Advertisement
ತಸರ್ ಅಥವಾ ತುಸ್ಸಾರ್ ರೇಷ್ಮೆ ಸೀರೆಗಳು ಜಾರ್ಖಂಡ್ ಮಹಿಳೆಯರ ವಿಶೇಷ ಸೀರೆಯ ವಿಧವಾಗಿವೆ. ಭಾರತದ ಅತ್ಯುತ್ತಮ ಸಾಂಪ್ರದಾಯಕ ಸೀರೆಗಳ ವಿನ್ಯಾಸದಲ್ಲಿ ತುಸ್ಸಾರ್ ಸಿಲ್ಕ್ ಸೀರೆಗಳು ಬಹು ಮಹತ್ವ ಪಡೆದಿವೆ. ಭಾರತದ ವಿವಿಧ ಭಾಗಗಳಲ್ಲಿ ಮಾತ್ರವಲ್ಲದೆ ಪಾಶ್ಚಿಮಾತ್ಯ ರಾಷ್ಟ್ರಗಳಲ್ಲೂ ಇಂದು ಈ ಸೀರೆ ಬೇಡಿಕೆ ಹೊಂದಿದೆ.
Related Articles
Advertisement
ಇದರ ವಿವಿಧ ವಿನ್ಯಾಸ ಹಾಗೂ ರಚನಾ ವೈವಿಧ್ಯದಿಂದಾಗಿ ಕಟಿಯಾ, ಗಿಚ್ಛಾ ಬಗೆಯ ತುಸ್ಸರ್ ರೇಶೆ¾ ಸೀರೆಗಳೂ ಜನಜನಿತವಾಗಿವೆ.
ತುಸ್ಸಾರ್ ಸೀರೆಗಳು ದೇಹವನ್ನು ತಂಪಾಗಿಸಿಡುವುದು ಈ ರೇಶೆ¾ ಸೀರೆಯ ವಿಶೇಷತೆ! ಈ ಸೀರೆಗೆ ತಯಾರಿಸುವ ಕಚ್ಚಾ ರೇಶೆ¾ಯು ಮಾತ್ರ “ತಂಪು’ ಗುಣವನ್ನು ಹೊಂದಿರುವುದಲ್ಲ- ಸೀರೆ ತಯಾರಿಸುವಾಗ ನಡುವೆ ಗಾಳಿಯಾಡುವಂತೆ ವಿನ್ಯಾಸ ಮಾಡಿರುತ್ತಾರೆ! ಆದ್ದರಿಂದ ಉಷ್ಣ ಪ್ರದೇಶಗಳಲ್ಲಿ, ಬೇಸಿಗೆಯಂತಹ ಉಷ್ಣತೆ ಅಧಿಕವಾಗಿರುವ ಕಾಲದಲ್ಲಿ ಈ ಸೀರೆ ಉಡಲೂ ಆರಾಮದಾಯಕ ಜೊತೆಗೆ ಅಂದಚಂದವೂ ಹೆಚ್ಚು !
ಆಧುನಿಕ ಕಾಲದಲ್ಲಿ ತುಸ್ಸಾರ್ ರೇಶೆ¾ ಬಟ್ಟೆಯ ಕುರ್ತಾ, ಕುರ್ತಿ, ಪೈಜಾಮಾ, ಸೆಲ್ವಾರ್ ಕಮೀಜ್‌ನಂತಹ ವಸ್ತ್ರಗಳನ್ನು ಧರಿಸುತ್ತಾರೆ. ಇದು ಪ್ರಾಚೀನ ಕಲಾತ್ಮಕ ಸೀರೆಯ ಆಧುನಿಕ ರೂಪವಾಗಿದೆ.
ಮದುವೆ ಹಾಗೂ ವಿಶೇಷ ಸಮಾರಂಭಗಳಲ್ಲಿ ತೊಡುವ ತುಸ್ಸಾರ್ ಸಿಲ್ಕ್ ಸೀರೆಗಳಿಗೆ ವೈಭವೋಪೇತ ಕಸೂತಿಯ ವಿನ್ಯಾಸಗಳನ್ನು , ಜರಿಯ ವಿಶಿಷ್ಟ ಅಂಚಿನ ಕಲಾತ್ಮಕತೆಯನ್ನು ಮೋತಿ, ಹರಳು ಇತ್ಯಾದಿಗಳಿಂದ ಅಲಂಕಾರವನ್ನೂ ಮಾಡಲಾಗುತ್ತದೆ.
ಭಾರತದ ಹಲವೆಡೆ ತುಸ್ಸಾರ್ ಸಿಲ್ಕ್ ಸೀರೆಯನ್ನು ವಧುವು ಮೆಚ್ಚಲು ಹಾಗೂ ಅಧಿಕವಾಗಿ ಧರಿಸುವ ಕಾರಣವೆಂದರೆ ವೈಭವೋಪೇತ ವಿನ್ಯಾಸವಿದ್ದರೂ ಸೀರೆ ಲಘುವಾಗಿ ಭಾರವನ್ನು ಹೊಂದಿರುವುದಿಲ್ಲದಿರುವುದು. ಈ ಸೀರೆ ಧರಿಸಿದರೆ ಕೆಲವು ಭಾರೀ ವಿನ್ಯಾಸದ, ಭಾರದ ಸೀರೆಗಳನ್ನು ಉಟ್ಟಂತೆ “ದಪ್ಪ’ವಾಗಿಯೂ ಕಾಣಿಸುವುದಿಲ್ಲ. ಆದ್ದರಿಂದ ಈ ಸೀರೆ ಇಂದಿನ ಜನಪ್ರಿಯ ಟ್ರೆಂಡ್!
