ಅತ್ಯುತ್ತಮ ಭದ್ರತೆ ಒದಗಿಸುವಂತೆ ಅಭಿವೃದ್ಧಿಪಡಿಸಲಾಗಿದೆ. ಟಿವಿಎಸ್ ಅಪಾಚೆ ಆರ್‌ಟಿಆರ್ ಸರಣಿಯ ಮೋಟಾರ್ ಸೈಕಲ್‌ಗೆ ಹೊಸ ಪೀಳಿಗೆಯ ಎಬಿಎಸ್ ಘಟಕವನ್ನು ವಿಶೇಷವಾಗಿ ಅಲ್‌ಗೋರಿಥಿಂ ಅನ್ನು ವಿಶೇಷ ರೇಸಿಂಗ್ ಟ್ರಾಕ್‌ಗೆ ಅನುಗುಣವಾಗಿ ರೂಪಿಸಲಾಗಿದೆ.
ಅಪಾಚೆ ಆರ್‌ಟಿಆರ್ 2004 ರೇಸ್ ಎಡಿಷನ್ 2.0 ಈಗ ಡ್ನೂಯೆಲ್ ಚಾನಲ್ ಎಬಿಎಸ್ ಮತ್ತು ಆರ್‌ಎಲ್‌ಪಿ (ರೇರ್ ವೀಲ್ ಲಿಫ್ಟ್ ಆಫ್ ಪೊ›ಟೆಕ್ಷನ್) ನಿಯಂತ್ರಣ ಸೌಲಭ್ಯದೊಂದಿಗೆ ಬರಲಿದೆ. ಉನ್ನತ ಬ್ರೇಕಿಂಗ್ ಸಾಮರ್ಥ್ಯ, ಆಪ್ಟಿಮಲ್ ಕಾರ್ನರಿಂಗ್ ಕಂಟ್ರೋಲ್ ಸೌಲಭ್ಯ ಇದಕ್ಕಿದೆ.
ಈ ಕುರಿತು ಟಿವಿಎಸ್ ಮೋಟಾರ್ ಕಂಪನಿಯ ನಿರ್ದೇಶಕ ಮತ್ತು ಸಿಇಒ ಕೆ.ಎನ್.ರಾಧಾಕೃಷ್ಣನ್ ಅವರು, “ಟಿವಿಎಸ್ ಅಪಾಚೆ ಸರಣಿ ವಾಹನಗಳು ಉತ್ಕೃಷ್ಟ ಸಾಮರ್ಥ್ಯ ಹೊಂದಿದ್ದು, ಫ್ಯಾಕ್ಟರಿ ರೇಸಿಂಗ್ ಆವೃತ್ತಿಯು ಉನ್ನತ ತಂತ್ರಜ್ಞಾನವನ್ನು ಒಳಗೊಂಡಿವೆ. 2011ರಲ್ಲಿ ನಾವು ಟ್ವಿನ್ ಚಾನಲ್ ಎಬಿಎಸ್ (ಆ್ಯಂಟಿ ಲಾಕ್ ಬ್ರೇಕಿಂಗ್ ಸಿಸ್ಟಮ್) ಅನ್ನು ಅಪಾಚೆ ಆರ್‌ಟಿಆರ್ 180ಯಲ್ಲಿ ಅಳವಡಿಸಿದ ಮೊದಲ ಕಂಪನಿ ಎಂಬ ಹೆಗ್ಗಳಿಕೆ ಹೊಂದಿದ್ದೇವೆ ಎಂದರು.
ಅಪಾಚೆ ಆರ್‌ಟಿಆರ್ ಸರಣಿಯ ಎಲ್ಲ ವಾಹನಗಳು ಎಬಿಎಸ್ ಸೌಲಭ್ಯದೊಂದಿಗೆ ದೇಶಾದ್ಯಂತ ಎಲ್ಲ ಟಿವಿಎಸ್ ಮಳಿಗೆಗಳಲ್ಲಿ ಲಭ್ಯವಿದ್ದು, ಇವುಗಳ ದೆಹಲಿ ಎಕ್ಸ್‌ಷೋ ರೂಮ್ ಬೆಲೆ 85,510 ರೂ. ನಿಂದ 1,11,280 ರೂ.ವರೆಗಿದೆ.