Advertisement

ಸೆಲ್ಫಿಗಾಗಿ ಕಿರುತೆರೆ ಹ್ಯಾಂಡ್‌ಸಮ್‌ ಹೀರೋ ಮೇಲೆ ಹಲ್ಲೆ! 

12:02 PM Dec 08, 2017 | Team Udayavani |

ಬೆಂಗಳೂರು: ಕನ್ನಡದ ಖಾಸಗಿ ಚಾನೆಲ್‌ನಲ್ಲಿ ಪ್ರಸಾರವಾಗುತ್ತಿರುವ ಜನಪ್ರಿಯ ‘ನಾಗಿಣಿ’ ಧಾರಾವಾಹಿಯ ನಟ ದೀಕ್ಷಿತ್‌ ಶೆಟ್ಟಿ ಅವರನ್ನು ಮೂವರು ಹಿಂಬಾಲಿಸಿ ಹಲ್ಲೆ ನಡೆಸಿ, ಕಾರಿನ ಗಾಜು ಓಡೆದ ಘಟನೆ ಗುರುವಾರ ತಡರಾತ್ರಿ   ವಿಜಯನಗರದ ಮಾರುತಿ ಚಿತ್ರಮಂದಿರದ ಬಳಿ ನಡೆದಿದೆ.

Advertisement

ಪಲ್ಸರ್‌ ಬೈಕ್‌ನಲ್ಲಿ ಬಂದಿದ್ದ ಮೂವರು  ಯುವಕರು ದೀಕ್ಷಿತ್‌ ಕಾರನ್ನು ಹಿಂಬಾಲಿಸಿ  ಸೆಲ್ಫಿ ಕೇಳಿದ್ದು ನಿರಾಕರಿಸಿದಾಗ ಹಲ್ಲೆ ನಡೆಸಿ,ಕಾರಿನ ಹಿಂಬದಿಯ ಗಾಜು ಹಾನಿಗೈದು ಪರಾರಿಯಾಗಿದ್ದಾರೆ. 

ಈ ಸಂಬಂಧ ದೀಕ್ಷಿತ್‌ ವಿಜಯನಗರ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಮುಂದುವರಿಸಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next