ಮುಗಾ ತುಸ್ಸಾರ್ ಸೀರೆಯ ವೈವಿಧ್ಯವೆಂದರೆ ಅಸ್ಸಾಂನ ಮುಗಾ ರೇಶೆ¾ ಸೀರೆಯ ವಸ್ತ್ರ ಹಾಗೂ ಜಾರ್ಖಂಡ್‌ನ ತುಸ್ಸಾರ್ ರೇಶೆ¾ಯ ವಸ್ತ್ರದ ವಿನ್ಯಾಸವನ್ನು ಜೊತೆಗೂಡಿಸಿ ತಯಾರು ಮಾಡಲಾಗುತ್ತದೆ. ಆಧುನಿಕ ಭಾರತದಲ್ಲಿ ಈ ಸೀರೆಗಳಿಗೂ ಅಧಿಕ ಬೇಡಿಕೆ ಇದೆ. “ಸುಬರ್ಣರೇಖಾ’ ಜಾರ್ಖಂಡ್‌ನಲ್ಲಿ ಹರಿಯುವ ನದಿ ಹಾಗೂ ಜೀವನಾಡಿಯಾಗಿದ್ದು ಸುಬರ್ಣರೇಖಾ ಸಿಲ್ಕ್ ಸೀರೆಗಳೂ ಆಧುನಿಕ ಮೆರುಗಿನೊಂದಿಗೆ ಜಗತ್ತಿಗೆ ತೆರೆದುಕೊಂಡಿವೆ.
ಜಾರ್ಖಂಡ್‌ನ ತುಸ್ಸಾರ್ ಬಗೆಯ ಸೀರೆಗಳು ವಿಶ್ವಾದ್ಯಂತ ರಫ್ತಾಗುತ್ತವೆ.
ಬೇಡಿಕೆ ಹೆಚ್ಚುತ್ತಿರುವುದರಿಂದ ಈ ಕಲಾತ್ಮಕ ಸೀರೆಯ ಸಾಂಪ್ರದಾಯಕತೆಯನ್ನು , ಆಧುನಿಕತೆಯ ಮೆರುಗನ್ನು ಉಳಿಸಿ ಬೆಳೆಸಲು ಸರ್ಕಾರ ಹಾಗೂ ಹಲವು ಸಂಘಸಂಸ್ಥೆಗಳು ಸೀರೆಯ ನೇಯ್ಗೆಕಾರರಿಗೆ ವಿಧವಿಧದ ಸೌಲಭ್ಯ-ಪ್ರೋತ್ಸಾಹ ನೀಡುತ್ತಿವೆ.
ಈ ತುಸ್ಸಾರ್ ಸೀರೆ ಉಡುವಾಗ ಧರಿಸುವ ಆಭರಣಗಳಲ್ಲಿಯೂ ಜಾರ್ಖಂಡ್‌ನ ಜನಜೀವನದ ಸೊಗಡು ಹಾಗೂ ಅಂದ ಜೊತೆಗೂಡಿರುತ್ತದೆ.ಒಂದು ಪ್ರದೇಶದ ಸಾಂಪ್ರದಾಯಕ ಉಡುಗೆ-ತೊಡುಗೆ ಆ ಪ್ರದೇಶದ ಮೆರುಗನ್ನು ಹೆಚ್ಚಿಸುವುದರ ಜೊತೆಗೆ ಘನತೆಯನ್ನೂ ಸಾರುತ್ತವೆ, ಎನ್ನುವುದಕ್ಕೆ ಜಾರ್ಖಂಡ್‌ನ ತುಸ್ಸಾರ್ ಸೀರೆಯ ಜನಪ್ರಿಯ ಗಾಥೆ ಉದಾಹರಣೆಯಾಗಿದೆ.
ಹೌದು, ಭಾರತ ದೇಶ ವೈವಿಧ್ಯತೆಯಲ್ಲಿ ಏಕತೆಯನ್ನು ಸಾರುವ ಭೂಮಿ! ಭರತಭೂಮಿಯ ಪರಿಪೂರ್ಣ ಸಾರಸಂಗ್ರಹವನ್ನು ಆಸ್ವಾದಿಸಬೇಕೆಂದರೆ ಇಂತಹ ಪ್ರಾದೇಶಿಕ ಸೊಗಸು ಹಾಗೂ ಸಾಂಪ್ರದಾಯಕತೆಯನ್ನು ಹೊಕ್ಕು ನೋಡಬೇಕು!
-ಅನುರಾಧಾ ಕಾಮತ್