Advertisement

Tv Actor: ಗೆಳತಿಗೆ ಲೈಂಗಿಕ ಕಿರುಕುಳ ನೀಡಿ ಕೊಲೆ ಬೆದರಿಕೆ; ಖ್ಯಾತ ಕಿರುತೆರೆ ನಟ ಅರೆಸ್ಟ್

03:35 PM Dec 27, 2024 | Team Udayavani |

ಬೆಂಗಳೂರು: ಲೈಂಗಿಕ ಕಿರುಕುಳ ಆರೋಪ ಕೇಳಿಬಂದ ಹಿನ್ನೆಲೆ ಬೆಂಗಳೂರಿನಲ್ಲಿ ಕಿರುತೆರೆ ನಟನೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ.

Advertisement

ಚರಿತ್ ಬಾಳಪ್ಪ(TV actor Charith Balappa) ಬಂಧಿತ ಕಿರುತೆರೆ ನಟ.

ಕನ್ನಡದ ʼಮುದ್ದುಲಕ್ಷ್ಮೀʼ ಸೇರಿದಂತೆ ತೆಲುಗಿನ ಹಲವು ಧಾರಾವಾಹಿಗಳಲ್ಲಿ ನಟಿಸಿ ಕಿರುತೆರೆ ಲೋಕದಲ್ಲಿ ಗಮನ ಸೆಳೆದಿರುವ ಚರಿತ್‌ ಬಾಳಪ್ಪ ವಿರುದ್ಧ ಲೈಂಗಿಕ ಕಿರುಕುಳ ಆರೋಪ ಕೇಳಿಬಂದ ಹಿನ್ನೆಲೆ ಅವರನ್ನು ಆರ್​ಆರ್ ನಗರ ಠಾಣೆಯ ಪೊಲೀಸರು ಬಂಧಿಸಿರುವುದಾಗಿ ವರದಿಯಾಗಿದೆ.

ಪ್ರೀತಿಸುವ ನಾಟಕವಾಡಿ ಪರಿಚಯವಿರುವ ಗೆಳತಿಗೆ ಚರಿತ್‌ ದೈಹಿಕ ಸಂಪರ್ಕಕ್ಕೆ ಒತ್ತಾಯಿಸಿ ಲೈಂಗಿಕ ಕಿರುಕುಳ ನೀಡಿದ್ದಾನೆ ಎನ್ನಲಾಗಿದೆ. ಯುವತಿ ವಾಸಿಸುತ್ತಿದ್ದ ಮನೆಗೆ ನುಗ್ಗಿ ಚರಿತ್‌ ಕಿರುಕುಳ ನೀಡಿದ್ದಾನೆ ಎಂದು ದೂರಿನಲ್ಲಿ ಯುವತಿ ಹೇಳಿದ್ದಾಳೆ.

Advertisement

ಇದಲ್ಲದೆ ಯುವತಿಯ ಬಳಿ ಚರಿತ್‌ ಹಣಕ್ಕೆ ಬೇಡಿಕೆ ಇಟ್ಟಿದ್ದಾನೆ. ಹಣ ಕೊಡದಿದ್ದರೆ ಖಾಸಗಿ ವಿಡಿಯೋ, ಫೋಟೋಗಳನ್ನು ಹರಿಬಿಡುವ ಬೆದರಿಕೆಯನ್ನು ಚರಿತ್‌ ಹಾಕಿದ್ದಾನೆ ದೂರಿನಲ್ಲಿ ಉಲ್ಲೇಖಿಸಿದ್ದಾಳೆ.

ಚರಿತ್‌ ವಿರುದ್ಧ ಲೈಂಗಿಕ ಕಿರುಕುಳ, ಹಲ್ಲೆ ಹಾಗೂ ಕೊಲೆಯ ಆರೋಪ ಕೇಳಿಬಂದಿದೆ. ಚರಿತ್‌ ಈಗಾಗಲೇ ಮದುವೆಯಾಗಿ ವಿಚ್ಚೇದನ ಪಡೆದಿದ್ದಾರೆ. ವಿಚ್ಚೇದನದ ಬಳಿಕವೂ ಮಾಜಿ ಪತ್ನಿಯ ಜತೆ ಹಲವು ಬಾರಿ ಚರಿತ್‌ ಕಿರಿಕ್‌ ಮಾಡಿಕೊಂಡಿದ್ದರು. ಈ ಹಿನ್ನೆಲೆಯಲ್ಲಿ ಅವರ ಮಾಜಿ ಪತ್ನಿಯೂ ಚರಿತ್‌ ಮೇಲೆ ದೂರು ದಾಖಲಿಸಿದ್ದರು ಎನ್ನಲಾಗಿದೆ.

ವಿಚ್ಛೇದನ ಪರಿಹಾರ ಹಣಕ್ಕೆ ನೋಟಿಸ್‌ ಕಳುಹಿಸಿದ್ದಕ್ಕೆ ಮಾಜಿ ಪತ್ನಿಗೆ ಚರಿತ್‌ ಬೆದರಿಕೆ ಹಾಕಿದ್ದರು, ಈ ಹಿನ್ನೆಲೆಯಲ್ಲಿಅವರ  ವಿರುದ್ಧ ಕಳೆದ ಜೂನ್ ತಿಂಗಳಲ್ಲಿ ಸರ್ಜಾಪುರ ಪೊಲೀಸ್ ಠಾಣೆಯಲ್ಲಿ‌ ದೂರು ದಾಖಲಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next