Advertisement
ಉದ್ದೇಶಿತ 12 ಡೈರೆಕ್ಟ್-ಟು-ಹೋಂ (ಡಿಟಿಎಚ್) ಚಾನೆಲ್ ಗಳು ಒಂದೊಂದು ತರಗತಿಗೆ ಮೀಸಲಿರುತ್ತವೆ ಎಂದು ಸಚಿವಾಲಯ ತಿಳಿಸಿದೆ. ಈಗಾಗಲೇ ಆನ್‌ಲೈನ್ ಮೂಲಕ ಪಾಠ ನಡೆ ಯು ತ್ತಿದ್ದರೂ ಅಂತರ್ಜಾಲ ಸಂಪರ್ಕದ ಅಲಭ್ಯ ಮತ್ತು ನಿಧಾನ ಗತಿಯ ಇಂಟರ್ ನೆಟ್ ನಿಂದಾಗಿ ಲಕ್ಷಾಂ ತರ ವಿದ್ಯಾರ್ಥಿಗಳಿಗೆ ಅದು ತಲುಪುತ್ತಿಲ್ಲ. ಹೀಗಾಗಿ ಒನ್ ಕ್ಲಾಸ್, ಒನ್ ಚಾನೆಲ್ ಯೋಜನೆ ಆರಂಭಿಸಲಾಗಿದೆ.
ಶಾಲೆಗಳು ಎಂದು ಆರಂಭವಾಗುತ್ತವೆ ಎಂಬ ಅನಿಶ್ಚಿತತೆಯ ನಡುವೆ ಈ ಹೊಸ ಚಾನೆಲ್‌ಗಳು ಮಕ್ಕಳಿಗೆ ಮನೆ ಯಲ್ಲಿಯೇ ಕಲಿಕೆಯ ವಾತಾವರಣ ಸೃಷ್ಟಿಸಲಿವೆ. ಪ್ರತಿಯೊಂದು ಚಾನೆಲ್‌ನಲ್ಲಿ ಏನೇನು ವಿಷಯ ಇರ ಬೇಕೆಂದು ಶಿಕ್ಷಣ ಇಲಾಖೆ ನಿರ್ಧರಿಸಲಿದೆ. ಜತೆಗೆ ವಿಷಯ ಅಭಿವೃದ್ಧಿಪಡಿಸಲು ಎನ್‌ಸಿಇಆರ್‌ಟಿ ಮತ್ತು ಸಿಬಿಎಸ್‌ಇ ಸಂಸ್ಥೆಗಳ ತಜ್ಞರ ನೆರವು ಪಡೆಯಲು ಇಲಾಖೆ ಚಿಂತನೆ ನಡೆಸಿದೆ. 1ರಿಂದ 12ನೇ ತರಗತಿಗೆ ಮೀಸಲಾಗಿರುವ ಈ ಚಾನೆಲ್‌ಗಳು ಉಚಿತವಾಗಿರಲಿದ್ದು, ಇವು ಆರಂಭವಾದ ಬಳಿಕ ಕೇಬಲ್ ಆಪರೇಟರ್‌ಗೆ ತಿಳಿಸಿ ಸಂಪರ್ಕ ಪಡೆಯಬಹುದು.
Related Articles
Advertisement