Advertisement

ತಮಿಳು ಟಿವಿ ನಟಿ ಪ್ರಿಯಾಂಕಾ ಆತ್ಮಹತ್ಯೆ, ಪತಿಯ ವಿಚಾರಣೆ

05:35 PM Jul 18, 2018 | udayavani editorial |

ಚೆನ್ನೈ : ಪತಿಯೊಂದಿಗಿನ ಭಿನ್ನಾಭಿಪ್ರಾಯದ ಕಾರಣ 32ರ ಹರೆಯದ ತಮಿಳು ಟಿವಿ ನಟಿ ಪ್ರಿಯಾಂಕಾ ಆತ್ಮಹತ್ಯೆ ಮಾಡಿಕೊಂಡಿದ್ದು ಪ್ರಕರಣದ ತನಿಖೆ ನಡೆಸುತ್ತಿರುವ ಪೊಲೀಸರು ಇದೀಗ ಆಕೆಯ ಮೂರು ವರ್ಷಗಳ ದಾಂಪತ್ಯದ ಪತಿಯನ್ನು ಪ್ರಶ್ನಿಸುತ್ತಿರುವುದಾಗಿ ವರದಿಯಾಗಿದೆ.

Advertisement

ನಟಿಯ ಮನೆಗೆ ಇಂದು ಬೆಳಗ್ಗೆ ಮನೆ ಕೆಲಸದಾಕೆ ಬಂದು ಬಾಗಿಲು ತಟ್ಟಿದಾಗ ಒಳಗಿಂದ ಯಾವುದೇ ಉತ್ತರ ಬರಲಿಲ್ಲ. ಆಗ ಆಕೆ  ಕಿಟಕಿಯ ಮೂಲಕ ಇಣುಕಿ ನೋಡಿದಾಗ ನಟಿ ಪ್ರಿಯಾಂಕಾ ಅವರ ದೇಹ ನೇಣಿನಲ್ಲಿ ನೇತಾಡುತ್ತಿದ್ದುದು ಕಂಡುಬಂದಿತ್ತು. ಒಡನೆಯೇ ಆಕೆ ವಿಷಯವನ್ನು ನೆರೆಕರೆಯವರಿಗೆ ತಿಳಿಸಿದಾಗ ಅವರು ಪೊಲೀಸರಿಗೆ ಮಾಹಿತಿ ನೀಡಿದರು. 

ಪ್ರಿಯಾಂಕಾ ಅವರು ಆತ್ಮಹತ್ಯೆ ಮಾಡಿಕೊಂಡಾಗ ಆಕೆಯ ಪತಿ ಮನೆಯಲ್ಲಿ ಇರಲಿಲ್ಲ. ಪ್ರಿಯಾಂಕಾ ಅವರ ತಂದೆ ತಾಯಿ ಇರುವುದು ಮಧುರೆಯಲ್ಲಿ. ಅವರಿಗೆ ವಿಷಯ ತಿಳಿಸಲಾಗಿದೆ. ಮೃತ ದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. 

ನಟಿ ಪ್ರಿಯಾಂಕಾ ಅವರು ಅನೇಕ ತಮಿಳು ಟಿವಿ ಸೀರಿಯಲ್‌ಗ‌ಳಲ್ಲಿ ನಟಿಸಿದ್ದಾರೆ. ಅವುಗಳಲ್ಲಿ ವಂಶಂ ಮುಖ್ಯವಾದದ್ದು. ಇದರಲ್ಲಿ ಆಕೆ ಬಾಹುಬಲಿ ಖ್ಯಾತಿಯ ರಮ್ಯ ಕೃಷ್ಣ ಜತೆಗೆ ನಟಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next