ಚಿಕ್ಕಮಗಳೂರು : ಕೊಪ್ಪ ತಾಲೂಕಿನ ಜಯಪುರ ಸಮೀಪದ ಎಲೆಮಡಿಲು ಗ್ರಾಮದಲ್ಲಿ ಮಲೆನಾಡಿಗರ ನಿದ್ದೆ ಗೆಡಿಸಿದ್ದ ಒಂಟಿ ಸಲಗವನ್ನು ಹೆಣ್ಣಾನೆಗಳ ಪ್ರೇಮ ಪಾಶಕ್ಕೆ ಬೀಳಿಸಿ ಸೆರೆ ಹಿಡಿಯುವಲ್ಲಿ ಗುರುವಾರ ಅರಣ್ಯ ಅಧಿಕಾರಿಗಳು ಯಶಸ್ವಿಯಾಗಿದ್ದಾರೆ.
ಮೋಹಿನಿ ಮತ್ತು ಭಾನುಮತಿ ಎಂಬ ಹೆಣ್ಣಾನೆಗಳ ಹನಿ ಟ್ರ್ಯಾಪ್ ನಲ್ಲಿ ಹಾವೇರಿ ಟಸ್ಕರ್ ಅನ್ನು ಅರಣ್ಯಾಧಿಕಾರಿಗಳು ಖೆಡ್ಡಾಕ್ಕೆ ಬೀಳಿಸುವಲ್ಲಿ ಯಶಸ್ವಿಯಾಗಿದ್ದಾರೆ.
ನಾಲ್ಕೈದು ತಿಂಗಳಿಂದ ಮಲೆನಾಡಿಗರ ನಿದ್ದೆಗೆಡಿಸಿದ್ದ ಒಂಟಿ ಸಲಗವನ್ನು ಸೆರೆ ಹಿಡಿಯಲು, ಐದು ಸಾಕಾನೆಗಳ ಮೂಲಕ 6 ದಿನಗಳಿಂದ ಕಾರ್ಯಚರಣೆ ನಡೆಸಲಾಗಿತ್ತು. 40ಕ್ಕೂ ಹೆಚ್ಚು ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದರು.
ಹಗಲಲ್ಲಿ ದಾಂಧಲೆ ನಡೆಸಿ ಸಂಜೆ ಪ್ರಪಾತದ ಸ್ಥಳಕ್ಕೆ ಹೋಗುತ್ತಿದ್ದ ಸಲಗ ಕೊನೆಗೂ ಮೋಹಿನಿ ಎಂಬ ಹೆಣ್ಣಾನೆಯ ಪ್ರೇಮಪಾಶಕ್ಕೆ ಸಿಲುಕಿ ಸೆರೆಯಾಗಿದೆ.
ಮಲೆನಾಡಿಗರು ಸಲಗದ ಸೆರೆಯಿಂದ ನಿಟ್ಟುಸಿರು ಬಿಟ್ಟಿದ್ದಾರೆ.