Advertisement

TV-D1: ಗಗನಯಾತ್ರಿಕರ ಸುರಕ್ಷೆಗಾಗಿ ಟಿವಿ-ಡಿ1ಪ್ರಯೋಗ

12:27 AM Oct 21, 2023 | Team Udayavani |

ಆಂಧ್ರದ ಶ್ರೀಹರಿಕೋಟಾದಲ್ಲಿನ ಸತೀಶ್‌ ಧವನ್‌ ಬಾಹ್ಯಾಕಾಶ ಕೇಂದ್ರ ಶನಿವಾರ ಬೆಳಗ್ಗೆ 8 ಗಂಟೆಗೆ ಸರಿಯಾಗಿ ಇಸ್ರೋ ತನ್ನ ಗಗನಯಾನ ಯೋಜನೆಯ ಟಿವಿ-ಡಿ1 ಮಿಷನ್‌ನ ಪರೀಕ್ಷಾರ್ಥ ಪ್ರಯೋಗ ನಡೆಸಲಿದೆ. ಈ ಪ್ರಕ್ರಿಯೆಯು ಕ್ರೂ ಎಸ್ಕೇಪ್‌ ಸಿಸ್ಟಂ(ಸಿಇಎಸ್‌)ನ ಕಾರ್ಯಕ್ಷಮತೆಯನ್ನು ದೃಢಪಡಿಸಲಿದ್ದು, ಸಂಭಾವ್ಯ ದುರಂತದ ವೇಳೆ ಗಗನಯಾತ್ರಿಗಳನ್ನು ಪ್ರಾಣಾಪಾಯದಿಂದ ರಕ್ಷಿಸುವಲ್ಲಿ ಇದು ಪ್ರಮುಖ ಪಾತ್ರ ವಹಿಸಲಿದೆ. ಈ ಪರೀಕ್ಷೆ ಕುರಿತು ಒಂದಿಷ್ಟು ಮಾಹಿತಿ ಇಲ್ಲಿದೆ.

Advertisement

ಗಗನಯಾನ ಯೋಜನೆ
ಇದು ಭಾರತೀಯ ಬಾಹ್ಯಾಕಾಶ ಸಂಶೋಧನ ಸಂಸ್ಥೆಯ ಮಹತ್ವಾಕಾಂಕ್ಷಿ ಯೋಜನೆಯಾಗಿದೆ. 3 ದಿನಗಳ ಮಟ್ಟಿಗೆ ಗಗನಯಾತ್ರಿಗಳನ್ನು ಬಾಹ್ಯಾಕಾಶಕ್ಕೆ ಕಳುಹಿಸಿ, ಅನಂತರ ಅವರನ್ನು ಸುರಕ್ಷಿತವಾಗಿ ಭೂಮಿಗೆ ವಾಪಸ್‌ ಕರೆತರುವ ಯೋಜನೆಯಿದು. ಎಲ್ಲವೂ ಅಂದುಕೊಂಡಂತೆ ನಡೆದರೆ, 2025ರ ಮೊದಲಾರ್ಧದಲ್ಲೇ ಗಗನಯಾನ ಯೋಜನೆಯ ಮಾನವಸಹಿತ ಗಗನನೌಕೆಯು ಉಡಾವಣೆಯಾಗಲಿದೆ. ಅದಕ್ಕೂ ಮುನ್ನ, ಹಲವು ಹಂತಗಳ ಪರೀಕ್ಷೆಗಳು, ಪ್ರಯೋಗಾರ್ಥ ಉಡಾವಣೆಗಳು ನಡೆಯಲಿವೆ.

