ಗುವಾಹಟಿ : ಇಲ್ಲಿನ ಗಣೇಶಗುಡಿ ಪ್ರದೇಶದಲ್ಲಿ ಟಿವಿ ಸುದ್ದಿ ವಾಹಿನಿಯೊಂದರ ಪತ್ರಕರ್ತನ ಮೇಲೆ ಹೊಟೇಲೊಂದರಲ್ಲಿ ಚೂರಿಯಿಂದ ಮಾರಣಾಂತಿಕ ದಾಳಿ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ನ್ಯೂಸ್ 18 ಸುದ್ದಿ ವಾಹಿನಿಯ ಪತ್ರಕರ್ತ ಚಕ್ರಪಾಣಿ ಪರಾಶರ ಅವರು ನಿನ್ನೆ ಗುರುವಾರ ಕರ್ತವ್ಯದಲ್ಲಿದ್ದಾಗ ಹೊಟೇಲಿನ ಕೆಲ ಕಾರ್ಮಿಕರು ಅವರನ್ನು ಚೂರಿಯಿಂದ ಇರಿದು ಮಾರಣಾಂತಿಕವಾಗಿ ಗಾಯಗೊಳಿಸಿದರು ಎಂದು ಪೊಲೀಸರು ತಿಳಿಸಿದ್ದಾರೆ. ಪೊಲೀಸರು ಘಟನೆ ಸಂಬಂಧ ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ.
ದೇಹದ ವಿವಿಧ ಭಾಗಗಳಿಗೆ ಇರಿಯಲ್ಪಟ್ಟಿರುವ ಪರಾಶರ ಅವರು ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ; ಆದರೆ ಅವರ ಜೀವಾಪಾಯದಿಂದ ಪಾರಾಗಿರುವುದಾಗಿ ವೈದ್ಯರು ತಿಳಿಸಿದ್ದಾರೆ ಎಂದು ನ್ಯೂಸ್ 18 ಸಂಪೂದಕ ಸಂಜಯ್ ಪಾಲ್ ಹೇಳಿದ್ದಾರೆ.