Advertisement

ಅನಾರೋಗ್ಯದಿಂದ ಗುರುವಾಯೂರು ದೇಗುಲದ ಆನೆ ಮೃತ

08:24 PM Mar 29, 2021 | Team Udayavani |

ತ್ರಿಶೂರ್‌: ಗುರುವಾಯೂರು ದೇವಸ್ಥಾನದಲ್ಲಿದ್ದ ಗುರುವಾಯೂರು ವಲಿಯ ಕೇಶವನ್‌ (52) ಎಂಬ ಆನೆ ಸೋಮವಾರ ಮೃತಪಟ್ಟಿದೆ.

Advertisement

ದುರ್ಮಾಂಸದ ಗೆಡ್ಡೆಯಿಂದ ಬಳಲುತ್ತಿದ್ದ ಆನೆಗೆ ಕಳೆದೆರಡು ವರ್ಷಗಳಿಂದ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ, ಆರೋಗ್ಯ ಸಮಸ್ಯೆಯಿಂದ ತುಂಬಾ ಬಳಲಿತ್ತು. ಕಳೆದರಡು ತಿಂಗಳಿನಿಂದ ತುಂಬಾ ದುರ್ಬಲವಾಗಿತ್ತು. ಸೋಮವಾರ ಬೆಳಗ್ಗೆ ಸುಮಾರು 11:30ರ ಸುಮಾರಿಗೆ ಆನೆ ಇಹಲೋಕ ತ್ಯಜಿಸಿತು ಎಂದು ಮೂಲಗಳು ತಿಳಿಸಿವೆ.

2000ರ ಮೇ 9ರಂದು ಗುರುವಾಯೂರು ದೇಗುಲದ ಅರ್ಚಕರಲ್ಲೊಬ್ಬರಾದ ನಾಕೇರಿ ಮನಾ ಎಂಬುವರು ಈ ಆನೆಯನ್ನು ದೇಗುಲಕ್ಕೆ ಕಾಣಿಕೆಯಾಗಿ ನೀಡಿದ್ದರು. ಸೌಮ್ಯ ಸ್ವಭಾವದ ಈ ಆನೆ, ಉತ್ಸವಗಳ ವೇಳೆ ಗುರುವಾಯೂರು ಕೃಷ್ಣನನ್ನು ವಿಗ್ರಹವಿರುವ ಅಂಬಾರಿಯನ್ನು ಹೊರುತ್ತಿದ್ದ ಆನೆ, ಎಲ್ಲಾ ಭಕ್ತಾದಿಗಳ ಕಣ್ಮಣಿಯೂ ಆಗಿತ್ತು.

ಇದನ್ನೂ ಓದಿ :ಕರುಣೆ ಮರೆತ ಖಾಕಿ : ತುಂಬು ಗರ್ಭಿಣಿಯನ್ನು 3 ಕಿ.ಮೀ ನಡೆಸಿದ ಮಹಿಳಾ ಪೊಲೀಸ್

Advertisement

Udayavani is now on Telegram. Click here to join our channel and stay updated with the latest news.

Next