ಯಾಕೆ ಬೇಕು?
ಈಗ ಒಂದು ಸಾಧ್ಯತೆಯನ್ನು ಊಹಿಸಿಕೊಳ್ಳೋಣ: ಇಸ್ರೋದ ಮಹತ್ವಕಾಂಕ್ಷಿ ಯೋಜನೆಯಂತೆ, ಗಗನಯಾತ್ರಿಗಳನ್ನು ಹೊತ್ತ ನೌಕೆಯು ನಭಕ್ಕೆ ಚಿಮ್ಮುತ್ತದೆ. ನೌಕೆ ಉಡಾವಣೆಯಾದ ಸ್ವಲ್ಪ ಹೊತ್ತಲ್ಲೇ ಏಕಾಏಕಿ ಸಮಸ್ಯೆ ಕಾಣಿಸಿಕೊಂಡು ನೌಕೆಯು ಪತನಗೊಳ್ಳುವ ಹಂತಕ್ಕೆ ತಲುಪುತ್ತದೆ ಎಂದಿಟ್ಟುಕೊಳ್ಳೋಣ. ಅಂಥ ಸಂದರ್ಭದಲ್ಲಿ ನೌಕೆಗೆ ಬೆಂಕಿ ಹತ್ತಿಕೊಂಡು, ಅದರೊ ಳಗಿದ್ದ ಗಗನಯಾತ್ರಿಗಳೆಲ್ಲರೂ ಸಜೀವ ದಹನವಾಗುತ್ತಾರೆ. ಈ ಹಿಂದೆಯೂ ಇಂತಹ ದುರ್ಘ‌ಟನೆಗಳು ನಡೆದಿವೆ. ಈ ರೀತಿ ಆಗುವುದನ್ನು ತಪ್ಪಿಸಲು ಅಂದರೆ ಯಾವುದಾದರೂ ಅವಘಡ ಸಂಭವಿಸಿದಾಗ ಗಗನಯಾತ್ರಿಗಳನ್ನು ಪ್ರಾಣಾಪಾ ಯದಿಂದ ರಕ್ಷಿಸಲೆಂದೇ ಟಿವಿ-ಡಿ1 ಮಿಷನ್‌ ಅನ್ನು ಕೈಗೆತ್ತಿಕೊಳ್ಳಲಾಗುತ್ತಿದೆ. ಇದು ಗಗನಯಾನಿಗಳು ನೌಕೆಯಿಂದ ತಪ್ಪಿಸಿಕೊಂಡು ಭೂಮಿಗೆ ವಾಪಸಾಗಲು ನೆರವಾಗಲಿದೆ.

ಟಿವಿ-ಡಿ1 ಮತ್ತು ಅದರ ಮಹತ್ವ
ಹೊಸದಾಗಿ ಅಭಿವೃದ್ಧಿಪಡಿಸಲಾದ ಪರೀಕ್ಷಾರ್ಥ ನೌಕೆಯನ್ನು ಹೊಂದಿರುವ ಕ್ರೂé ಎಸ್ಕೇಪ್‌ ಸಿಸ್ಟಂ(ಸಿಇಎಸ್‌) ಪರೀಕ್ಷಾರ್ಥ ಉಡಾವಣೆಯು ಶನಿವಾರ ನಡೆಯಲಿದೆ. ಇದನ್ನು ಟಿವಿ-ಡಿ1 ಅಥವಾ ಫ್ಲೈಟ್‌ ಟೆಸ್ಟ್‌ ವೆಹಿಕಲ್‌ ಅಬಾರ್ಟ್‌ ಮಿಷನ್‌-1 ಎಂದೂ ಕರೆಯುತ್ತಾರೆ. ಈ ಅಲ್ಪಾವ ಧಿಯ ಟಿವಿ-ಡಿ1 ಯೋಜನೆಯು ಗಗನಯಾತ್ರಿ ಗಳ ರಕ್ಷಣ ವ್ಯವಸ್ಥೆ (ಕ್ರೂ ಎಸ್ಕೇಪ್‌ ಸಿಸ್ಟಂ)ಯ ಪರಿಣಾಮಕತ್ವ ಮತ್ತು ಕಾರ್ಯಕ್ಷಮತೆಯನ್ನು ದೃಢಪಡಿಸಲಿದೆ. ಈ ಪ್ರಕ್ರಿಯೆಯ ವೇಳೆ ಕ್ರೂé ಮಾಡ್ನೂಲ್‌ ಗಾಳಿಯಲ್ಲೇ ಇರುತ್ತದೆ. ಕ್ರೂ ಎಸ್ಕೇಪ್‌ ವ್ಯವಸ್ಥೆ ಮಾತ್ರ ಪ್ರತ್ಯೇಕಗೊಂಡು ಸಮುದ್ರದಲ್ಲಿ ಇಳಿಯುತ್ತದೆ.

ಟಿವಿ-ಡಿ1 ವೇಳೆ ಒತ್ತಡರಹಿತ ಕ್ರೂ ಮಾಡ್ನೂಲ್‌ ಬಳಕೆ
ಟಿವಿ-ಡಿ1 ಪರೀಕ್ಷೆ ವೇಳೆ, ಒತ್ತಡರಹಿತ ಕ್ರೂ ಮಾಡ್ನೂಲ್‌ ಅನ್ನು ಬಳಸಲಾಗುತ್ತದೆ. ಆದರೆ ಗಗನಯಾನದ ಮಾನವಸಹಿತ ನೌಕೆಯ ಪರೀಕ್ಷೆ ವೇಳೆ ಒತ್ತಡವಿರುವ ಕ್ರೂé ಮಾಡ್ನೂಲ್‌ ಅನ್ನು ಬಳಸಲಾಗುತ್ತದೆ. ಅದರೊಳಗೆ ಭೂಮಿಯಲ್ಲಿ ಎಷ್ಟು ಒತ್ತಡದ ಸ್ಥಿತಿಯಿರುತ್ತದೋ, ಅಷ್ಟೇ ಇರುವಂತೆ ನೋಡಿಕೊಳ್ಳಲಾಗುತ್ತದೆ. ಕ್ರೂé ಮಾಡ್ನೂಲ್‌ನ ಒತ್ತಡಸಹಿತ ಮತ್ತು ಒತ್ತಡರಹಿತ ಆವೃತ್ತಿ ಎರಡೂ ಸಮಾನ ದ್ರವ್ಯರಾಶಿ ಮತ್ತು ಗಾತ್ರ ಹೊಂದಿರುತ್ತವೆ.

Advertisement

ಹಿಂದಿನ ದುರಂತದಿಂದ ಕಲಿತ ಪಾಠ
ಅದು 1967ರ ಜನವರಿ 27. ನಾಸಾವು ತನ್ನ ಅಪೋಲೋ 1 ಯೋಜನೆಯ ಮೊದಲ ಮಾನವಸಹಿತ ಕ್ಯಾಪ್ಸೂéಲ್‌ನ ಪರೀಕ್ಷಾರ್ಥ ಪ್ರಯೋಗ ನಡೆಸುತ್ತಿತ್ತು. ಮೂವರು ಗಗನಯಾತ್ರಿಗಳು(ಗಸ್‌ ಗ್ರಿಸ್ಸಂ, ಎಡ್‌ ವೈಟ್‌ ಮತ್ತು ರೋಗರ್‌ ಚಾಫಿ) ಎಎಸ್‌-204 ಕಮಾಂಡ್‌/ಸರ್ವಿಸ್‌ ಮಾಡ್ನೂಲ್‌ನೊಳಗೆ ಇದ್ದರು. ಈ ಮಾಡ್ನೂಲ್‌ ಇವರನ್ನು ಚಂದ್ರನಲ್ಲಿಗೆ ಒಯ್ಯಬೇಕಿತ್ತು. ಪರೀಕ್ಷಾರ್ಥ ಉಡಾವಣೆಯಾಗಿ ಇನ್ನೇನು ಅವರು ಜೀವರಕ್ಷಕ ವ್ಯವಸ್ಥೆಗೆ ಸಂಪರ್ಕ ಹೊಂದಬೇಕು ಎನ್ನುವಷ್ಟರಲ್ಲೇ ಕ್ಯಾಪ್ಸೂಲ್‌ಗೆ ಬೆಂಕಿ ಹೊತ್ತಿಕೊಂಡಿತು. ನಾಸಾವು ತನ್ನ ಮೂವರು ಗಗನಯಾತ್ರಿಗಳನ್ನೂ ಕಳೆದುಕೊಂಡಿತು. ಆ ಬಳಿಕ ಎಚ್ಚೆತ್ತುಕೊಂಡ ನಾಸಾ, ತನ್ನ ಬಾಹ್ಯಾಕಾಶ ನೌಕೆಯ ಸುರಕ್ಷೆಯ ಬಗ್ಗೆ ಗಮನ ಹರಿಸಲಾರಂಭಿಸಿತು. ಬಳಿಕ ಎಲ್ಲ ದೇಶಗಳ ಬಾಹ್ಯಾಕಾಶ ಸಂಸ್ಥೆಗಳೂ ಸಂಭಾವ್ಯ ದುರಂತದ ವೇಳೆ ಗಗನಯಾತ್ರಿಗಳನ್ನು ರಕ್ಷಿಸುವ ವ್ಯವಸ್ಥೆಗಳನ್ನು ಅಭಿವೃದ್ಧಿಪಡಿಸಿತು. ಅದರ ಭಾಗವೇ ಕ್ರೂé ಎಸ್ಕೇಪ್‌ ಮಾಡ್ನೂಲ್‌.

ಏಕೆ ಮಹತ್ವದ್ದು?
ಗಗನಯಾನದ ಟಿವಿ-ಡಿ1 ಯೋಜನೆಯು ಯಶಸ್ವಿಯಾದರೆ, ಇಸ್ರೋ ಮುಂದಿನ ಹಂತದ ಪ್ರಕ್ರಿಯೆಗಳನ್ನು ಕೈಗೊಳ್ಳಲು ಸಾಧ್ಯವಾಗುತ್ತದೆ. ಕ್ರೂé ಮಾಡ್ನೂಲ್‌, ಕ್ರೂé ಎಸ್ಕೇಪ್‌ ಸಿಸ್ಟಂ ಮತ್ತು ಪ್ರೊಪಲ್ಶನ್‌ ಸಿಸ್ಟಂಗಳು ಭವಿಷ್ಯದ ಮಾನವರಹಿತ ಮತ್ತು ಮಾನವಸಹಿತ ಗಗನಯಾನ ಯೋಜನೆಗಳನ್ನು ನಡೆಸುವ ಕಾರ್ಯಕ್ಷಮತೆ ಹೊಂದಿವೆ ಎಂಬುದು ಇದರಿಂದ ದೃಢವಾಗಲಿದೆ.

ಕಠಿನ ತರಬೇತಿ
ಗಗನಯಾನ ಯೋಜನೆಯನ್ವಯ ಒಟ್ಟು ಎಷ್ಟು ಗಗನಯಾತ್ರಿಗಳು ಬಾಹ್ಯಾಕಾಶದತ್ತ ಪ್ರಯಾಣ ಬೆಳೆಸಲಿದ್ದಾರೆ ಎಂಬ ಮಾಹಿತಿಯನ್ನು ಇಸ್ರೋ ಹೊರಹಾಕಿಲ್ಲ. ಆದರೆ ಒಂದು ಮೂಲದ ಪ್ರಕಾರ, ಇಸ್ರೋ ಮೂವರು ಗಗನಯಾತ್ರಿಗಳನ್ನು 400 ಕಿ.ಮೀ. ಕಕ್ಷೆಗೆ ಕಳುಹಿಸುವ ಯೋಜನೆಯನ್ನು ಹಾಕಿಕೊಂಡಿದೆ. ಸದ್ಯ ನಾಲ್ವರು ಗಗನಯಾತ್ರಿಗಳು ಬೆಂಗಳೂರಿನ ಗಗನಯಾತ್ರಿ ತರಬೇತಿ ಕೇಂದ್ರದಲ್ಲಿ ನಿರ್ದಿಷ್ಟ ತರಬೇತಿಯನ್ನು ಪಡೆಯುತ್ತಿದ್ದಾರೆ. ವಾಯುಪಡೆಯ 60 ಮಂದಿ ಟೆಸ್ಟ್‌ ಪೈಲಟ್‌ಗಳ ಪೈಕಿ ಇವರನ್ನು ಆಯ್ಕೆ ಮಾಡಲಾಗಿದೆ. ಈ ನಾಲ್ವರ ಗುರುತನ್ನು ರಹಸ್ಯವಾಗಿ ಇಡಲಾಗಿದೆ. ಇವರಿಗೆ ಥಿಯರಿ ಕೋರ್ಸ್‌ಗಳು, ದೈಹಿಕ ಫಿಟ್ನೆಸ್‌ ತರಬೇತಿ, ಸಿಮ್ಯುಲೇಟರ್‌ ತರಬೇತಿ, ಫ್ಲೈಟ್‌ ಸೂಟ್‌ ತರಬೇತಿಯನ್ನು ನೀಡಲಾಗಿದೆ.

ಇಸ್ರೋ ಮತ್ತು ಐಐಎಸ್‌ಸಿ ಬೋಧಕ ವರ್ಗವು ಸುಮಾರು 200 ಉಪನ್ಯಾಸಗಳನ್ನು ನೀಡಿದೆ. 2020ರಲ್ಲಿ ಈ ನಾಲ್ವರನ್ನು ರಷ್ಯಾಕ್ಕೆ ಕಳುಹಿಸಿ, ಗಗರಿನ್‌ ಕಾಸ್ಮೋನಾಟ್‌ ಟ್ರೈನಿಂಗ್‌ ಸೆಂಟರ್‌ನಲ್ಲಿ ಜೆನೆರಿಕ್‌ ಸ್ಪೇಸ್‌ ಫ್ಲೈಟ್‌ ತರಬೇತಿ ನೀಡಲಾಗಿದೆ. ಎಂಜಿನಿಯರಿಂಗ್‌ ವಿಭಾಗಗಳಲ್ಲಿನ ಥಿಯರಿ ಕೋರ್ಸ್‌ಗಳು, ಗಗನಯಾನ ನೌಕೆಯ ವ್ಯವಸ್ಥೆ, ಏರೋ ಮೆಡಿಕಲ್‌ ತರಬೇತಿ, ರಿಕವರಿ ಮತ್ತು ಬದುಕುವ ಕಲೆ, ಪ್ಯಾರಾಬಾಲಿಕ್‌ ಫ್ಲೈಟ್‌ ಮೂಲಕ ಮೈಕ್ರೋ ಗ್ರಾವಿಟಿ ಕುರಿತು ಮಾಹಿತಿ ಮಾತ್ರವಲ್ಲದೇ ಯೋಗವನ್ನು ಕೂಡ ತರಬೇತಿ ಅವಧಿಯಲ್ಲಿ ಕಲಿಸಿಕೊಡಲಾಗಿದೆ.

 

Advertisement

Udayavani is now on Telegram. Click here to join our channel and stay updated with the latest news.

Next